ಕೆ.ಆರ್.ಪೇಟೆ-ರಾಜನಾಯಕ್ ಅವರು ತಾಲ್ಲೂಕಿನ ನಾಯಕ ಸಮಾಜದ ಮುಖಂಡರಾಗಿ,ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕರಾಗಿ,ಅಕ್ಕಿಹೆಬ್ಬಾಳು ಸೊಸೈಟಿ ನಿರ್ದೇಶಕರಾಗಿ,ಹಲವು ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿಕೊಂಡು ಬಂದಿದ್ದು ಜನಮನ್ನಣೆಗಳಿಸಿದ್ದಾರೆ.ಅವರು ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣಾಲಯ ಮತ್ತು ಪ್ರಕಾಶನ(ನಿ) ದ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ತಾಲ್ಲೂಕಿಗೆ ಸಿಕ್ಕ ಗೌರವ ಎಂದು ನಾಯಕ ಸಮಾಜದ ಮುಖಂಡ ಅಕ್ಕಿಹೆಬ್ಬಾಳು ವಾಸು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ನಾಯಕ ಸಮಾಜದ ವತಿಯಿಂದ ರಾಜನಾಯಕ್ ರವರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೂತನ ಉಪಾಧ್ಯಕ್ಷ ಎ.ಆರ್.ರಾಜನಾಯಕ್ ಮಾತನಾಡಿ,ಮಂಡ್ಯ ಜಿಲ್ಲೆಯ ಸಹಕಾರ ಸಂಘದ ನಿರ್ದೇಶಕರು ನನ್ನ ಮೇಲೆ ವಿಶ್ವಾಸ ಇಟ್ಟು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ರಾಜ್ಯ ಬಿಜೆಪಿ ಎಸ್.ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಮಹೇಶ್ ನಾಯಕ್ , ಮುಖಂಡರುಗಳಾದ ಜಿ.ಪಿ.ರಾಜು ನರಸಿಂಹನಾಯಕ್ ಸೇರಿದಂತೆ ಹಲವರು ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
————–ಶ್ರೀನಿವಾಸ್ ಕೆ.ಆರ್ ಪೇಟೆ