ಕೊರಟಗೆರೆ:-ಡಿ.2 ರಂದು ಕಾಂಗ್ರೆಸ್ ಸಮಾವೇಶ-ತಾಲೂಕಿನಿಂದ 10 ಸಾವಿರಕ್ಕೂ ಹೆಚ್ಚು ಜನರು ಬಾಗಿ-ತಾಲೂಕಿಗೆ 130 ಕೋಟಿ ರೂಪಾಯಿಗಳ ಅನುದಾನ

ಕೊರಟಗೆರೆ:-ತುಮಕೂರು ನಗರದಲ್ಲಿ ಡಿ.2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ನೇತೃತ್ವದಲ್ಲಿ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗು ಶಂಕುಸ್ಥಾಪನಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರರವರ ಸೂಚನೆಯಂತೆ ತಾಲೂಕಿನಿಂದ 10,000 ಕೂ ಹೆಚ್ಚು ಜನರು ತೆರಳಲಿದ್ದಾರೆ ಎಂದು ನಗರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕೊಡ್ಲಹಳ್ಳಿ ಅಶ್ವಥನಾರಾಯಣ ತಿಳಿಸಿದರು.

ಅವರು ಪಟ್ಟಣದ ರಾಜೀವ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ, ಡಿಸೆಂಬರ್ 2 ರ ಸೋಮವಾರ ಬೆಳ್ಳಿಗೆ 10-30 ಗಂಟೆಗೆ ತುಮಕೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು 1259.21 ಕೋಟಿ ರೂಗಳ ತುಮಕೂರು ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಇಲಾಖಾ ಯೋಜನೆಗಳ ಫಲಾನುಭವಿಗಳ ಸವಲತ್ತು ವಿತರಣಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಸರ್ಕಾರದ ಗೃಹ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಮತ್ತು ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ನವರ ಮುಂದಾಳತ್ವದಲ್ಲಿ ಈ ಬೃಹತ್ ಸಮಾರಂಭ ನಡೆಯಲ್ಲಿದ್ದು ಈ ಕಾರ್ಯಕ್ರಮಕ್ಕೆ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಿಂದ 10,000 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು, ಜನರು,ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಲಿದ್ದು ಬರುವವರಿಗೆ ಪಂಚಾಯಿತಿ ವಾರು ಬಸ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಅರಕೆರೆ ಶಂಕರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಸರ್ಕಾರ ಕೊಡುತ್ತಿರುವ ಗ್ಯಾರೆಂಟಿಗಳ ಯೋಜನೆಗಳ 60,000 ಕೋಟಿ ಗಳ ಹಣ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದವರ ಕುಟುಂಬಕ್ಕೂ ಹೋಗುತ್ತಿದೆ,ಸಾಮಾನ್ಯ ಜನರಿಗೂ ಹೋಗುತ್ತಿದೆ. ವಿರೋದ ಪಕ್ಷದವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಈ ಗ್ಯಾರೆಂಟಿ ಹಣವೇ ನಿಜವಾಗಿ ಬಡವರ ಕೈಗೆ ನೇರವಾಗಿ ಸೇರುತ್ತಿರುವುದು.ಇದರ ನಡುವೆಯೂ ಸರ್ಕಾರವು ಅಭಿವೃದ್ಧಿ ಕಾಮಗಾರಿಗಳಿಗೂ ಹಣ ನೀಡುತ್ತಿದೆ. ಇದ್ದಕ್ಕೆ ಸಾಕ್ಷಿಯಾಗಿ ಸೋಮವಾರ 1259 ಕೋಟಿ ರೂಗಳ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡುತ್ತಿದ್ದಾರೆ.ಈ ಕಾಮಗಾರಿಗಳಲ್ಲಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಸುಮಾರು 130 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳು ಸೇರಿವೆ. ಕ್ಷೇತ್ರದ ಜನತೆ ಈ ಕಾರ್ಯಕ್ರಮಕ್ಕೆ ಹಚ್ಚಿನ ಜನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಿದರು.

ಜಿಲ್ಲಾ ಕಾಂಗ್ರೆಸ್ ಮುಖಂಡ ಮಹಾಲಿಂಗಪ್ಪ ಮಾತನಾಡಿ, 2023 ರಿಂದ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ರವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ ಎಂದರು.

ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಜಯಮ್ಮ ಮಾತನಾಡಿ, ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಕೊರಟಗೆರೆ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕೆ.ಪಿ.ಸಿ.ಸಿ ಸದಸ್ಯ ಎ.ಡಿ.ಬಲರಾಮಯ್ಯ, ಪ.ಪಂ ಸದಸ್ಯ ಕೆ.ಆರ್.ಓಬಳರಾಜು, ಮುಖಂಡರುಗಳಾದ ಮೈಲಾರಪ್ಪ, ಈಶ್ವರಯ್ಯ, ರಂಗರಾಜು, ಕವಿತಾ ವಿದ್ಯಾ, ಜಯರಾಮ್, ಗಣೇಶ್, ಟಿ.ಸಿ.ರಾಮಯ್ಯ ಹನುಮಾನ್, ಕುಮಾರ್, ವೆಂಕಟಪ್ಪ, ಉಮಾಶಂಕರ್, ಆನಂದ್, ಹನುಮಂತ್, ಮುನ್ನಾಭಾಯ್, ಮಹೇಶ್, ದೊಡ್ಡಯ್ಯ, ಮೂರ್ತಿ, ಗೋಪಿ, ಬೈರೇಷ್, ದೀಪಕ್, ಭರತ್, ಚೌದರಿ, ರಿಯಾಜ್ ಪತ್ರಿಕಾಘೋಷ್ಠಿಯಲ್ಲಿ ಹಾಜರಿದ್ದರು.

—–——-ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?