
ತುಮಕೂರು:ತುಮಕೂರು ವೀರಶೈವ ಸಹಕಾರ ಬ್ಯಾಂಕಿನ ಅಧ್ಯಕ್ಷರು ಹಾಗೂ ಗಾಯಿತ್ರಿ ಚಿತ್ರಮಂದಿರದ ಪಾಲುದಾರರಾದ ಕೆ.ಜೆ.ರುದ್ರಪ್ಪನವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 2024-25ರ ಚುನಾವಣೆಯಲ್ಲಿ, ತುಮಕೂರು,ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರದರ್ಶಕರ ವಲಯದಿಂದ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿ ಅವಿರೋಧವಾಗಿ ಚುನಾಯಿತರಾಗಿದ್ದಾರೆ.
ತುಮಕೂರು ವೀರಶೈವ ಸಹಕಾರ ಬ್ಯಾಂಕ್ ನ ಉಪಾಧ್ಯಕ್ಷರು ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು, ಸಿ.ಇ.ಓ ಮತ್ತು ಸಿಬ್ಬಂದಿ ವರ್ಗದವರು,ಹಲವು ಸಂಘ-ಸoಸ್ಥೆಯ ಪದಾಧಿಕಾರಿಗಳು,ಮಠಾಧೀಶರುಗಳು ಕೆ.ಜೆ.ರುದ್ರಪ್ಪನವರನ್ನು ಅಭಿನಂದಿಸಿ ಸನ್ಮಾನಿಸಿ ಶುಭ ಹಾರೈಸಿದ್ದಾರೆ.
————- ಕೆ.ಬಿ ಚಂದ್ರಚೂಡ