ಮೈಸೂರು-ಇನ್ನರ್ ವೀಲ್ ಕ್ಲಬ್ ಆಫ್ ನಂಜನಗೂಡು ವತಿಯಿಂದ ಹಿರಿಯ ನಾಗರಿಕರಿಗೆ ದಂತ ತಪಾಸಣೆ ಶಿಬಿರ

ಮೈಸೂರು:ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದರಿಂದ ಹಲ್ಲು ನೋವು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗಬಹುದು ಎಂದು ಜಿಲ್ಲಾ ಬಾಯಿ ಆರೋಗ್ಯ ಕಾರ್ಯಕ್ರಮದ ನೋಡಲ್ ಅಧಿಕಾರಿ ಡಾ.ಎಸ್. ಅನಿತಾ ಹೇಳಿದರು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವಿಜಯ ನಗರದಲ್ಲಿರುವ ಸೇವಾಯಾನ ಹಿರಿಯ ನಾಗರಿಕರ ಆರೈಕೆ ಕೇಂದ್ರದಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ನಂಜನಗೂಡು ಆಯೋಜಿಸಿದ್ದ ದಂತ ತಪಾಸಣಾ ಶಿಬಿರ ಹಾಗು ಬಾಯಿ ಆರೋಗ್ಯ ಸಂಬಂಧ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸರಕಾರದ ದಂತ ಭಾಗ್ಯ ಯೋಜನೆ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಸಂಪೂರ್ಣ ಹಾಗೂ ಭಾಗಶಃ ದಂತ ಪಂಕ್ತಿಗಳ ಅಳವಡಿಕೆ ಬಗ್ಗೆ ಮಾಹಿತಿ ನೀಡಲಾಯಿತು.

ಡಾ.ಅನಿತಾ ನೇತೃತ್ವದಲ್ಲಿ ವೈದ್ಯರು ಮತ್ತು ಸಿಬ್ಬಂದಿ,ಕೇಂದ್ರದಲ್ಲಿನ ಹಿರಿಯ ನಾಗರಿಕರಿಗೆ ಉಚಿತವಾಗಿ ದಂತ ತಪಾಸಣೆ ನಡೆಸಿದರು. ಕ್ಬ್ ಅಧ್ಯಕ್ಷೆ ಶಿಲ್ಪಾ,ಸೇವಾಯಾನ ಟ್ರಸ್ಟ್ ಸಂಸ್ಥಾಪಕಿ ಪ್ರಭಾಮಣಿ ಇದ್ದರು.

————————–ಮಧುಕುಮಾರ್

Leave a Reply

Your email address will not be published. Required fields are marked *

× How can I help you?