ಹಾಸನ:ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಸಂಸ್ಥಾಪಕರು ಹಾಗೂ ಸಂಸದರಾದ ಚಂದ್ರಶೇಖರ್ ಅಜಾದ್ ರಾವಣ್ ಅವರ 38ನೇ ಹುಟ್ಟುಹಬ್ಬವನ್ನು ಹಾಸನ ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಸನದ ಹಿಮ್ಸ್ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡುವ ಮೂಲಕ ಅರ್ಥ ಪೂರ್ಣವಾಗಿ ಇಂದು ಆಚರಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಪ್ರಸನ್ನ,ಚಂದ್ರಶೇಖರ್ ಅಜಾದ್ ರವರು ಬಡವರು, ಅಲ್ಪಸಂಖ್ಯಾತರು, ಆದಿವಾಸಿ ಬುಡಕಟ್ಟು ಜನಾಂಗದವರ ಹಕ್ಕುಗಳಿಗೆ ಹೋರಾಟ ಮಾಡಿ ನ್ಯಾಯ ಕೊಡಿಸುತ್ತಿದ್ದಾರೆ.ನೊಂದವರಿಗೆ ಧ್ವನಿಯಾಗಿದ್ದು ರಾಷ್ಟ್ರೀಯ ಜಾತಿಗಣತಿಗಾಗಿ ಹೋರಾಡಿದವರು.ಅವರ ಸೇವೆ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತಾ ಬುದ್ದ, ಬಸವ,ಅಂಬೇಡ್ಕರ್ ಅವರ ಆಶೀರ್ವಾದ ಅವರ ರ ಮೇಲೆ ಇರಲಿ ಎಂದು ಭಗವಂತನಲ್ಲಿ ಸಂಘದ ಪದಾಧಿಕಾರಿಗಳು ಬೇಡಿಕೊಳ್ಳುತ್ತೇವೆ ಎಂದರು.
ಈಗಾಗಲೇ ಸಂಸದರಾಗಿರುವ ಅವರು ಮುಂದಿನ ದಿನಗಳಲ್ಲಿ ಸಚಿವರು,ಮುಖ್ಯಮಂತ್ರಿಗಳಾಗುವ ಮಟ್ಟಕ್ಕೆ ಬೆಳೆಯಲಿ ಎಂದು ಆಶಿಸಿದರು.
ಹಾಸನದ ಸಿದ್ದಯ್ಯ ನಗರದಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳಿಗೆ ಪೆನ್ನು ಹಾಗೂ ನೋಟ್ ಬುಕ್ ವಿತರಣೆ ಮಾಡಿ ಅಜಾದ್ ಅವರ ಹೋರಾಟದ ಚಿಂತನೆಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ನ ಶಿವಶಂಕರ್ ಕುಂಟೆ, ಹಾಸನ ತಾಲ್ಲೂಕು ಅಧ್ಯಕ್ಷ ಚೇತನ್, ಉಪಾಧ್ಯಕ್ಷರಾದ ಯೋಗೆಶ್ ಎನ್ ಸಿ, ದಿಲೀಪ್ ಮಾದಲ ಗೇರೆ, ತಾಲ್ಲೂಕು ಉಪಾಧ್ಯಕ್ಷ ಸಚಿನ್,ಜಿಲ್ಲಾ ಕಾರ್ಯದರ್ಶಿ ಬಾಬು ,ಜಿಲ್ಲಾ ಖಜಾಂಚಿ ಮುಜೀರ್ ಪಾಷ ,ಗೋವಿಂದ ರಾಜು ಬೂಕ, ಹರೀಶ್ ಮಟ್ಟ ನವಿಲೆ, ರಾಮಚಂದ್ರು, ಮಹಮ್ಮದ್ ಶಫಿ, ಶ್ಯಾಮ ಸುಂದರ ಆಡುವಳ್ಳಿ, ಇನ್ನು ಮುಂತಾದವರು ಇದ್ದರು