ಹೊಳೆನರಸೀಪುರ:ಹಾಸನದ ಕಾಂಗ್ರೆಸ್ ಸಮಾವೇಶ ಕಂಡು ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರಿಗೂ ಭಯ ಹುಟ್ಟಲಿದೆ-ಟಿ.ಎಂ. ಶಾಹಿದ್ ತೆಖಿಲ್

ಹೊಳೆನರಸೀಪುರ:ಹಾಸನದಲ್ಲಿ 5 ರಂದು ನಡೆಯುವ ಜನಕಲ್ಯಾಣ ಸಮಾವೇಶದ ನಂತರ ರಾಜ್ಯದಲ್ಲಿ ನಡೆಯುವ ಜಿಲ್ಲಾ ಪಂಚಾಯ್ತಿ,ತಾಲ್ಲೂಕು ಪಂಚಾಯ್ತಿ,ಪುರಸಭೆ, ನಗರಸಭೆ,ವಿಧಾನ ಸಭೆ ಚುನಾವಣೆಗಳಲೆಲ್ಲಾ ಕಾಂಗ್ರೆಸ್ ಪಕ್ಷ ಗೆಲ್ಲುತ್ತದೆ.ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರದ ಸಾಧನೆಯನ್ನು ವಿವರಿಸಿ,ಬಿಜೆಪಿ,ಜೆಡಿಎಸ್ ನವರ ಸುಳ್ಳು ಆರೋಪದ ಮುಖವಾಡವನ್ನು ತೆಗೆದು ಕಾಂಗ್ರೆಸ್ ಗೆ ಬಲ ತಂದುಕೊಡಲಿದ್ದಾರೆ ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ.ಶಾಹಿದ್ ತೆಖಿಲ್ ತಿಳಿಸಿದರು.

ಮಂಗಳವಾರ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿ, ಹಾಸನ ಸಮಾವೇಶಕ್ಕೆ ಸೇರುವ ಜನರನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರಿಗೂ ಭಯ ಹುಟ್ಟಲಿದೆ. ಕೇಂದ್ರ ಸರಕಾರ ತನ್ನ ಅಧೀನದಲ್ಲಿರುವ ಈಡಿ ಮತ್ತು ಇತರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹೆದರಿಸಲು ನಿರಂತರ ಪ್ರಯತ್ನ ಪಡುತ್ತಿದ್ದಾರೆ.ಆದರೆ ಕಾಂಗ್ರೆಸ್ ಸರಕಾರದ ಸಾಧನೆ ಮುಂದೆ ಇವರ ಯಾವುದೇ ಕುತಂತ್ರಗಳು ಫಲ ನೀಡುವುದಿಲ್ಲ.

ಕಾಂಗ್ರೆಸ್ ತಂದಿರುವ ಗ್ಯಾರೆಂಟಿ ಯೋಜನೆ ಬಿಜೆಪಿ, ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೂ ತಲುಪುತ್ತಿದೆ,ನಮ್ಮ ಪಕ್ಷದ ಈ 5 ಗ್ಯಾರೆಂಟಿ ಯೋಜನೆ ಎಲ್ಲರಿಗಾಗಿ ಜಾರಿಗೆ ತಂದಿದ್ದು. ಈ ಯೋಜನೆಗಳು ಪಾಕ್ಷಾತೀತವಾಗಿದ್ದು ಇದರ ಉಪಯೋಗ ಪಡೆದ ಎಲ್ಲರೂ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲನೀಡಲಿದ್ದಾರೆ ಎಂದು ಆಶಿಸಿದರು.

ಬಿಜೆಪಿಯವರು ಮಹಾರಾಷ್ಟ್ರ ಮಾದರಿಯಲ್ಲಿ ನಾವು ಅಧಿಕಾರ ಪಡೆಯುತ್ತೇವೆ ಎಂದು ಕನಸುಕಾಣುತ್ತಿದ್ದಾರೆ. ಇಂತಹ ಕನಸನ್ನು ನನಸಾಗಲು ನಮ್ಮ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ಬಿಡುವುದಿಲ್ಲ. ಇಂತಹ ದುಸ್ಸಾಹಸಕ್ಕೆ ಕೈ ಹಾಕದಿದ್ದರೆ ಒಳ್ಳೆಯದು ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಬಿಜೆಪಿ ಪಕ್ಷದ ಒಳಜಗಳ ಎಲ್ಲರಿಗೂ ಗೊತ್ತಿದೆ. ಜೆಡಿಎಸ್ ಕುಟುಂಬದ ಪಕ್ಷ ಎಂದು ಜನರು ತಿರಸ್ಕರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಭರವಸೆ ನೀಡುವ ಏಕೈಕ ಪಕ್ಷ ಕಾಂಗ್ರೆಸ್ ಮಾತ್ರ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಲಕ್ಷ್ಮಣ, ಹಾಸನ ಜಿಲ್ಲೆಯಲ್ಲಿ ಹಿಂದೆಂದೂ ಮಾಡಿರದಂತಹ ಸಮಾವೇಶವನ್ನು ಮಾಡುತ್ತಿದ್ದೇವೆ. ಈ ಸಮಾವೇಶಕ್ಕೆ ಸಕಲ ಸಿದ್ದತೆಯನ್ನು ಅಚ್ಚುಕಟ್ಟಾಗಿ ಮಾಡಿಕೊಂಡಿದ್ದೇವೆ. ಕಾರ್ಯಕರ್ತರಿಗಾಗಿ ಅಗತ್ಯಕ್ಕೆ ತಕ್ಕಷ್ಟು ವಾಹನದ ವ್ಯವಸ್ಥೆ ಮಾಡಿದ್ದೇವೆ. ತಾಲ್ಲೂಕಿನಿಂದ 20 ಸಾವಿರ ಜನರು ಸಮಾವೇಶಕ್ಕೆ ಹೊರಡುತ್ತಿದ್ದಾರೆ ಎಂದು ವಿವರಿಸಿದರು.

ಕಾಂಗ್ರೆಸ್ ಮುಕಂಡರಾದ ಕೆ.ಕೆ. ಲೋಕೇಶ್, ಕೆ.ಆರ್. ಸುದರ್ಶನ್, ಬಾಗೀವಾಳು ಮಂಜು, ಪುರಸಭೆ ಮಾಜಿ ಸದಸ್ಯ ರಾಘವೇಂದ್ರ, ಮೀರ್ ಬಾಬರ್ ಅಲಿ,ರವಿಕುಮಾರ್ ಪತ್ರಿಕಾಘೋಷ್ಠಿಯಲ್ಲಿ ಭಾಗವಹಿಸಿದ್ದರು.

——————ಸುಕುಮಾರ್

Leave a Reply

Your email address will not be published. Required fields are marked *

× How can I help you?