ಹಾಸನ:ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ [mce] ಹಾಗು [me-riise ]’ಫೌಂಡೇಶನ್ ಇಂಟ್ಯೂಸೆಂಟ್ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್’ನೊಂದಿಗೆ ಒಪ್ಪಂದಕ್ಕೆ (mou) ಸಹಿ ಹಾಕುವ ಮೂಲಕ ತಂತ್ರಜ್ಞಾನ ಶಿಕ್ಷಣವನ್ನು ಇನ್ನು ಎತ್ತರಕ್ಕೆ ಒಯ್ಯುವ ಮತ್ತು ಹೊಸ ಪ್ರಯೋಗಗಳನ್ನು ನಡೆಸಲು ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ ಎಂದು ‘ME -RIISE ‘ ಫೌಂಡೇಶನ್ ನ ಸಿ.ಈ.ಓ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಡೀನ್ ಡಾ.ಗೀತಾ ಕಿರಣ್ ಹರ್ಷ ವ್ಯಕ್ತಪಡಿಸಿದರು.
ನಗರದ ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ ಕ್ಯಾಂಪಸ್‌ನಲ್ಲಿ ಹಮ್ಮಿಕೊಂಡಿದ್ದ ಜಂಟಿ ಒಪ್ಪಂದದ ಸಮಾರಂಭದಲ್ಲಿ ಮಾತನಾಡಿದ ಅವರು,ಈ ಒಪ್ಪಂದದ ಮೂಲಕ ಸಲಹೆ,ಸಂಶೋಧನೆ,ಅಭಿವೃದ್ಧಿ ಸಂಬಂಧಿತ ಸೇವೆಗಳನ್ನು ಉತ್ತೇಜಿಸುವುದರ ಜೊತೆಗೆ ಸೈಬರ್ ಸೆಕ್ಯುರಿಟಿ,ಐ.ಒ.ಟಿ ಮತ್ತು ಡಿಜಿಟಲ್ ಫೊರೆನ್ಸಿಕ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮೀಸಲಾಗಿರುವ ಅತ್ಯಾಧುನಿಕ ಕೇಂದ್ರವನ್ನು(ಸಿಒಇ) ಸ್ಥಾಪಿಸುವ ಗುರಿಯನ್ನು ಈ ಪಾಲುದಾರಿಕೆ ಹೊಂದಿದೆ ಎಂದರು.
ಈ ಒಪ್ಪಂದಕ್ಕೆ ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾದ ಡಾ.ಎ.ಎಸ್.ಎಸ್.ಪ್ರದೀಪ್,ಸಹಾಯಕ ಆಡಳಿತಾಧಿಕಾರಿ ಸಿ. ಡಿ ಪಾರ್ವತಮ್ಮ ,ಸಹ-ಸ್ಥಾಪಕ ಎಸ್.ಸಂತೋಷ್ ಕುಮಾರ್,ಇಂಟ್ಯೂಸೆಂಟ್ ಇನ್ನೋವೇಶನ್ಸ್ ಪ್ರೈ,ಲಿಮಿಟೆಡ್ ನ ನಿರ್ದೇಶಕ ಅರುಣ್ ಆರ್, ಸಹಿ ಹಾಕಿದರು.
ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಎ.ಜೆ.ಕೃಷ್ಣಯ್ಯ ಅವರು ಮಾತನಾಡಿ, ಈ ಪಾಲುದಾರಿಕೆಯು ಸುಧಾರಿತ ತಾಂತ್ರಿಕ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ಮತ್ತು ಅವರನ್ನು ಉದ್ಯಮಶೀಲರನ್ನಾಗಿಸಲು ಅತ್ಯಂತ ಸಹಾಯಕವಾಗುತ್ತದೆ.ಸೆಂಟರ್ ಆಫ್ ಎಕ್ಸಲೆನ್ಸ್ ಶೈಕ್ಷಣಿಕ ಕಲಿಕೆ ಮತ್ತು ನೈಜ-ಪ್ರಪಂಚದ ಅನ್ವಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಇಂಟ್ಯೂಸೆಂಟ್ ಇನ್ನೋವೇಶನ್ಸ್ ಪರವಾಗಿ ಟಿ.ಎಸ್. ಸಂತೋಷ್ ಕುಮಾರ್ ಮಾತನಾಡಿ,ಈ ಸಹಯೋಗವು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಮತ್ತು ವಿವಿಧ ಪ್ರಯೋಗಗಳನ್ನು ನಡೆಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.