ಕೊಟ್ಟಿಗೆಹಾರ-ಬಣಕಲ್ ನ ಸಾಯಿಕೃಷ್ಣ ಆಸ್ಪತ್ರೆ ಸಹಯೋಗದಲ್ಲಿ ಕಕ್ಕಿಂಜೆಯ ಶ್ರೀಕೃಷ್ಣ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯ ವೈದ್ಯಕೀಯ ಕೇಂದ್ರವು ಇದೇ ಡಿ.7ರಂದು ಶನಿವಾರ ಉದ್ಘಾಟನೆಯಾಗಲಿದ್ದು ರೋಗಿಗಳು ಇದರ ಪ್ರಯೋಜನ ಪಡೆಯಬೇಕು ಎಂದು ಬಣಕಲ್ ಸಾಯಿಕೃಷ್ಣ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಮುರಳಿ ಕೃಷ್ಣ ಇರ್ವತ್ರಾಯ ಹೇಳಿದರು.
ಅವರು ಬಣಕಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
‘ಚಿಕ್ಕಮಗಳೂರು ಜಿಲ್ಲೆಯ ಜನರು ಹೆಚ್ಚಿನ ಚಿಕಿತ್ಸೆಗಾಗಿ ಕರಾವಳಿ ಭಾಗದ ಆಸ್ಪತ್ರೆಗಳಿಗೆ ಅವಲಂಬಿಸಿದ್ದಾರೆ.ಇದರಿಂದ ಚಾರ್ಮಾಡಿ ಘಾಟ್ ಸಮೀಪದಲ್ಲಿರುವ ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯ ವೈದ್ಯಕೀಯ ಕೇಂದ್ರ ಜನರಿಗಾಗಿಯೇ ತೆರೆಯಲಾಗುತ್ತಿದ್ಧು ಇದರ ಉದ್ಘಾಟನೆಯನ್ನು ಡಾ.ತೇಜಸ್ವಿ ಅನಂತಕುಮಾರ್ ನೆರವೇರಿಸಲಿದ್ದಾರೆ.ಅಧ್ಯಕ್ಷತೆಯನ್ನು ಮೂಡಿಗೆರೆ ವಿಧಾನ ಪರಿಷತ್ ಸಭಾಪತಿ ಎಂ.ಕೆ. ಪ್ರಾಣೇಶ್ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜಾ,ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ,ಮಾಜಿ ವಿ.ಪ.ಸದಸ್ಯ ಹರೀಶ್ ಕುಮಾರ್,ಸಗೀರ್ ಸಿದ್ಧೀಕಿ,ಡಾ.ಜೀಧು ರಾಧಾಕೃಷ್ಣನ್,ವಸಂತ ಸಾಲಿಯಾನ್,ಗ್ರಾ.ಪಂ.ಅಧ್ಯಕ್ಷೆ ಶಾರದಾ,ಕೆ.ಪಿ.ತ್ರೇಸಿಯಾ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಲೆನಾಡಿನ ಜನರು ಈ ತುರ್ತು ವೈದ್ಯಕೀಯ ಚಿಕಿತ್ಸಾ ಕೇಂದ್ರದ ಪ್ರಯೋಜನ ಪಡೆಯಲು ಅವರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಾ. ವಂದನರಾವ್ ಇರ್ವತ್ರಾಯ ಮತ್ತಿತರ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.
———–ಆಶಾ ಸಂತೋಷ್