ನಾಗಮಂಗಲ:ಇನಾಮ್ ಜಮೀನಿಗೆ ಅರ್ಚಕ ಮಾಲೀಕನಲ್ಲ ದೇವರು ಮಾಲೀಕ-ಇಲ್ಲಿನ ಅರ್ಚಕರು ಭಯಪಡುವ ಅಗತ್ಯವಿಲ್ಲ-ಕೆ.ಎನ್. ರಂಗಸ್ವಾಮಿ ಕದಬಹಳ್ಳಿ

ನಾಗಮಂಗಲ:ಸರ್ವೋಚ್ಚ ನ್ಯಾಯಾಲಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇನಾಮ್ ಜಮೀನಿಗೆ ಅರ್ಚಕ ಮಾಲೀಕನಲ್ಲ ದೇವರು ಮಾಲೀಕ ಎಂದು ತೀರ್ಪು ನೀಡಿದ್ದು ರಾಜ್ಯದ ಕಾನೂನುಗಳ ಪ್ರಕಾರ ಆ ತೀರ್ಪು ಇಲ್ಲಿಗೆ ಬಹುತೇಕ ಅನ್ವಯಿಸುವುದಿಲ್ಲ ಎಂದು ನಾಗಮಂಗಲ ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಮತ್ತು ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಕೆ.ಎನ್. ರಂಗಸ್ವಾಮಿ ಕದಬಹಳ್ಳಿ ಅವರು ತಿಳಿಸಿದರು.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು,

ಕರ್ನಾಟಕ ರಾಜ್ಯದಲ್ಲಿ ಹೊಸ ಮೈಸೂರು,ಹೈ ಕರ್ನಾಟಕ,ಬಾಂಬೆ,ಹಳೇ ಮೈಸೂರು,ಮದ್ರಾಸ್ ಕಾಯಿದೆ ಎಂದು ಐದು ರೂಪದ ಕಾಯಿದೆಗಳು ಜಾರಿಯಲ್ಲಿವೆ1955ರ ಇನಾಂ ಜಮೀನು ಕಾಯ್ದೆ 6 ಎ ಪ್ರಕಾರ ಅರ್ಚಕರುಗಳು ಇನಾಂ ಜಮೀನುಗಳಿಗೆ ಗೇಣಿದಾರನೆಂದು ಸರ್ಕಾರವು ಆದೇಶವನ್ನು ಮಾಡಿರುತ್ತದೆ.

ಸರ್ವೋಚ್ಚ ನ್ಯಾಯಾಲಯದ ಆದೇಶದ ಬಗ್ಗೆ ಕರ್ನಾಟಕ ರಾಜ್ಯದ ಸಂಘದ ಅಧ್ಯಕ್ಷರಾದ ವೆಂಕಟಾಚಲಯ್ಯನವರ ಹೋರಾಟದಿಂದ ನಾಗಮಂಗಲ ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಹೋರಾಟದಿಂದ ಈ ಸರ್ವೋಚ್ಚ ನ್ಯಾಯಾಲಯದ ಆದೇಶವು ಕೆಲವು ಜಮೀನುಗಳಿಗೆ ಮಾತ್ರ ಅನ್ವಯಿಸಬಹುದು. ಆದರೆ ಅರ್ಚಕರಿಗೆ 10 ಎನ್. ಸಿ.ಯಿಂದ ಆದೇಶವಾಗಿರುವ ಜಮೀನುಗಳಿಗೆ ಅರ್ಚಕರು ಒಡೆಯನಾಗಿರುತ್ತಾರೆ ಎಂದು ಸಂಬಂದಿಸಿದ ಇಲಾಖೆ ಆಯುಕ್ತರು ಆದೇಶವನ್ನು ಮಾಡಿದ್ದಾರೆ.

ಅರ್ಚಕರುಗಳು ಹಾಗು ಇನಾಂ ಜಮೀನನ್ನು ಖರೀದಿಸುವವರು ಭಯ ಮತ್ತು ಆತಂಕ ಪಡುವ ಅಗತ್ಯ ಇರುವುದಿಲ್ಲ. ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಇನಾಂ ಜಮೀನನ್ನು ದೇವರ ಹೆಸರಿಗೆ ಬರೆದು ಕೊಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಅರ್ಚಕರು ಯಾವುದೇ ಗೊಂದಲಕ್ಕೆ ಒಳಗಾಗದೆ ಇಲಾಖೆ ಆಯುಕ್ತರ ಆದೇಶದ ಪ್ರಕಾರ ದೇವರ ಹೆಸರಿಗೆ ಇನಾಂ ಜಮೀನನ್ನು ಬರೆದು ಕೊಡಲು ಅನ್ವಯಿಸುವುದಿಲ್ಲ ಎಂದು ಅರ್ಚಕರಿಗೆ ಧೈರ್ಯ ತುಂಬಿದರು.

ತಾಲ್ಲೂಕಿನಲ್ಲಿ ಮುಜರಾಯಿ ಇಲಾಖೆಗೆ ಸೇರಿದ 550 ದೇವಸ್ಥಾನಗಳಿದ್ದು, ಇದರಲ್ಲಿ ಸುಮಾರು 50ಕ್ಕೂ ಹೆಚ್ಚು ದೇವಸ್ಥಾನದ ಕಟ್ಟಡಗಳು ಬಿದ್ದು ಹೋಗುವ ಸ್ಥಿತಿಯಲ್ಲಿದೆ.

ಆದ್ದರಿಂದ ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಮುಜರಾಯಿ ಇಲಾಖೆ ಸಚಿವರು,ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಈ ದೇವಾಲಯದ ಕಟ್ಟಡಗಳ ಜೀರ್ಣೋದ್ಧಾರ ಮಾಡಿಸಿ ಕೊಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.

ಈ ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಮತ್ತು ನೌಕರರ ಕ್ಷೇಮಾಭಿವೃದ್ಧಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಡಿ.ಕೆ.ಶ್ರೀನಿವಾಸಮೂರ್ತಿ, ಸಂಘದ ಪದಾಧಿಕಾರಿಗಳಾದ ಕುಂಬಾರಕೊಪ್ಪಲು ಕುಮಾರ್, ಬ್ರಹ್ಮದೇವರಹಳ್ಳಿ ಚಂದ್ರು, ಕುಡುಗುಬಾಳು ಕೆ.ಎಸ್. ಪ್ರಕಾಶ್, ವೀರಸಂದ್ರ ಲಕ್ಷ್ಮಿನಾರಾಯಣ, ಕೆಲಗೆರೆ ಜನಾರ್ಧನ ಸೇರಿದಂತೆ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.

———-——–ರವಿ ಬಿ ಹೆಚ್

Leave a Reply

Your email address will not be published. Required fields are marked *

× How can I help you?