ನಾಗಮಂಗಲ-ಪಟ್ಟಣದ ಇತಿಹಾಸ ಪ್ರಸಿದ್ದ ಯೋಗಾನಾರಸಿಂಹ ದೇವಾಲಯದಲ್ಲಿರುವ ಶ್ರೀ ಸುಬ್ರಹ್ಮಣ್ಯನ ಸನ್ನಿದಿಯಲ್ಲಿ ಸ್ಥಳೀಯ ವಿಪ್ರ ಸೇವಾ ಸಮಿತಿಯಿಂದ 12 ನೇ ವರ್ಷದ ಸುಬ್ರಹ್ಮಣ್ಯ ಷಷ್ಠಿಯನ್ನು ಮತ್ತು ಮೊದಲನೇ ವರ್ಷದ ಷಷ್ಠಿ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗಿದೆಯೆಂದು ಖಜಾಂಚಿ ಸುರೇಶ್ ಶೃಂಗೇರಿ ತಿಳಿಸಿದರು.
ದೇವಾಲಯದಲ್ಲಿ ಪತ್ರಿಕಾಘೋಷ್ಠಿ ನಡೆಸಿ ಮಾತನಾಡಿದ ಅವರು,ದಿನಾಂಕ 7 ರ ಶನಿವಾರ ಮುಂಜಾನೆ ಭಕ್ತಾದಿಗಳ ಸಮ್ಮುಖದಲ್ಲಿ ಸಂಕಲ್ಪ ಪೂಜೆಯ ನಂತರ ಕಾರ್ತಿಕೇಯನಿಗೆ ಹಾಲಿನ ತನಿ ಎರೆಯುವುದರೊಂದಿಗೆ ಪೂಜೆಯು ಪ್ರಾರಂಭವಾಗಲಿದೆ.ನಂತರ ಶೇಷ ವಾಹನೋತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ದೇವಾಲಯಕ್ಕೆ ಬರುತ್ತಿದ್ದಂತೆ ವಟು ಪೂಜೆ ಮತ್ತು ಸುಬ್ರಹ್ಮಣ್ಯ ಸ್ವಾಮಿಗೆ ಅಷ್ಟಾವದಾನಗಳ ನಂತರ ಪ್ರಸಾದ ವಿನಿಯೋಗ ಮಾಡಲಾಗುವುದು ಎಂದರು.
ಮೊದಲ ಬಾರಿಗೆ ದೇವಾಲಯದಲ್ಲಿ ಷಷ್ಠಿ ದೀಪೋತ್ಸವವನ್ನು ಎರ್ಪಡಿಸಲಾಗಿದ್ದು,ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಅದ್ಯಕ್ಷ ವಿಜಯಕುಮಾರ್ ನಾಗೇಂದ್ರ,ವಿಶ್ವನಾಥ್,ಅರ್ಚಕ ಸುರೇಶ್, ದೀಪೋತ್ಸವ ಸಮಿತಿಯ ಅಬಿಜಿತ್ ಮುಂತಾದವರಿದ್ದರು.