ಹಾಸನ:ಅವಿಭಕ್ತ ಕುಟುಂಬದ ಕಲ್ಪನೆ ತುಂಬ ಅದ್ಭುತವಾಗಿದ್ದು, ಇಂದಿಗೂ ಇಂತಹ ಕುಟುಂಬದ ವ್ಯವಸ್ಥೆ ಇದ್ದಿದ್ದರೆ ಚೆನ್ನಾಗಿರುತಿತ್ತು-ಬಿ.ಕೆ. ಟೈಮ್ಸ್ ಗಂಗಾಧರ್

ಹಾಸನ:ಪೋಷಕರು ತಮ್ಮ ಮಕ್ಕಳನ್ನು ಮನೆಯಲ್ಲಿರುವ ಹಿರಿಯ ಅಜ್ಜ ಅಜ್ಜಿಯರೊಂದಿಗೆ ಬೆಳೆಸಿದರೆ ಮಕ್ಕಳು ಸಮಾಜದಲ್ಲಿ ಉತ್ತಮ ನಾಗರೀಕರಾಗಲು ಸಾಧ್ಯವಾಗುತ್ತದೆ ಎಂದು ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಟೈಮ್ಸ್ ಗಂಗಾಧರ್ ಅಭಿಪ್ರಾಯಪಟ್ಟರು.

ನಗರದ ವಿಜಯನಗರ ಬಡಾವಣೆಯಲ್ಲಿರುವ ಟೈಮ್ಸ್ ಅಂತರಾಷ್ಟೀಯ ಶಾಲೆಯಲ್ಲಿ ಈಚೆಗೆ ನಡೆದ ಗ್ರಾಂಡ್ ಪೇರೆಂಟ್ಸ್ ಡೇ (ಅಜ್ಜ ಅಜ್ಜಿಯ ದಿನಾಚರಣೆ) ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪೋಷಕರು, ಅಜ್ಜ, ಅಜ್ಜಿ,ಯರ ಒಡನಾಟದಲ್ಲಿ ಮಕ್ಕಳನ್ನು ಬೆಳೆಯಲು ಬಿಡುವುದರಿಂದ ಉತ್ತಮ ಸಂಸ್ಕಾರಗಳನ್ನು ಕಲಿಯುತ್ತಾರೆ.ಅಜ್ಜ ಅಜ್ಜಿ ಹೇಳುವ ಕಥೆಗಳು ಮಕ್ಕಳನ್ನು ಉತ್ತಮ ನಾಗರಿಕ ಸಮುದಾಯದ ನಿರ್ಮಾಣಕ್ಕೆ ದಾರಿ ದೀಪವಾಗುತ್ತದೆ. ಈ ಹಿಂದೆ ಅಜ್ಜ ಅಜ್ಜಿಯರ ತಮ್ಮ ಮನೆಯಲ್ಲಿರುವ ಚಿಕ್ಕ ಮಕ್ಕಳಿಗೆ ದೇಶ ಪ್ರೇಮದ ಕಥೆ ಹಾಗೂ ರಾಜ್ಯವನ್ನಾಳಿದ ಮಹಾರಾಜರುಗಳು ಮತ್ತು ಕಾಡಿನ ಕಥೆಗಳನ್ನು ಹೇಳುವ ಮೂಲಕ ಮಕ್ಕಳನ್ನು ಒಬ್ಬ ಒಳ್ಳೆಯ ನಾಗರೀಕರನ್ನಾಗಿ ಮಾಡುತ್ತಿದ್ದರು.

ಇದು ಮನೆಯ ಮೊದಲ ಪಾಠಶಾಲೆ ಎಂಬುವುದಕ್ಕೆ ಸಾಕ್ಷಿಯಾಗಿತ್ತು, ಆದರೇ ಇಂದು ಅಜ್ಜ ಅಜ್ಜಿಯರು ಇಲ್ಲದಂತಾಗಿದ್ದು, ಕೇವಲ ಅಪ್ಪ ಅಮ್ಮ ಇಬ್ಬರೆ ಇರುತ್ತಾರೆ. ಮಕ್ಕಳು ಇಂದು ಮೊಬೈಲ್, ಟಿ.ವಿ. ಸಂಸ್ಕೃತಿಗೆ ಅoಟಿಕೊoಡಿದ್ದು, ಶಾಲೆಯಲ್ಲೂ ಕೇವಲ ಪಠ್ಯಕ್ಕೆ ಮಾತ್ರ ಸೀಮಿತರಾ ಗುತ್ತಿದ್ದಾರೆ. ನಮ್ಮ ಅವಿಭಕ್ತ ಕುಟುಂಬದ ಕಲ್ಪನೆ ತುಂಬ ಅದ್ಭುತ ವಾಗಿದ್ದು, ಇಂದಿಗೂ ಇಂತಹ ಕುಟುಂಬದ ವ್ಯವಸ್ಥೆ ಇದ್ದಿದ್ದರೆ ಚೆನ್ನಾಗಿರುತಿತ್ತು.ಆದರೇ ಇಂದು ಅನಾಥಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಮಕ್ಕಳು ಹಿರಿಯರಿಗೆ ಗೌರವ ಹಾಗೂ ಪ್ರೀತಿಯಿಂದ ನೋಡಿಕೊಳ್ಳುವ ಮನಸ್ಥಿತಿ ಇಲ್ಲದಂತಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಮನೆಯಲ್ಲಿರುವ ಹಿರಿಯ ಪೋಷಕರೊಂದಿಗೆ ಬೆಳೆಸುವ ಪ್ರಯತ್ನವನ್ನು ಪ್ರತಿಯೊಬ್ಬ ಮಕ್ಕಳ ಪೋಷಕರು ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಕೃಷ್ಣೇಗೌಡ ಹಾಗೂ ನಾಗರತ್ನಮ್ಮ ಅವರನ್ನು ಸನ್ಮಾನಿಸಲಾಯಿತು.

ಇದಲ್ಲದೇ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳಿಂದ ನೃತ್ಯ,ಹಾಡು ಹಾಗೂ ಹಿರಿಯರ ವೇಷಭೂಷಣ ಕಾರ್ಯಕ್ರಮ
ನಡೆಸಿಕೊಡಲಾಯಿತು.

ಹಿರಿಯರಿಗಾಗಿ ವಿಶೇಷ ಆಟಗಳ ಏರ್ಪಾಡು ಮಾಡಲಾಗಿತ್ತು. ಅವರು ತಮ್ಮ ಮಕ್ಕಳ ಜೊತೆಯಲ್ಲಿ ಸಂತಸಪಟ್ಟು ಅತ್ಯಂತ ಉತ್ಸಾಹದಿoದ ಆಟಗಳಲ್ಲಿ ಭಾಗವಹಿಸಿ ಬಹುಮಾನ ಪಡೆದರು.

ಶಾಲೆಯ ಮುಖ್ಯ ಶಿಕ್ಷಕಿ ಬ್ಲೆಸ್ಸಿ ಶ್ಯಮ್, ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?