ಕೆ.ಆರ್.ಪೇಟೆ-ಆಟೋ ಚಾಲಕರು ಕನ್ನಡವನ್ನೇ ಉಸಿರನ್ನಾಗಿಸಿ ಕೊಂಡು ಬದುಕುತ್ತಿರುವ ಭಾವ ಜೀವಿಗಳು-ಆರ್.ಟಿ.ಓ ಮಲ್ಲಿಕಾರ್ಜುನ್

ಕೆ.ಆರ್.ಪೇಟೆ-ಆಟೋ ಚಾಲಕರ ಕನ್ನಡ ಪ್ರೇಮವು ಎಲ್ಲರಿಗೂ ಮಾದರಿಯಾಗಿದೆ.ಆಟೋ ಚಾಲಕರು ಕನ್ನಡದ ಕಟ್ಟಾಳುಗಳು ಮಾತ್ರವಲ್ಲದೆ ಕನ್ನಡವನ್ನೇ ಉಸಿರನ್ನಾಗಿಸಿಕೊಂಡು ಬದುಕುತ್ತಿರುವ ಭಾವ ಜೀವಿಗಳು ಎಂದು ರಾಜ್ಯ ಆರ್.ಟಿ.ಓ.ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಅಭಿಮಾನದಿಂದ ಹೇಳಿದರು.

ಅವರು ಕೆ.ಆರ್.ಪೇಟೆ ಪಟ್ಟಣದ ಶಿಕ್ಷಕರ ಭವನದ ಪಕ್ಕದಲ್ಲಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಗೂಡ್ಸ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಅನ್ನದಾನ ಸಮಾರಂಭದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಆಟೋ ಚಾಲಕರ ಕನ್ನಡ ಪ್ರೇಮವು ಎಲ್ಲರಿಗೂ ಮಾದರಿಯಾಗಿದ್ದು ಕನ್ನಡತನವನ್ನು ಮೈಗೂಡಿಸಿಕೊಂಡು ಕನ್ನಡವನ್ನೇ ಉಸಿರಾಡಿ ಜೀವಿಸುವ ಆಟೋ ಚಾಲಕರು ನಿಸ್ವಾರ್ಥ ಕನ್ನಡ ಸೇವಕರಾಗಿದ್ದಾರೆ ಎಂದು ಅಭಿಮಾನದಿಂದ ಹೇಳಿದ ಮಲ್ಲಿಕಾರ್ಜುನ ಗೂಡ್ಸ್ ಆಟೋ ಚಾಲಕರು ಗ್ರಾಮೀಣ ಪ್ರದೇಶದ ಜನರ ಆತ್ಮೀಯ ಬಂಧುಗಳoತೆ ಸೇವೆ ಸಲ್ಲಿಸುತ್ತಾ ಗ್ರಾಮೀಣ ಜನರ ಜೀವನಕ್ಕೆ ಆಸರೆಯಾಗಿದ್ದಾರೆ ಎಂದರು.

ಕನ್ನಡದ ನೆಲದಲ್ಲಿ ಕನ್ನಡಿಗರ ಉದಾಸೀನತೆ ಹಾಗೂ ಬೇಜವಾಬ್ಧಾರಿಯಿಂದಾಗಿ ಕನ್ನಡ ಭಾಷೆಯು ತನ್ನ ನೆಲದಲ್ಲಿಯೇ ಸಂಕುಚಿತವಾಗಿ ಅಪಾಯಕ್ಕೆ ಸಿಲುಕಿದೆ. ಕನ್ನಡಿಗರಾದ ನಾವು ನಮ್ಮ ನೆಲ, ಜಲ ಹಾಗೂ ಭಾಷೆಯ ಬಗ್ಗೆ ನಿರಭಿಮಾನಿಗಳಾಗದೇ ಕನ್ನಡವನ್ನು ಪೂಜಿಸಿ ಆರಾಧಿಸಬೇಕು. ಕನ್ನಡಿಗರು ನಾವೆನ್ನಲು ಹೆಮ್ಮೆಪಡಬೇಕು ಎಂದು ಕಿವಿಮಾತು ಹೇಳಿದರು.

ಶ್ರಮಜೀವಿಗಳಾದ ಗೂಡ್ಸ್ ಆಟೋ ಚಾಲಕರು ತಮ್ಮ ವಾಹನಗಳ ದಾಖಲೆಗಳನ್ನು ನಿಖರವಾಗಿ,ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಅಪಘಾತಗಳಿಂದ ಮುಕ್ತರಾಗಿ ವಾಹನ ಚಾಲನೆ ಮಾಡಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಹೆಚ್.ಟಿ.ಲೋಕೇಶ್, ಪುರಸಭೆ ಮುಖ್ಯಾಧಿಕಾರಿ ನಟರಾಜ್, ಪುರಸಭೆ ಸದಸ್ಯ ಬಸ್ ಸಂತೋಷ್‌ಕುಮಾರ್, ಗ್ರಾಮ ಪಂಚಾಯತ್ ಸದಸ್ಯ ಸಿದ್ದೇಶ್, ಪುರಸಭೆಯ ಕಂದಾಯ ಅಧಿಕಾರಿ ರವಿಕುಮಾರ್, ಆರೋಗ್ಯ ಪರಿವೀಕ್ಷಕ ಅಶೋಕ್, ನಿವೃತ್ತ ಶಿಕ್ಷಕರಾದ ರಂಗಸ್ವಾಮಿ, ಮಾದಯ್ಯ, ದಾಸೇಗೌಡ, ಕುವೆಂಪು ಟ್ರಸ್ಟಿನ ಅಧ್ಯಕ್ಷ ಕೆ.ಬಿ.ಸಿ ಮಂಜುನಾಥ್, ಆಸರೆ ಟ್ರಸ್ಟಿನ ಅಧ್ಯಕ್ಷ ಹೆಚ್.ಬಿ.ಮಂಜುನಾಥ್, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಗೂಡ್ಸ್ ಆಟೋ ಚಾಲಕರ ಸಂಘದ ಅಧ್ಯಕ್ಷ ರಾಜೇಗೌಡ, ಕಾರ್ಯದರ್ಶಿ ಕುಮಾರ್, ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ರಾಮು, ಕಾರ್ಯಕಾರಿ ಸಮಿತಿ ನಿರ್ದೇಶಕರಾದ ಗುಡ್ಡೇನಹಳ್ಳಿ ಚಂದ್ರು, ಇರ್ಷದ್‌ಪಾಷಾ, ಸತ್ತಾರ್‌ಖಾನ್, ಶ್ರೀನಿವಾಸ್, ಸತೀಶ್, ರಮೇಶ್, ವಿಜಯಕುಮಾರ್, ರಾಜಣ್ಣ, ಶಿವಕುಮಾರ್, ಹೊಸಹೊಳಲು ಶ್ರೀನಿವಾಸ್, ಆಯೂಬ್‌ಖಾನ್, ಜಯರಾಂ, ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಹಾಗೂ ಕನ್ನಡ ಪ್ರೇಮಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

—————————ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?