ಕೊಟ್ಟಿಗೆಹಾರ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮೂಡಿಗೆರೆ ತಾಲ್ಲೂಕಿನ ಬಿ ಹೊಸಳ್ಳಿಯಲ್ಲಿ
ಉಣ್ಣಕ್ಕಿ ಜ್ಞಾನ ವಿಕಾಸ ಕೇಂದ್ರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಬಾನಳ್ಳಿ ಶಾಲೆಯ ಶಿಕ್ಷಕರಾದ ಅಶೋಕ್ ಮಾತನಾಡಿ,ಮಹಿಳೆಯು ಅಬಲೆಯಲ್ಲ ಸಬಲೆ,ಮಹಿಳೆಯರು ಮುಖ್ಯವಾಹಿನಿಗೆ ಬರಲು ಧರ್ಮಸ್ಥಳ ಯೋಜನೆ ಸಹಕಾರಿಯಾಗುತ್ತಿದೆ ಇದರ ಸದುಪಯೋಗ ಎಲ್ಲಾ ಸದಸ್ಯರು ಪಡೆದುಕೊಳ್ಳಬೇಕು ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ,ಮುಖಂಡರಾದ ರವಿಶoಕರ್,ಶಶಿಧರ್,ಒಕ್ಕೂಟದ ಅಧ್ಯಕ್ಷರಾದ ಭವಾನಿ, ಗ್ರಾ.ಪಂ ಸದಸ್ಯರಾದ ಕೋಮಲ,ಒಕ್ಕೂಟದ ಪದಾಧಿಕಾರಿಗಳು,ಜ್ಞಾನ ವಿಕಾಸ ಸಮನ್ವಯಾಧಿಕಾರಿ,ವಲಯದ ಮೇಲ್ವಿಚಾರಕರು,ಕಾರ್ಯಕ್ಷೇತ್ರದ ಸೇವಾದಾರರು ಹಾಗೂ ನೂತನ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.
——–——-ಆಶಾ ಸಂತೋಷ್