ಹೊಳೆನರಸೀಪುರ:ಡಿಸೆಂಬರ್ 5 ರಂದು ಹಾಸನದಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಸ್ವಾಭಿಮಾನಿ ಸಮಾವೇಶ ಆಯೋಜಿಸಲಾಗಿದ್ದು ಈ ಸಮಾವೇಶಕ್ಕೆ 5 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವ ಜವಬ್ದಾರಿ ನಮ್ಮೆಲ್ಲರದು. ಹೊಳೆನರಸೀಪುರ ತಾಲ್ಲೂಕಿನಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಹೋಗೋಣ.ಪ್ರತೀ ಹಳ್ಳಿಯಿಂದ ಕಾರ್ಯಕರ್ತರನ್ನು, ಅಭಿಮಾನಿಗಳನ್ನು ಕಾಂಗ್ರೆಸ್ ಪಕ್ಷ ಸೇರಲು ಬಯಸುವವರನ್ನು ಹೊರಡಿಸಿ ಎಂದು ಸಂಸದ ಶ್ರೇಯಶ್ ಎಂ.ಪಟೇಲ್ ವಿನಂತಿಸಿದರು.
ಜಯಲಕ್ಷ್ಮೀರೈಸ್ ಮಿಲ್ ಆವರಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್ ಪಕ್ಷದ ಸ್ವಾಭಿಮಾನಿ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತವಾರಿ ಸಚಿವರಾದ ರಾಜಣ್ಣನವರು ಸೇರಿದಂತೆ ಸರಕಾರದ ಅನೇಕ ಸಚಿವರು ಭಾಗವಹಿಸಲಿದ್ದಾರೆ.
ಇದು ಹಾಸನ, ಮಂಡ್ಯ, ಚಿಕ್ಕಮಗಳೂರು, ಕೊಡಗು, ಮೈಸೂರು, ಚಾಮರಾಜನಗರದ ಸಮಾವೇಶ. ಈ ಸಮಾವೇಶವನ್ನು ಐತಿಹಾಸಿಕ ಸಮಾವೇಶವನ್ನಾಗಿಸೋಣ. ಸಂಸದನಾಗಿ ಸಮಾವೇಶದಲ್ಲಿ ಭಾಗವಹಿಸಬೇಕಾಗಿರುವ ಕಾರಣ ನಾನು ಶನಿವಾರ ಭಾನುವಾರ ಮಾತ್ರ ಸಿಗುತ್ತೇನೆ. ಯಾರೂ ಬೇಸರ ಮಾಡಿಕೊಳ್ಳಬೇಡಿ ಎಂದರು.
ಕಾಂಗ್ರೆಸ್ ಸಮಾವೇಶ ನಮ್ಮ ನಿಮ್ಮ ಮನೆಯ ಕಾರ್ಯಕ್ರಮ ಎಂದು ತಿಳಿದು ಎಲ್ಲರೂ ಸಮಾವೇಶಕ್ಕೆ ಬನ್ನಿ. ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕೆಪಿಸಿಸಿ ರಾಜ್ಯಾಧಕ್ಷರು ಹಾಗೂ ಉಪಮುಖ್ಯ ಮಂತ್ರಿಯಾದ ಡಿ.ಕೆ. ಶಿವಕುಮಾರ್, ಬಿಜೆಪಿ ಹಾಗೂ ಜೆಡಿಸ್ ಪಕ್ಷಗಳ ಆರೋಪಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಸಂಸದನನ್ನಾಗಿ ಮಾಡಿದ್ದೀರಿ. ನಾನು ಸಂಸದನಾದ ದಿನದಿಂದ ಜಿಲ್ಲೆಯ ಜನರ ಕೆಲಸವನ್ನು ಪ್ರಮಾಣಿಕವಾಗಿ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಸೇವಕ ಎಂದು ಭಾವಿಸಿರುವ ನಾನು ಸದಾ ನಿಮ್ಮ ಜೊತೆಯಲ್ಲೇ ಇರುತ್ತೇವೆ. ನಾವೆಲ್ಲಾ ಸಮಾವೇಶದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ ಎಂದು ಕೋರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಲಕ್ಷ್ಮಣ, ವನ್ನಿಕೊಪ್ಪಲು ಮಂಜೇಗೌಡ, ಬಾಗೀವಾಳು ಮಂಜೇಗೌಡ, ಕೆ.ಆರ್. ಸುದರ್ಶನ್, ಹಳ್ಳಿಮೈಸೂರು ಪುಟ್ಟೇಗೌಡ, ಹಳೇಕೋಟೆ ಗಿರೀಶ್, ಮುಜಾಹಿದ್, ಕಡುವಿನಕೋಟೆ ಲೋಕೇಶ್, ಸೈಯದ್ ಜಿಶನ್ ಅಲಿ, ಮಿಜಾರ್ ಅಲಿಮದದ್, ಮುಜಾಹಿದ್ ಖಾನ್ ಇತರರು ಭಾಗವಹಿಸಿದ್ದರು.
————-ವಸಂತ್ ಕುಮಾರ್