ಬಸವಕಲ್ಯಾಣ-ಅನುಭವ ಮೆಗಾಸಿಟಿ ನಿರ್ಮಾಣಕ್ಕೆ ಅಡಿಗಲ್ಲು-ವಚನ ಟಿ.ವಿ ಲೋಕಾರ್ಪಣಾ ಸಮಾರಂಭ

ಬಸವಕಲ್ಯಾಣ-ವಚನ ಸಮೂಹ ಸಂಸ್ಥೆ ಬಸವಕಲ್ಯಾಣದಲ್ಲಿ ಏರ್ಪಡಿಸಿದ್ದ ಅನುಭವ ಮೆಗಾಸಿಟಿ ಅಡಿಗಲ್ಲು ಹಾಗೂ ವಚನ ಟಿ.ವಿ ಲೋಕಾರ್ಪಣೆ ಸಮಾರಂಭದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ, ಚಲನಚಿತ್ರ ನಟಿ ಭವ್ಯ, ನಟ ನವೀನ ಶಂಕರ, ಬಸವ ಟಿ. ವಿ ಕೃಷ್ಣಪ್ಪ, ವಾತಡೆ ಫೌಂಡೇಷನ್ ಅಧ್ಯಕ್ಷ ಪ್ರದೀಪ ವಾತಾಡೆ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಕ್ಷೇತ್ರದ ಸಂಸದ ಜಗದೀಶ್ ಶೆಟ್ಟರ್, ಬಸವ ಕಲ್ಯಾಣ ಶಾಸಕ ಶರಣು ಸಲಗರ, ಹುಮನಾಬಾದ್ ಶಾಸಕ ಡಾ. ಸಿದ್ಧಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಮಾರುತಿರಾವ ಮೂಳೆ, ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಶ್ರೀ ಶಿವಾನಂದಮಹಾಸ್ವಾಮಿಗಳು, ನವಲಿಂಗ ಶರಣರು, ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು, ಡಾ. ಸಿದ್ಧರಾಮ ಶರಣರು, ವಚನ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಅಲ್ಲಮಪ್ರಭು ನಾವದಗೆರೆ, ಶಿವಕುಮಾರ ಸಾಲಿ, ಸಂಸ್ಥೆಯ ಬಾಬು ವಾಲಿ, ಪ್ರದೀಪ ವಿಸಾಜಿ, ಸಂಗಾರೆಡ್ಡಿ, ಪ್ರಕಾಶ ಗಂದಿಗುಡೆ ಉಪಸ್ಥಿತರಿದ್ದರು.

——-ಶಿವು ಕೋಟೆ

Leave a Reply

Your email address will not be published. Required fields are marked *

× How can I help you?