ಸಕಲೇಶಪುರ-ಹೃದಯಾಘಾ,ತದಿಂದ ಕೇವಲ 26 ವರ್ಷದ ಯುವ ಸಾಫ್ಟ್ವೇರ್ ಇಂಜಿನಿಯರ್ ಮೃ,ತಪಟ್ಟ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿ ನಿನ್ನೆ ( 8 ಡಿ. 2024 ಭಾನುವಾರ ) ಸಂಜೆ ನಡೆದಿದೆ.
ಕಾಫಿ ಬೆಳೆಗಾರ ಹೇಮಂತ್ ಮತ್ತು ಸರಳ ದಂಪತಿ ಪುತ್ರ, ಬೆಂಗಳೂರಿನ ಸಾಫ್ಟ್ವೇರ್ ಕಂಪೆನಿಯೊಂದರ ಉದ್ಯೋಗಿ ಯಾಗಿದ್ದ ಸಮರ್ಥ್ (26) ಮೃತ ಯುವಕ.
ಕಳೆದ ಕೆಲವು ತಿಂಗಳುಗಳಿಂದ ‘ವರ್ಕ್ ಪ್ರಂ ಹೋಮ್’ ಸೌಲಭ್ಯ ಪಡೆದು ಕೆಲಸ ಮಾಡುತ್ತಿದ್ದರು.
ನಿನ್ನೆ ಬೆಳಗಿನ ಜಾವದವರೆಗೆ ಕೆಲಸ ಮಾಡಿದ್ದ ಆತ ಸಂಜೆ ಎದ್ದು ನೀರು ಕುಡಿದ ನಂತರ ಹಠಾತ್ ಕುಸಿದು ಬಿದ್ದರು. ತಕ್ಷಣವೇ ಕುಟುಂಬಸ್ಥರು ವೈದ್ಯರನ್ನು ಕರೆಸಿದರೂ,ತಪಾಸಣೆ ವೇಳೆ ಸಮರ್ಥ್ ಹೃದಯಾ,ಘಾತದಿಂದ ಮೃ,ತ ಪಟ್ಟಿರುವುದಾಗಿ ವೈದ್ಯರು ದೃಢೀಕರಿಸಿದರು.
ಈ ಘಟನೆ ಸಮರ್ಥ್ ಕುಟುಂಬಕ್ಕೆ ತೀವ್ರ ಆಘಾ,ತ ಉಂಟುಮಾಡಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.
————–ರಕ್ಷಿತ್ ಎಸ್.ಕೆ