ಕೊಟ್ಟಿಗೆಹಾರ:ಬಾಳೂರು ಹೋಬಳಿಯ ಕೆಳಗೂರು ಗ್ರಾಮದಲ್ಲಿ ಸಂತ ಸತುರ್ನಿನ್ ಚರ್ಚ್ ವ್ಯಾಪ್ತಿಯ ಕ್ರೈಸ್ತ ಭಕ್ತರು ಕ್ರಿಸ್ಮಸ್ ಪ್ರಯುಕ್ತ ತಾರೆಗಳು ಮಿನುಗಿದವು ಬಾನಿನಲಿ ಅರಳಿದವು, ಏಸು ಬಾಲರ ಜನನವನು ಎಲ್ಲೆಡೆ ಸಾರಿದವು,ಎಂಬ ಹಾಡಿನೊಂದಿಗೆ ಕ್ರಿಸ್ ಮಸ್ ಕೇರಲ್ಸ್ ಗಾಯನ ಆರಂಭಿಸಿ ಕ್ರಿಸ್ತನ ಜನನದ ಸುದ್ದಿಯನ್ನು ಪ್ರತಿ ಕ್ರೈಸ್ತ ಮನೆಗಳಿಗೆ ತಲುಪುವಂತೆ ಕ್ರಿಸ್ ಮಸ್ ತಾತ ಹಾಗು ಸದಸ್ಯರೊಂದಿಗೆ ಕುಣಿದು ಮಕ್ಕಳಿಗೆ ಮನೆಯ ಕುಟುಂಬದವರಿಗೆ ಸಿಹಿ ನೀಡಿ ಮನ ರಂಜಿಸಿದರು.
ಕ್ರಿಸ್ತನ ಜನನ ಜಾಗೃತಿ ಡಿಸೆಂಬರ್ ತಿಂಗಳಿನಲ್ಲಿ ನಾಡಿನಾದ್ಯಂತ ಮೊಳಗುತ್ತದೆ.ಕೆಳಗೂರಿನಲ್ಲಿ ಭಾನುವಾರದಂದು ಕ್ರಿಸ್ ಮಸ್ ಕೇರಲ್ಸ್ ಆರಂಭಿಸಲಾಯಿತು.ಮುಖಂಡರಾದ ವಲೇರಿಯನ್ ಪಿರೇರಾ, ಜಾನ್ ನೊರೋನಾ ನೇತೃತ್ವದಲ್ಲಿ ಕ್ರಿಸ್ ಮಸ್ ಕೇರಲ್ಸ್ ಗಾಯನ ನಡೆಯಿತು.ಕ್ರಿಸ್ ಮಸ್ ತಾತಾ ಸಂತ ಕ್ಲಾಸ್ ನೊಂದಿಗೆ ಕ್ರಿಸ್ತನ ಜನನದ ಭಕ್ತಿಗೀತೆ ಹಾಡುತ್ತಾ ಬೈಬಲ್ ಪಟಿಸಿ ಸುವಾರ್ತೆ ಸಾರಿದರು.ಬಳಿಕ ಸದಸ್ಯರೊಂದಿಗೆ ಹಾಡಿಗೆ ಹೆಜ್ಜೆ ಹಾಕಿದರು.
—————–ಆಶಾ ಸಂತೋಷ್