ಕೊರಟಗೆರೆ-ನಾಡಿನ ಪ್ರಸಿದ್ದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯದಲ್ಲಿ ಕೊನೆ ಕಾರ್ತೀಕ ಮಾಸದ ಕಡೇ ಶುಕ್ರವಾರ ದೀಪೋತ್ಸವ ಹಾಗೂ ಬ್ರಹ್ಮರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಪ್ರತಿ ವರ್ಷ ದಂತೆ ಈ ವರ್ಷವೂ ಕಾರ್ತೀಕ ಮಾಸದ ಕಡೇ ಶುಕ್ರವಾರ ಬೆಳಿಗ್ಗೆ 7 ಗಂಟೆ ಯಿಂದ 8-30 ರವರೆಗೆ ಪಂಚಾಮೃತ ಅಭಿಷೇಕ, 8-30 ರಿಂದ ಮಧ್ಯಾಹ್ನ 12 ಗಂಟೆ ರವರೆಗೆ ಶ್ರೀ ಗಣಪತಿ ಹೋಮ, ನವಗ್ರಹ ಹೋಮ, ಶ್ರೀ ಮಹಾಲಕ್ಷ್ಮಿ ಹೋಮ, ಗ್ರಾಮ ದೇವತೆ ದುರ್ಗಾ ಹೋಮ, ಮಧ್ಯಾಹ್ನ 12.35 ಕ್ಕೆ ರಥಾಂಗ ಹೋಮದ ನಂತರ ಶ್ರೀ ಮಹಾಲಕ್ಷ್ಮೀ ದೇವಿಗೆ ವಿಶೇಷ ಹೂವಿನ ಅಲಂಕಾರದೊಂದಿಗೆ ಅಭಿಜಿತ್ ಲಗ್ನದಲ್ಲಿ ಸಾಂಸ್ಕøತಿ ಕಲಾತಂಡಗಳೊಂದಿಗೆ ಬ್ರಹ್ಮರಥೋತ್ಸವ, ಸಂಜೆ 5-30 ಕ್ಕೆ ದೀಪೋತ್ಸವ ಮತ್ತು ರಾತ್ರಿ 8 ಗಂಟೆಗೆ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ಗೊರವನಹಳ್ಳಿ ನರಸಯ್ಯನಪಾಳ್ಯ, ಗೊಲ್ಲರಹಟ್ಟಿ ಗ್ರಾಮಸ್ಥರಿಂದ ಆರತಿ ಸೇವೆ ಕಾರ್ಯಕ್ರಮಗಳು ಸಾಂಘವಾಗಿ ನಡೆದವು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ಕೃತಾರ್ತರಾದರು.
ಈ ಸಂದರ್ಭದಲ್ಲಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ, ಲಕ್ಷ್ಮಣ್, ಮಂಜುನಾಥ್ ಸೇರಿದಂತೆ ಇನ್ನಿತರರ ಸಿಬ್ಬಂದಿ ಹಾಜರಿದ್ದರು.
——–ನರಸಿಂಹಯ್ಯ ಕೋಳಾಲ