ಬೆಂಗಳೂರು-ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಅವರನ್ನು ಸರ್ಕಾರ, ಅಕಾಡೆಮಿ,ಸಾಹಿತ್ಯ ಪರಿಷತ್ತುಗಳು ನಿರ್ಲಕ್ಷ್ಯ ಮಾಡಿವೆ-ಜಾಣಗೆರೆ ವೆಂಕಟರಾಮಯ್ಯ

ಬೆಂಗಳೂರು-ಸೃಜನಶೀಲ ಸಾಹಿತ್ಯ ರಚನೆಯಲ್ಲಿ ಹಾಡ್ಲಹಳ್ಳಿ ನಾಗರಾಜ್ ಅವರ ಹೆಸರು ಮಂಚೂಣಿಯಲ್ಲಿರಲು ಯಾವ ಹಿಂಜರಿಕೆಯೂ ಇರಬೇಕಾಗಿಲ್ಲ ಎಂದು ಹಿರಿಯ ಸಾಹಿತಿ, ಹೋರಾಟಗಾರರಾದ ಜಾಣಗೆರೆ ವೆಂಕಟರಾಮಯ್ಯ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ ಹಾಡ್ಲಹಳ್ಳಿ ನಾಗರಾಜ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಐವತ್ತು ವರ್ಷಗಳ ಸುಧೀರ್ಘ ಸಾಹಿತ್ಯ ಸೇವೆ ಮಾಡಿಕೊಂಡು ಬಂದಿರುವ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಅವರನ್ನು ಸರ್ಕಾರ, ಅಕಾಡೆಮಿ,ಸಾಹಿತ್ಯ ಪತಿಷತ್ತುಗಳು ನಿರ್ಲಕ್ಷ್ಯ ಮಾಡಿವೆ.ಇದು ಆರೋಗ್ಯಕರ ಬೆಳವಣಿಗೆಯಲ್ಲ ಎಂದ ಅವರು ಸರ್ಕಾರಕ್ಕೆ ಸೆಡ್ಡು ಹೊಡೆಯುವಂತಹಾ ಅಭಿನಂದನಾ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನೆರವೇರಿಸಿ ಸರ್ಕಾರದ ಜವಬ್ದಾರಿಯನ್ನು ನೆನಪಿಸಲಾಗಿದೆ ಎಂದರು.

ಹಣ, ಜಾತಿ, ಲಾಬಿಗಳ ಹಿಂದೆ ಬಿದ್ದು ಅರ್ಜಿ ಹಾಕಿಕೊಂಡು ಪ್ರಶಸ್ತಿ ಪಡೆಯುವ ಈ ಕಾಲದಲ್ಲಿ ಹಾಡ್ಲಹಳ್ಳಿ ನಾಗರಾಜ್ ಅವರ ಸಾಹಿತ್ಯಿಕ, ಸಾಮಾಜಿಕ ಹಾಗು ವೈಯಕ್ತಿಕ ಜೀವನ ಈ ಕಾಲದ ಒಂದು ಅವಶ್ಯಕ ಮಾದರಿಯಾಗಿದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆಯವರು ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಅವರ ಧರ್ಮಪತ್ನಿ ದಿ. ಭವಾನಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ನೆರವೇರಿಸಿದರು.

ನಾಗರಾಜ್ ಅವರ ಸಜ್ಜನಿಕೆ, ಸೌಮ್ಯತೆ ಅವರನ್ನು ಮುಖ್ಯವಾಹಿನಿ ಸಾಹಿತ್ಯ ಕ್ಷೇತ್ರಕ್ಕೆ ಬರದಂತೆ ತಡೆದಿದೆ. ಏನನ್ನೂ ಕೇಳದ ಸ್ವಾಭಿಮಾನಿ ಯೊಬ್ಬನನ್ನು ಸಾಹಿತ್ಯ ಕ್ಷೇತ್ರ ನಿರ್ಲಕ್ಷ್ಯ ಮಾಡುವುದು ಆ ಕ್ಷೇತ್ರದ ಸೂಕ್ಷ್ಮತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ಡಾ. ಬೇಲೂರು ರಘುನಂದನ್ ಅವರು, ಪೃಕೃತಿ ಸೂಕ್ಷ್ಮಗಳನ್ನು ಅರಿಯಲು ಹಾಡ್ಲಹಳ್ಳಿ ಅವರ ಕೃತಿಗಳು ಅತ್ಯಂತ ಸಹಕಾರಿಯಾಗಿವೆ. ಪ್ರಕೃತಿಯ ಬಗ್ಗೆ ಅತಿ ಹೆಚ್ಚು ಮಾತನಾಡಬೇಕಾದ ಈ ದಿನಗಳಲ್ಲಿ ಪ್ರಕೃತಿ ಲೇಖಕ ಹಾಡ್ಲಹಳ್ಳಿ ನಾಗರಾಜ್ ಅವರ ಬರಹಗಳು ಮುನ್ನೆಲೆಗೆ ಬರಬೇಕಿದೆ ಎಂದರು.

ಹಾಸನ ಹಾಗು ಬೆಂಗಳೂರಿನ ಸಾಹಿತ್ಯಾಸಕ್ತರು ಸೇರಿ ಹಾಡ್ಲಹಳ್ಳಿ ನಾಗರಾಜ್ ಅವರಿಗೆ ಅದ್ದೂರಿಯಾಗಿ ಸನ್ಮಾನ ನೆರವೇರಿಸಿದರು.

ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಮಾತಾನಾಡಿ ಲೇಖಕ ಹಾಡ್ಲಹಳ್ಳಿ ನಾಗರಾಜ್ ಅವರು ಮಲೆನಾಡಿನ ಸಂತನಂತೆ ಕುಳಿತು ಸಾಹಿತ್ಯ ರಚಿಸಿದ್ದಾರೆ ಎಂದರು.

ಮಲೆನಾಡಿನ ಹಲವಾರು ಸಂಘಟನೆಗಳು, ಸಾಹಿತ್ಯ ಸಂಘಟನೆಗಳು, ರಂಗಕಲಾವಿದರ ಸಂಘಟನೆಗಳು ಹಾಗು ಹಲವಾರು ಸಂಘ ಸಂಸ್ಥೆಗಳು ಸಂಭ್ರಮದಿಂದ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಚಲಂ ಹಾಡ್ಲಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ನಾಡಿನ ಕೆಲಸ ಮಾಡಿದವರಿಗೆ ಗೌರವ ಸಲ್ಲಬೇಕು. ಆ ನಿಟ್ಟಿನಲ್ಲಿ ಕಾರ್ಯಕ್ರಮ ನಡೆದಿದೆ ಎಂದು ಹೇಳಿದರು.

ಕವಿ ಸವಿರಾಜ್ ಆನಂದೂರು ನಿರೂಪಣೆ ಮಾಡಿ, ಧರ್ಮರಾಜ ಕಡಗ ಸ್ವಾಗತ ಮಾಡಿದರು. ಕತೆಗಾರ್ತಿ ದಯಾ ಗಂಗನಘಟ್ಟ ವಂದಿಸಿದರು.

Leave a Reply

Your email address will not be published. Required fields are marked *

× How can I help you?