ಮೈಸೂರು-ರಕ್ತದಾನವನ್ನು ಮರೆಯದೇ,ಹೆದರದೇ ಮಾಡಬೇಕಾ ಗಿರುವುದು ನಮ್ಮೆಲ್ಲರ ಕರ್ತವ್ಯ-ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ

ಮೈಸೂರು-ನಗರದ ಕಾವೇರಿ ವಿದ್ಯಾಸಂಸ್ಥೆಯ ಆವರಣದಲ್ಲಿ ನೇವೆಲ್ ವೆಟರನ್ ಅಸೋಸಿಯೇಷನ್, ಕರ್ನಾಟಕ ಲಯನ್ಸ್, ಜೀವಧಾರ ರಕ್ತನಿದಿ ಹಾಗೂ ರೋಟರಿ ಕ್ಲಬ್ ಆಫ್ ಮೈಸೂರು ಶ್ರೀಗಂಧ ಇವರುಗಳ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ರಕ್ತದಾನ ಒಂದು ಜೀವದಾನ. ಜೀವ ಉಳಿಯಬೇಕಾದರೆ ರಕ್ತವನ್ನು ದಾನ ಮಾಡಿ, ರೋಗಿಯನ್ನು ಕಾಪಾಡಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಪ್ರತಿಯೊಬ್ಬರೂ ರಕ್ತದಾನವನ್ನು ಮರೆಯದೇ,ಹೆದರದೇ ಮಾಡಬೇಕಾ ಗಿರುವುದು ನಮ್ಮೆಲ್ಲರ ಕರ್ತವ್ಯ. 18 ವರ್ಷ ಮೇಲ್ಪಟ್ಟ ವ್ಯಕ್ತಿಗಳು ರಕ್ತದಾನ ಮಾಡುವುದು ಒಳ್ಳೆಯದು. ಅದರಿಂದ ಆರೋಗ್ಯವೂ ಕೂಡ ವೃದ್ಧಿಸುತ್ತದೆ. ಎಲ್ಲಾ ದಾನಗಳಿಗಿಂತ ರಕ್ತದಾನ ಬಹಳ ಶ್ರೇಷ್ಠ. ಅದನ್ನು ಅರಿತು ನಾವೆಲ್ಲರೂ ವರ್ಷಕ್ಕೆ ಒಮ್ಮೆಯಾದರೂ ರಕ್ತದಾನವನ್ನು ಮಾಡಿ ಅನೇಕ ರೋಗಿಗಳನ್ನು ಉಳಿಸಿದರೆ ಬದುಕು ಸಾರ್ಥಕ ಎಂದು ತಿಳಿಸಿದರು.

ವೇದಿಕೆಯಲ್ಲಿ ಪುಷ್ಪ ಗಾಯಕ್‌ವಾಡ್, ಲೆಫ್ಟಿನೆಂಟ್ ಸಿಡಿಆರ್ ಸರ್ಜನ್,ಸಮಾಜ ಸೇವಕರಾದ ಶ್ರೀನಿವಾಸ್, ನಿವೃತ್ತ ಮೇಜರ್ ಜನರಲ್ ಎಸ್.ಎಸ್.ರಾಜನ್, ನೇವೆಲ್ ವೆಟರನ್ ಅಸೋಸಿಯೇಷನ್ ಅಧ್ಯಕ್ಷರಾದ ಗಜಾನನ ಟಿ.ಭಟ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುಮಾರು 40ಕ್ಕೂ ಹೆಚ್ಚು ಎನ್‌ಸಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು.

Leave a Reply

Your email address will not be published. Required fields are marked *

× How can I help you?