ಕೊರಟಗೆರೆ-ಇರಕಸಂದ್ರ ಗ್ರಾಮದ ಶ್ರೀ ಹನುಮಂತ ರಾಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯಿಂದ ನಡೆದ ಲಕ್ಷದೀಪೋತ್ಸವ

ಕೊರಟಗೆರೆ-ತಾಲೂಕಿನ ಕೋಳಾಲ ಹೋಬಳಿಯ ಇರಕಸಂದ್ರ ಗ್ರಾಮದ ಶ್ರೀ ಹನುಮಂತ ರಾಮಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಅಮಾವಾಸ್ಯೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಭಾಗವಹಿಸಿ ದೀಪ ಹಚ್ಚಿ ಭಕ್ತಿ ಪರಾಕಾಷ್ಠೆ ಮೆರೆದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಬಾಳೆಹೊನ್ನೂರು ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡುತ್ತಾ,ರಾಜ್ಯದಲ್ಲಿ ಮಳೆ ಸಿಂಚನ ಆಗುತ್ತಿದ್ದು ದೀಪೋತ್ಸವಕ್ಕೆ ಇದೊಂದು ಶುಭ ಸೂಚನೆ.ಮಳೆಯ ಸಿಂಚನದ ನಡುವೆಯೂ ಸಡಗರ ಸಂಭ್ರಮದಿಂದ ನಡೆಯುತ್ತಿರುವ ದೀಪೋತ್ಸವ ಅಭಿವೃದ್ಧಿಯ ಸೂಚಕದಂತೆ ಗೋಚರಿಸುತ್ತಿದೆ.ದೇಶದೆಲ್ಲೆಡೆ ಮಳೆ-ಬೆಳೆ ಸಮೃದ್ಧವಾಗಿ ರೈತರ ಸಂಕಷ್ಟಗಳು ತೀರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾಗಿ ತಿಳಿಸಿದರು.

ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನದ ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ,ಈ ದೀಪಗಳ ಬೆಳಕು ಎಲ್ಲ ಭಕ್ತರ ಬಾಳನ್ನು ಬೆಳಗಲಿ.ಸನಾತನ ಧರ್ಮದ ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದೊಂದು ವಿಶೇಷವಿ ರುತ್ತದೆ.ಭಗವಂತ ಸರ್ವರ ಇಷ್ಟಾರ್ಥಗಳನ್ನು ಈಡೇಸರಿಸಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಊರಿನ ಜನರು ಅಕ್ಕ-ಪಕ್ಕದ ಗ್ರಾಮಸ್ಥರು ಹಾಗೂ ದೇವಾಲಯ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

————–ವರದಿ -ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *

× How can I help you?