ಬಾಳೂರು-ನೂತನ ಅಧ್ಯಕ್ಷರ ಪದಗ್ರಹಣ-ಕಾರ್ಯಕರ್ತರ ಒಳ ಅಸಮಧಾನದಿಂದ ಬಿಜೆಪಿ ಪಕ್ಷ ಸೋಲು ಅನುಭವಿಸುವಂತಾಯಿತು-ಎಂ.ಕೆ.ಪ್ರಾಣೇಶ್ ವಿಷಾದ

ಕೊಟ್ಟಿಗೆಹಾರ:ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೂಡಿಗೆರೆ ಕ್ಷೇತ್ರದ ಕಾರ್ಯಕರ್ತರ ಒಳ ಅಸಮಧಾನದಿಂದ ಬಿಜೆಪಿ ಪಕ್ಷ ಸೋಲು ಅನುಭವಿಸುವಂತಾಯಿತು’ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ವಿಷಾದ ವ್ಯಕ್ತ ಪಡಿಸಿದರು.

ಅವರು ಬಾಳೂರು ಹೋಬಳಿಯ ಬಿಜೆಪಿ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಾಳೂರು ಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಒಂದು ಸಮಯದಲ್ಲಿ ಕಮ್ಯೂನಿಸ್ಟ್ ಪಕ್ಷದ ವರ್ಚಸ್ಸಿತ್ತು-ಬಿಗಿ ಹಿಡಿತವಿತ್ತು.ಅದನ್ನು ಬಿಜೆಪಿ ಕಾರ್ಯಕರ್ತರು ಹಂತಹಂತವಾಗಿ ಬಿಡಿಸಿ ಬಿಜೆಪಿಯನ್ನು ಬಲಾಢ್ಯವಾಗಿ ಸಂಘಟಿಸಿದ್ದಾರೆ.ಈಗ ಬಿಜೆಪಿ ಪಕ್ಷ ಬೂತ್ ಮಟ್ಟದಲ್ಲಿ ಗಟ್ಟಿಯಾಗಿದೆ.ಇದರ ಹಿಂದೆ ಕಾರ್ಯಕರ್ತರ ಪರಿಶ್ರಮ ತ್ಯಾಗಗಳು ಸಾಕಷ್ಟಿವೆ.ನಮ್ಮ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಪಣ ತೊಡಬೇಕು ಪಣ ತೊಡಬೇಕು ಎಂದು ಪ್ರಾಣೇಶ್ ಕರೆ ನೀಡಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ,ವಕ್ಫ್ ಕಾಯಿದೆಯನ್ನು ಸಂವಿಧಾನ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ.ಸರ್ವ ದರ್ಮದ ಶಾಸನಗಳು ಸಂವಿಧಾನದ ವ್ಯಾಪ್ತಿಗೆ ಬರಬೇಕು.ವಿವಿಧ ಮಂಡಳಿಗಳು ಸಂವಿಧಾನದಡಿಯಲ್ಲೇ ಕಾರ್ಯ ನಿರ್ವಹಿಸಬೇಕು.ವಕ್ಫ್ ಕಾಯಿದೆಯು ಸಂವಿಧಾನದಡಿಯಲ್ಲಿ ಕಾರ್ಯ ನಿರ್ವಹಿ ಸುತ್ತಿಲ್ಲ.ಅದನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನದಡಿಯಲ್ಲಿ ಕಾಯಿದೆ ತಿದ್ದುಪಡಿ ಮಾಡಲು ಮುಂದಾಗಿದೆ.ಬಿಜೆಪಿ ಸರ್ಕಾರ ವಕ್ಫ್ ಕಾಯಿದೆ ರದ್ದು ಪಡಿಸಲು ಹೊರಟಿಲ್ಲ.ಅದನ್ನು ಕಾಂಗ್ರೆಸ್ ಸುಳ್ಳು ಹೇಳಿ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಬೇಸರ ಹೊರಹಾಕಿದರು.

ಮಾಜಿ ಸಚಿವ ಜೀವರಾಜ್ ಮಾತನಾಡಿ,ಕಾಂಗ್ರೆಸ್ ಸರ್ಕಾರ ಬಡವರ ಬಿಪಿಎಲ್ ಕಾರ್ಡುಗಳನ್ನು ಹಿಂಪಡೆಯಲು ಹೊರಟಿದೆ.ನಗರಗಳಲ್ಲಿ ಪಡಿತರ ಅಂಗಡಿದಾರರಿಗೆ ಅಕ್ರಮ ಬಿಪಿಎಲ್ ಕಾರ್ಡುಗಳಿವೆ.ಅವುಗಳನ್ನು ಮೊದಲು ರದ್ದು ಪಡಿಸಲಿ.ರೈತರು ಬಡವರಾಗಿದ್ದು ಅವರ ಬಿಪಿಎಲ್ ಕಾರ್ಡ್ ರದ್ದು ಪಡಿಸುವ ಕಾಂಗ್ರೆಸ್ ಸರ್ಕಾರದ ನೀತಿ ಎಷ್ಟು ಸರಿ ಎಂದು ಪ್ರಶ್ನಿಸಿದರು.ಸರ್ಕಾರ ಬಡವರ ಬಿಪಿಎಲ್ ಕಾರ್ಡ್ ರದ್ದು ಪಡಿಸುವುದನ್ನು ನಿಲ್ಲಿಸಲಿ ಎಂದು ಆಗ್ರಹಿಸಿದರು.

ನೂತನ ಅಧ್ಯಕ್ಷ ಬಿ.ಬಿ.ಮಂಜುನಾಥ್ ಮಾತನಾಡಿ’ ಮುಂದೆ ಸೊಸೈಟಿ ಚುನಾವಣೆಗಳು ಬರುತ್ತಿವೆ.ಈ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಸಹಕಾರ ನೀಡಿ ಬೆಜೆಪಿ ಗೆಲ್ಲಿಸಲು ಪಣ ತೊಡಬೇಕು.ಎಲ್ಲರ ಸಹಕಾರದಿಂದ ಮಾತ್ರ ಬಿಜೆಪಿ ಪಕ್ಷ ಗೆಲ್ಲಿಸಲು ಸಾಧ್ಯ ಎಂದು ಮನವಿ ಮಾಡಿಕೊಂಡರು.

ಮುಖಂಡರಾದ ದೀಪಕ್ ದೊಡ್ಡಯ್ಯ,ಟಿ.ಎಂ.ಗಜೇಂದ್ರ,ಬಿ.ಎಂ.ಭರತ್,ನರೇಂದ್ರಜೀ,ಬಿ.ಆರ್.ಬಾಲಕೃಷ್ಣ ಮತ್ತಿತರರು ಮಾತನಾಡಿದರು.

ಸಮಾರಂಭದಲ್ಲಿ ನೂತನ ಅಧ್ಯಕ್ಷ ಬಿ.ಬಿ.ಮಂಜುನಾಥ್ ಅವರಿಗೆ ನಿರ್ಗಮಿತ ಅಧ್ಯಕ್ಷ ಎಂ.ಎಲ್ ವಿಜೇಂದ್ರ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಬಿಜೆಪಿ ಪಕ್ಷದ ಬಲವರ್ಧನೆಗೆ ತಾಲ್ಲೂಕು ಮಟ್ಟದಲ್ಲಿ ಅತಿ ಹೆಚ್ಚು ಸದಸ್ಯತ್ವ ನೋಂದಾಯಿಸಿದ ಪರೀಕ್ಷಿತ್ ಜಾವಳಿ,ದಿನಕರ್ ಪೂಜಾರಿ,ಹಾಗೂ ನಿಕಟಪೂರ್ವ ಅಧ್ಯಕ್ಷ ಎಂ.ಎಲ್.ವಿಜೇಂದ್ರ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಮುಖಂಡರಾದ ಮನೋಜ್, ಪ್ರಮೋದ್, ಕೆ.ಸಿ.ರತನ್, ಜೆ.ಎಸ್.ರಘು, ಬಿ.ಎಸ್.ವಿಕ್ರಂ, ಧನಿಕ್ ಕೊಡದಿಣ್ಣೆ, ಯತೀಶ್,ಶರತ್,ರಘುಪತಿ,ವೆಂಕಟೇಶ್, ಪ್ರಮೀಳ ಮಂಜಯ್ಯ,ಸುಧಾ ಯೋಗೇಶ್,ಲೋಕೇಶ್ ಮತ್ತಿತರ ಮುಖಂಡರು ಇದ್ದರು.

————ಆಶಾ ಸಂತೋಷ್

Leave a Reply

Your email address will not be published. Required fields are marked *

× How can I help you?