ಚಿಕ್ಕಮಗಳೂರು-ಸಮಾಜದ ಕಟ್ಟಕಡೆಯ ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸಲು ಜೇ.ಸಿ.ಐ ಮುಂದಾಗಬೇಕು-ಸಿ.ಟಿ.ರವಿ ಸಲಹೆ

ಚಿಕ್ಕಮಗಳೂರು-ಸಮಾಜಕ್ಕೆ ಸೇವೆ ಸಲ್ಲಿಸಲು ಯುವ ಸಂಘಟನೆಗಳು ಮುಂದೆ ಬಂದರೆ ಮಾತ್ರ ಸಮುದಾಯದ ಉನ್ನತಿ ಸಾಧ್ಯ. ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿ ಸಮಾಜದ ಕಟ್ಟಕಡೆಯ ಜನರಿಗೆ ನಿಸ್ವಾರ್ಥ ಸೇವೆ ಸಲ್ಲಿಸಲು ಜೇ.ಸಿ.ಐ ಮುಂದಾಗಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ನಗರದ ಪಾಂಚಜನ್ಯ ಕಚೇರಿಯಲ್ಲಿ ಜೇ.ಸಿ.ಐ ಚಿಕ್ಕಮಗಳೂರು ಮಲ್ನಾಡ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಬುಧವಾರ ಸಂಜೆ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಮಾನವರಲ್ಲಿ ಸಮಾಜಮುಖಿ ಚಿಂತನೆಯಿದ್ದರೆ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ನಡೆಸಲು ಸಾಧ್ಯ ಎಂದ ಅವರು ವೈಯಕ್ತಿಕವಾಗಿ ಸಾಧಿಸಲು ಅಸಾಧ್ಯವಾಗಿದ್ದನನ್ನು ಸಾಮೂಹಿಕವಾಗಿ ಸಂಘಟನೆಯ ಮೂಲಕ ಸಾಧಿಸಲು ಸ್ಪೂರ್ತಿ ನೀಡಲಿದೆ ಎಂದರು.

ಮಾಡೆಲ್ ಆಂಗ್ಲಮಾಧ್ಯಮ ಶಾಲೆ ಪ್ರಾಂಶುಪಾಲ ಎಂ.ಎನ್.ಷಡಕ್ಷರಿ ಮಾತನಾಡಿ, ಸಮಾಜಮುಖಿ ಚಿಂತನೆಗಳ ನ್ನೊಗೊoಡ ಉತ್ತಮ ನಾಯಕರನ್ನು ಜೇ.ಸಿ.ಐ ಸಮಾಜಕ್ಕೆ ಕೊಡುಗೆ ನೀಡುತ್ತಿದೆ. ಅಭಿವೃಧ್ದಿಯಲ್ಲಿ ಎಲ್ಲಾ ಕೆಲಸಗಳನ್ನು ಸರ್ಕಾರದಿಂದಲೇ ನಿರೀಕ್ಷಿಸುವುದು ಸಾಧ್ಯವಿಲ್ಲ. ಸಂಘ-ಸoಸ್ಥೆಗಳು ನೆರವಿಗೆ ನಿಂತು ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.

ನೂತನ ಅಧ್ಯಕ್ಷ ಸಿ.ಬಿ.ಪ್ರದೀಪ್ ಮಾತನಾಡಿ, ಸತತ ಹನ್ನೆರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಜೇ.ಸಿ.ಐ ಸಂಸ್ಥೆಗೆ ತಮ್ಮನ್ನು ಆಯ್ಕೆಗೊಳಿಸಿರುವುದು ಖುಷಿತಂದಿದೆ. ಕಾಲೇಜು ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ, ದೇಶಭಕ್ತಿ ಕಾರ್ಯಾಗಾರ,ಸೌಕರ್ಯಗಳಿಂದ ವಂಚಿತವಾಗಿರುವ ಶಾಲೆಗೆ ಸಾಮಾಗ್ರಿಗಳನ್ನು ಒದಗಿಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗುತ್ತೇವೆೆ ಎಂದರು.

ನೂತನ ಪದಾಧಿಕಾರಿಗಳು :

ಸಿ.ಬಿ.ಪ್ರದೀಪ್ (ಅಧ್ಯಕ್ಷ), ಎಂ.ಎo.ತಿಲಕ್‌ದತ್ತ (ಕಾರ್ಯದರ್ಶಿ), ಸಾಗ ರ್ (ಉಪಾಧ್ಯಕ್ಷ), ಹೆಚ್.ಕೆ.ಕೃಷ್ಣಮೂರ್ತಿ (ಕಾರ್ಯಾಗಾರ ಆಯೋಜಕ), ನೀತನ್ ಡಿಸೋಜಾ (ತರಬೇತಿ ದಾರ), ಲೋಹಿತ್ (ಉದ್ಯಮ ತರಬೇತಿದಾರ), ಪೂರ್ಣಿಮಾ ಅನಿಲ್ (ತಂಡಗಳ ತರಬೇತಿದಾರೆ), ರೋಹಿ ತ್ (ಪತ್ರಿಕಾ ಸಲಹೆಗಾರ) ಹಾಗೂ ಮಮತ ಪ್ರವೀಣ್, ಇಂದ್ರೇಶ್, ಎಸ್.ಎಲ್.ಸಚಿತ್, ಗ್ರೀಶ್ಮಾ, ಎಸ್.ಎನ್. ಗುರುಮೂರ್ತಿ, ರಘು, ಅನಿಲ್‌ನಾಯ್ಕ್, ಸುರೇಂದ್ರ ಮತ್ತಿತರರು ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಜೇ.ಸಿ.ಐ ಸ್ಥಾಪಕ ಅಧ್ಯಕ್ಷ ಅನಿಲ್‌ ಆನಂದ್, ವಲಯಾಧ್ಯಕ್ಷರಾದ ವಿಜಯ್‌ಕುಮಾರ್, ಬಿ.ಎಂ.ಮಲ್ಲಿಕಾರ್ಜುನ್, ನಿಕಟಪೂರ್ವ ಅಧ್ಯಕ್ಷೆ ಪುಷ್ಪವಿಜಯ್ ಹಾಗೂ ವಿವಿಧ ತಾಲ್ಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

—————–ಸುರೇಶ್

Leave a Reply

Your email address will not be published. Required fields are marked *

× How can I help you?