ಹೊಳೆನರಸೀಪುರ:ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನ,ಸಮಾನತೆಯನ್ನು ಸಾರಿದೆ.ದೇಶದ ಎಲ್ಲ ಜನರಿಗೆ ಕಾನೂನು ಒಂದೆ.ಎಲ್ಲರೂ ಒಂದೇ ಎನ್ನುವ ಭಾವನೆಯಿಂದ ಬದುಕು ನಡೆಸಬೇಕು ಎಂದು ಹಿರಿಯಶ್ರೇಣಿ ನ್ಯಾಯಾಧೀಶೆ ನಿವೇದಿತಾ ಮಹಂತೇಶ್ ಮುನವಳ್ಳಿಮಠ್ ಸಲಹೆ ನೀಡಿದರು.
ತಾಲ್ಲೂಕು ವಕೀಲರ ಸಂಘದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 69 ನೇ ಪರಿನಿರ್ವಾಣ ದಿನಾಚರಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಫ್ಫನಮನ ಸಲ್ಲಿಸಿ ಮಾತನಾಡಿದರು.
ನ್ಯಾಯಾಧೀಶೆ ಚೇತನಾ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನ ನಮ್ಮ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ದೊಡ್ಡ ಕೊಡುಗೆ. ಶೋಷಿತರ ಬಾಳಿಗೆ ಬೆಳಕು ನೀಡಿದೆ.ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರ ಧಾರೆ ಎಲ್ಲವರ್ಗದ ಜನರನ್ನು ತಲುಪಿತು. ಅವರು ತೋರಿದ ಮಾರ್ಗದಲ್ಲಿ ನಾವೆಲ್ಲಾ ನೆಡೆಯೋಣ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ವಿ. ಶಿವಕುಮಾರ್ ಸೂರ್ಯ ಮುಳುಗಿದಾಗ ಕತ್ತಲು ಆವರಿಸುತ್ತದೆ. ಅಂಬೇಡ್ಕರ್ ಅವರನ್ನು ಕಳೆದಕೊಂಡ ಈ ದಿನ ನಮಗೆ ಕತ್ತಲೆಯ ದಿನ ಎನಿಸಿದೆ.ನಾವು ಅವರ ಸ್ಮರಣೆ ಮಾಡಿ ಅವರಿಗೆ ಗೌರವ ಸಲ್ಲಿಸಿದ್ದೇವೆ. ಅಂಬೇಡ್ಕರ್ ದೈಹಿಕವಾಗಿ ಇಲ್ಲದಿದ್ದರೂ ಅವರು ತೋರಿದ ಸಮಾನತೆಯ ನೀತಿ ಇಂದಿಗೂ ಬೆಳಕು ನೀಡುತ್ತಿದೆ ಎಂದರು.
ಹಿರಿಯ ವಕೀಲರಾದ ರಾಮಪ್ರಸನ್ನ, ಬಿ.ಆರ್.ಪುರುಷೋತ್ತಮ್,ಮಂಜುನಾಥ್,ಜಯರಾಮ್,ಕೆ.ಆರ್.ಸುನಿಲ್,ಅರುಣ್ ಕುಮಾರ್, ಶಿವಕುಮಾರ್,ಎಚ್.ಕೆ. ಹರೀಶ್,ಜಯಪ್ರಕಾಶ್,ಲಾವಣ್ಯ,ಅಂಕವಳ್ಳಿ,ಶಿವಣ್ಣ,ಬಿ.ಕೆ.ಪುಟ್ಟರಾಜು, ಇತರರು ಭಾಗವಹಿಸಿದ್ದರು.
————-ಸುಕುಮಾರ್