ಹಾಸನ-ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ಎಂ.ಸಿ ಗಿರೀಶ್ ಅವರು ದ್ರಾವಿಡ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ನಿಂದ ಕುಲಪತಿಗಳಿಗೆ ದತ್ತವಾದ ಅಧಿಕಾರಕ್ಕೆ ಅನುಗುಣವಾಗಿ ಮತ್ತು ಪರೀಕ್ಷಾ ಮಂಡಳಿಯ ಶಿಫಾರಸ್ಸಿನ ಮೇರೆಗೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ.
ಬೆಂಗಳೂರಿನ ದೇವನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಪಿ.ಎನ್ ನಾರಾಯಣಮ್ಮ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಾದರಪಡಿಸಿದ”A STUDY OF INSTITUTIONAL CREDIT TO SMALL BORROWERS IN RURAL AREAS OF HASSAN DISTRICT “ಎಂಬ ಮಹಾ ಪ್ರಬಂಧವನ್ನು ಅರ್ಥಶಾಸ್ತ್ರ ವಿಷಯವನ್ನು ಪಿ.ಹೆಚ್.ಡಿ ಪದವಿಗಾಗಿ ಅಂಗೀಕರಿಸಲಾಗಿದೆ.
———-ಶ್ರುತಿ