ಹಾಸನ:ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ವತಿಯಿಂದ ನಡೆದ ರೋಟರಿ ಕ್ರೀಡಾ ಸಂಭ್ರಮ-ಜಿಲ್ಲೆಯ ರೋಟರಿ ಕ್ಲಬ್ ನ ಸದಸ್ಯರು ಬಾಗಿ

ಹಾಸನ:ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ವತಿಯಿಂದ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ ಹಾಗೂ ಒಳಾಂಗಣ ಕ್ರೀಡಾoಗಣದಲ್ಲಿ ಶನಿವಾರದಂದು ರೋಟರಿ ಸದಸ್ಯರಿಗಾಗಿ ರೋಟರಿ ಕ್ರೀಡಾ ಸಂಭ್ರಮ ಹಮ್ಮಿಕೊ ಳ್ಳಲಾಗಿತ್ತು.

ಕ್ರೀಡಾ ಸಂಭ್ರಮದ ಅಂಗವಾಗಿ ವಿವಿಧ ಆಟೋಟಗಳು ನಡೆದವು.ಕ್ರೀಡಾಕೂಟವನ್ನು ಜಿಲ್ಲಾ ಗೌವರ್ನರ್ ದೇವ ಆನಂದ್ ಉದ್ಘಾಟಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಎರಡು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ರೋಟರಿ ಸಂಸ್ಥೆಯ ಸದಸ್ಯರು ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ.

ಪುರುಷರ ವಿಭಾಗದ ಕ್ರೀಡಾಕೂಟದಲ್ಲಿ:

ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಾಸನ ರಾಯಲ್ (ಪ್ರಥಮ), ರೋಟರಿ ಮಿಡ್ ಟೌನ್ (ದ್ವಿತೀಯ), ವಾಲಿಬಾಲ್ – ಚನ್ನರಾಯಪಟ್ಟಣ ವಿಷನ್ (ಪ್ರಥಮ), ಅರಕಲಗೂಡು ಮಿಡ್‌ಟೌನ್ (ದ್ವಿತೀಯ), ಹಗ್ಗ ಜಗ್ಗಾಟ- ಚ. ವಿಷನ್ (ಪ್ರಥಮ), ಹಾ. ರಾಯಲ್ (ದ್ವಿತೀಯ), ಶಟಲ್ ಬ್ಯಾಡ್ಮಿಂಟನ್ 45 ವರ್ಷ ಒಳ್ಳಪಟ್ಟ ವಿಭಾಗದಲ್ಲಿ ಸಿಂಗಲ್ಸ್ ಪ0ದ್ಯಾವಳಿಯಲ್ಲಿ ಹಾ. ರಾಯಲ್ ಸಾಗರ್ (ಪ್ರಥಮ), ಚ. ವಿಷನ್ ಫಿಲಿಫ್ (ದ್ವಿತೀಯ), ಡಬಲ್ಸ್ ಪಂದ್ಯಾವಳಿಯಲ್ಲಿ ರೋಟರಿ ಮಿಡ್ ಟೌನ್ ರವಿ ಮತ್ತು ಶಿವು (ಪ್ರಥಮ), ಹಾ. ರಾಯಲ್ ಸಾಗರ್ ಮತ್ತು ಹರೀಶ್ (ದ್ವಿತೀಯ), ಶಟಲ್ ಬ್ಯಾಡ್ಮಿಂಟನ್ 45 ವರ್ಷ ಮೇಲ್‌ಪಟ್ಟ ವಿಭಾಗದ ಸಿಂಗಲ್ಸ್ ಪoದ್ಯಾವಳಿಯಲ್ಲಿ ಚ. ವಿಷನ್ ಫಿಲಿಫ್ (ಪ್ರಥಮ), ರೋ. ಮಿಡ್ ಟೌನ್ ರವಿ (ದ್ವಿತೀಯ), ಟೆಬಲ್ ಟೆನ್ನಿಸ್ ಪಂದ್ಯಾವಳಿಯ ಸಿಂಗಲ್ಸ್ ನಲ್ಲಿ ರೋಟರಿ ಕ್ವಾಂಟ ಸoಸ್ಥೆಯ ಡಾ. ಸತೀಶ್ (ಪ್ರಥಮ), ಡಾ. ಮನು ನಾಗೇಶ್ (ದ್ವಿತೀಯ),ಡಬಲ್ಸ್ ಪಂದ್ಯಾವಳಿಯಲ್ಲಿ ಹಾ. ರಾಯಲ್‌ನ ಡಾ.ನಿತ್ಯಾನಂದ ಮತ್ತು ತಂಡ (ಪ್ರಥಮ), ರೋ. ಕ್ವಾಂಟ ಸತೀಶ್ ಮತ್ತು ಸುರೇಶ್ (ದ್ವಿತೀಯ), ಕೇರಂ ಪಂದ್ಯಾವಳಿಯ ಸಿಂಗಲ್ಸ್ ನಲ್ಲಿ ಹಾ. ರಾಯಲ್‌ನ ಶ್ರೀನಂದ (ಪ್ರಥಮ), ರೋ. ಕ್ವಾಂಟ ಸತೀಶ್ (ದ್ವಿತೀಯ), ಡಬಲ್ಸ್
ಪಂದ್ಯದಲ್ಲಿ ರೋ. ಕ್ವಾಂಟ ಸಂಸ್ಥೆ ಹೇಮಂತ್ ಮತ್ತು ರವಿ (ಪ್ರಥಮ), ಸುರೇಶ್ ಮತ್ತು ಸತೀಶ್ (ದ್ವಿತೀಯ), ಗುಂಡು ಎಸೆತ 50 ವರ್ಷ ಒಳಪಟ್ಟ ವಿಭಾಗದಲ್ಲಿ ಚ. ವಿಷನ್ ರಂಗನಾಥ್ (ಪ್ರಥಮ), ಚ.ವಿಷನ್ ಮಧು (ದ್ವಿತೀಯ), ರೋ. ಕ್ವಾಂಟ ಮನು (ತೃತೀಯ), ೫೦ ವರ್ಷ ಮೇಲ್ಪಟ್ಟ ವಿಭಾಗದಲ್ಲಿ ರೋ. ಕ್ವಾಂಟ ರಾಜಶೇಖರ್ (ಪ್ರಥಮ),ರೋ. ಮಿಡ್ ಟೌನ್ (ದ್ವಿತೀಯ), ರೋ. ಟೈಗರ್ (ತೃತೀಯ). ಚೆಸ್ ಪಂದ್ಯಾವಳಿಯಲ್ಲಿ ಹಾ. ರಾಯಲ್ ಡಾ.ನಿತ್ಯಾನಂದ (ಪ್ರಥಮ)
ಬಹುಮಾನ ಪಡೆದುಕೊಂಡಿದ್ದಾರೆ.

ಮಹಿಳೆಯ ವಿಭಾಗದ ಕ್ರೀಡಾಕೂಟ:

ಥ್ರೋ ಬಾಲ್ – ರೋಟರಿ ಟೈಗರ್ (ಪ್ರಥಮ), ರೋ. ಕ್ವಾಂಟ ಮತ್ತು ರೋ. ಚನ್ನರಾಯಪಟ್ಟಣ (ದ್ವಿತೀಯ), ಹಗ್ಗ ಜಗ್ಗಾಟ- ಚ. ವಿಷನ್ (ಪ್ರಥಮ), ರೋ. ಕ್ವಾಂಟ(ದ್ವಿತೀಯ), ಶಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್ ಪಂದ್ಯಾವಳಿಯಲ್ಲಿ ರೋ. ಹಾಸನ್ ಮೇಘನ (ಪ್ರಥಮ), ರೋ. ಟೈಗರ್ (ದ್ವಿತೀಯ), ಡಬಲ್ಸ್ ಪಂದ್ಯಾವ ಳಿಯಲ್ಲಿ ರೋ. ಹಾಸನ ಅನುಪಮ ಮತ್ತು ಮೇಘನ (ಪ್ರಥಮ), ಚ. ವಿಷನ್ ಪ್ರೀತಿ ಮತ್ತು ದಿವ್ಯಾ (ದ್ವಿತೀಯ), ಟೆಬಲ್ ಟೆನ್ನಿಸ್ ಸಿಂಗಲ್ಸ್ ಹಾ. ರಾಯಲ್ ಶ್ರೀಲತಾ (ಪ್ರಥಮ), ರೋ. ಹಾಸನ ಮೇಘನಾ(ದ್ವಿತೀಯ), ಕೇರಂ ಸಿಂಗಲ್ಸ್ ರೋ. ಕ್ವಾಂಟ ಶಶಿಕಲಾ ಬಸವರಾಜ್ (ಪ್ರಥಮ), ಪುಷ್ಪ ರಂಗನಾಥ್ (ದ್ವಿತೀಯ), ಡಬಲ್ಸ್ ಪಂದ್ಯದಲ್ಲಿ ರೋ. ಕ್ವಾಂಟ ಮಮತ ಮತ್ತು ಸವಿತಾ (ಪ್ರಥಮ), ರೋ. ಟೈಗರ್ ಕವಿತಾ ಮತ್ತು ದೀಪ (ದ್ವಿತೀಯ), ಗುಂಡು ಎಸೆತ ರೋ. ಕ್ವಾಂಟ ಸವಿತಾ ಮತ್ತು ರೋ. ಹಾಸನ ಮೇಘನಾ (ಪ್ರಥಮ), ರೋ. ಕ್ವಾಂಟ (ದ್ವಿತೀಯ), ಚ. ವಿಷನ್ ಕುಮುದ (ತೃತೀಯ), ಚೆಸ್ ಪಂದ್ಯಾವಳಿಯಲ್ಲಿ ರೋ. ಹಾಸನ ಅನುಪಮ (ಪ್ರಥಮ) ರೋ. ಕ್ವಾಂಟ ರಮ್ಯ (ದ್ವಿತೀಯ) ಬಹುಮಾನ ಪಡೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ 2024-29ನೇ ಸಾಲಿನ ಜಿಲ್ಲಾ ಗೌವರ್ನರ್ ಪಾಲಾಕ್ಷ, ಸಹಾಯಕ ಗೌವರ್ನರ್‌ಗಳಾದ ಪಿ. ಸಂತೋಷ್, ನಿರ್ಮಲ್ ಕುಮಾರ್ ಜೈನ್, ಮಾಜಿ ಜಿಲ್ಲಾ ಗೌವರ್ನರ್ ರಮೇಶ್, ಕ್ರೀಡಾ ಕೂಟದ ಸಂಚಾಲಕರಾದ ನಾರಾಯಣಸ್ವಾಮಿ, ಯೋಗೇಶ್ ಎಸ್., ವಲಯ ಸೇನಾನಿ ಡಾ.ಬಿ. ವಿಕ್ರಮ್, ರೋಟರಿ ರಾಯಲ್ ಅಧ್ಯಕ್ಷ ಯು.ವಿ. ಸಚ್ಚಿನ್, ಕಾರ್ಯದರ್ಶಿ ಪುನೀತ್, ಖಜಾಂಚಿ ರವಿ ಕುಮಾರ್ ಪಿ. ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?