ಹೊಳೆನರಸೀಪುರ:ಕಾರ್ಡ್ಸ್ ಸುವಿದಾ ಕೇಂದ್ರದ ವತಿಯಿಂದ ಡಿಸೆಂಬರ್ 6 ರ ಶುಕ್ರವಾರ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜನೆ

ಹೊಳೆನರಸೀಪುರ:ಡಾ. ಬಿ.ಆರ್.ಅಂಬೇಡ್ಕರ್ ಅವರ 69 ನೇ ಪರಿನಿಬ್ಬಾಣ ದಿನದ ಅಂಗವಾಗಿ ಪಟ್ಟಣದ ಡೊನಾಲ್ಡ್ ರಂಗಸ್ವಾಮಿ ಮಾಲೀಕತ್ವದ ಕಾರ್ಡ್ಸ್ ಸುವಿದಾ ಕೇಂದ್ರದ ವತಿಯಿಂದ ಡಿಸೆಂಬರ್ 6 ರ ಶುಕ್ರವಾರ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕಿ ವೀಣಾ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,ನಮ್ಮ ಸಂಸ್ಥೆಯ ವತಿಯಿಂದ ನಡೆಸುತ್ತಿರುವ ಈ ಆರೋಗ್ಯ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ,ಇದೇ ಸಂದರ್ಭದಲ್ಲಿ ರಕ್ತದಾನ ಮಾಡಿ ಸಾವಿರಾರು ಪ್ರಾಣಗಳನ್ನು ಉಳಿಸಲು ಸಹಕರಿಸಿ ಎಂದು ವಿನಂತಿಸಿದರು.

ಶಿಬಿರದಲ್ಲಿ ಭಾಗವಹಿಸಿ ತಪಾಸಣೆ ಮಾಡಿಸಿಕೊಂಡವರಿಗೆ ಅಗತ್ಯ ಇರುವವರಿಗೆ ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು.ಈ ಶಿಬಿರ ಹೌಸಿಂಗ್ ಬೋರ್ಡ್ ನ ಕಾರಂಜಿ ಕಟ್ಟೆ ಸಮೀಪ ಇರುವ ನಮ್ಮ ಸಂಸ್ಥೆಯ ಆವರಣದಲ್ಲಿ ನಡೆಯುವುದು ಎಂದು ತಿಳಿಸಿದ್ದಾರೆ.

ಈ ಶಿಭಿರದಲ್ಲಿ ಹಾಸನಾಂಭ ವೈದ್ಯಕೀಯ ಆಸ್ಪತ್ರೆ ಹಾಗೂ ವಿವಿದೆಡೆಯಿಂದ ಆಗಮಿಸುವ ನುರಿತ ತಜ್ಞ ವೈದ್ಯರು ಆರೋಗ್ಯ ತಪಾಸಣೆ ನಡೆಸಲಿದ್ದಾರೆ ಎಂದು ಸಂಸ್ಥೆಯ ನವೀನ್ ತಿಳಿಸಿದರು.

ಸಂಸ್ಥೆಯ ದೀಪಿಕಾ, ಅನುಪಮಾ, ಪ್ರೀತಂ ಉಪಸ್ಥಿತರಿದ್ದರು.

—-ವಸಂತ್ ಕುಮಾರ್

Leave a Reply

Your email address will not be published. Required fields are marked *

× How can I help you?