ಕೊಪ್ಪ-ವಿಶ್ವಹಿಂದೂ ಪರಿಷತ್,ಭಜರಂಗದಳ ಕೊಪ್ಪ ಪ್ರಖಂಡ ಇವರ ಸಂಯುಕ್ತ ಆಶ್ರಯದಲ್ಲಿ ಡಿ11ಕ್ಕೆ ಕೊಪ್ಪದಲ್ಲಿ ಹಿಂದೂ ಸಂಗಮ ಹಾಗೂ ಬೃಹತ್ ಬೈಕ್ ಜಾಥ ನಡೆಯಲಿದೆ ಎಂದು ಕೊಪ್ಪ ಪ್ರಖಂಡ ಭಜರಂಗದಳದ ಸಂಚಾಲಕ ವಿನಯ್ ಶಿವಪುರ ತಿಳಿಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಅವರು,ಸಂಜೆ 4-30 ಕ್ಕೆ ಕೊಪ್ಪದ ಕುವೆಂಪು ವೃತ್ತದಿಂದ ಬಸ್ ನಿಲ್ದಾಣದವರೆಗೆ ಬೈಕ್ ಜಾಥ ನಡೆಯಲ್ಲಿದ್ದು ನಂತರ ಸಭಾ ಕಾರ್ಯಕ್ರಮ ನಡೆಯಲಿದೆ.
ಬಸ್ ನಿಲ್ದಾಣದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ಹಿಂದೂಪರ ಹೋರಾಟ ಗಾರರಾದ ಪುನೀತ್ ಕೆರೆಹಳ್ಳಿ ಮಾಡಲಿದ್ದು,ಸಭೆಯ ಅಧ್ಯಕ್ಷತೆಯನ್ನು ವಿಜೇಶ್ ಕಾರಂಜಿ ರವರು ವಹಿಸಿಕೊಳ್ಳಲಿದ್ದಾರೆ.
ಗೌರವ ಉಪಸ್ಥಿತಿಯಲ್ಲಿ ವಿಶ್ವಹಿಂದೂ ಪರಿಷತ್,ಬಜರಂಗದಳ ಸಕಲೇಶಪುರ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ರಘು ಸಕಲೇಶಪುರ,ವಿಶ್ವ ಹಿಂದೂ ಪರಿಷತ್ ಬಜರಂಗದಳ,ಹಾಸನ ವಿಭಾಗ ಸಹಕಾರ್ಯದರ್ಶಿ ಆರ್.ಡಿ ಮಹೇಂದ್ರ,ವಿಶ್ವ ಹಿಂದೂ ಪರಿಷತ್ ಬಜರಂಗದಳ ಜಿಲ್ಲಾಧ್ಯಕ್ಷರಾದ ಕೆ.ಪಿ ಸುರೇಶ್ ಶೃಂಗೇರಿ,ಜಿಲ್ಲಾ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷತ್ ಶೃಂಗೇರಿ ಜಿಲ್ಲೆ ದಿವಿರ್ ಮಲ್ನಾಡು,ಜಿಲ್ಲಾ ಸಂಯೋಜಕ್ ಭಜರಂಗದಳ ಶೃಂಗೇರಿ ಜಿಲ್ಲೆ,ಅಜಿತ್ ಕುಮಾರ್,ಪ್ರಾಂತ್ಯ ಗೋರಕ್ಷಕ ಪ್ರಮುಖ್ ವಿಶ್ವ ಹಿಂದೂ ಪರಿಷತ್ ಬಜರಂಗದಳ ಶಶಾಂಕ್ ಹೇರೂರು,ತಾಲೂಕ ಸಂಯೋಜಕರು ಬಜರಂಗದಳ ಕೊಪ್ಪ ಪ್ರಖಂಡ ವಿನಯ್ ಶಿವಪುರ ಇವರುಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಯ್ ಶಿವಪುರ ಕೋರಿದ್ದಾರೆ.
———--ಹರೀಶ್ ನಾರ್ವೆ