ಅರೇಹಳ್ಳಿ-ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಣಿವರಿಯದ ವೈದ್ಯರೊಬ್ಬರು 24 ಗಂಟೆಯಲ್ಲಿ 4 ಸಾಮಾನ್ಯ ,ಒಂದು ಶಸ್ತ್ರಚಿಕಿತ್ಸೆ ಮೂಲಕ ಒಟ್ಟು 8 ಹೆರಿಗೆಗಳನ್ನ ಮಾಡಿಸಿದ್ದು ಸಾರ್ವಜನಿಕ ವಲಯದಲ್ಲಿ ಉತ್ತಮ ವೈದ್ಯೆಸೇವೆಯ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.
ಬೇಲೂರು ತಾಲೂಕಿನ ಅರೇಹಳ್ಳಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ.ಮಮತಾರವರು ಕಳೆದ ಏಳೆಂಟು ವರ್ಷಗಳಲ್ಲಿ ಸರಿ ಸುಮಾರು 4300 ಆರೋಗ್ಯದಾಯಕ ಹೆರಿಗೆಯನ್ನು ಮಾಡುವ ಮೂಲಕ ಎಲ್ಲಾ ಗರ್ಭಿಣಿ,ಬಾಣಂತಿ ಹಾಗು ಸಾರ್ವಜನಿಕರ ಮನೆ ಮಾತಾಗಿದ್ದಾರೆ.ಇದೀಗ ದಿನದ 24 ಘಂಟೆಯಲ್ಲಿ ತನ್ನ ಅತ್ಯಮೂಲ್ಯ ನಿದ್ರೆಯನ್ನು ತ್ಯಜಿಸಿ 8 ಹೆರಿಗೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಮತ್ತೊಮ್ಮೆ ಪಾತ್ರರಾಗಿದ್ದಾರೆ.
ಈ ವೇಳೆ ತನ್ನ ಪತ್ನಿಯ ಹೆರಿಗೆಗಾಗಿ ಬಂದಿದ್ದ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆ ಗ್ರಾಮದ ರವೀಂದ್ರ ಮಾತನಾಡಿ, ಈ ಮೊದಲು ತಾಲೂಕಿನ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸುತ್ತಿದ್ದು ನಂತರ ನೆಂಟರೊಬ್ಬರ ಸಲಹೆಯಂತೆ ಉತ್ತಮ ಆರೋಗ್ಯದಾಯಕ ಹೆರಿಗೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಹೋಗುವ ಬದಲಾಗಿ ಇಲ್ಲಿಗೆ ಬಂದು ತಪಾಸಣೆ ನಡೆಸಿ ಹೆರಿಗೆಗಾಗಿ ದಾಖಲಾದೆವು.
ಇಲ್ಲಿ ದೊರಕುವ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಉತ್ತಮವಾಗಿರುವುದರ ಜೊತೆಗೆ ಇಲ್ಲಿನ ವೈದ್ಯಾಧಿಕಾರಿ ಹಾಗು ಸಿಬ್ಬಂದಿಗಳ ಕಾರ್ಯ ವೈಖರಿ ಅತ್ಯುತ್ತಮವಾಗಿದೆ.ಹೋಬಳಿ ಮಟ್ಟದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂತಹ ಸೌಲಭ್ಯಗಳು ಸಿಗುವುದು ಬಹಳ ಅಪರೂಪ, ಇಂತಹ ಆಸ್ಪತ್ರೆ ಹಾಗೂ ಸಿಬ್ಬಂದಿಗಳ ಕಾರ್ಯ ಚಟುವಟಿಕೆ ಉತ್ತಮವಾಗಿರುವುದನ್ನು ನಾನು ಹೋಬಳಿ ಮಟ್ಟದಲ್ಲಿ ಎಲ್ಲಿಯೂ ನೋಡಿಲ್ಲ.ಸರ್ಕಾರಿ ಆಸ್ಪತ್ರೆಗಳಲ್ಲಿ ತಮ್ಮ ದಿನದ ಸೇವೆ ಅವಧಿ ಮುಗಿದ ಬಳಿಕವೂ ತುರ್ತು ಪರಿಸ್ಥಿಯ ನಡುರಾತ್ರಿಯಲ್ಲಿ ಕರೆದರು ಬಂದು ಸ್ಪಂದಿಸುವ ಇಂಥಹ ವೈದ್ಯಾಧಿಕಾರಿಗಳು ಇರುವುದು ನಮ್ಮ ಹೆಮ್ಮೆ.
ಇದೆ ರೀತಿ ಅವರ ವೈದ್ಯಸೇವೆ ಎಲ್ಲರಿಗೂ ದೊರಕುತ್ತಾ ನಿವೃತ್ತಿ ಹೊಂದುವವರೆಗೂ ಅವರ ವೈದ್ಯ ಸೇವೆ ಇಲ್ಲಿಯೇ ಇರಲಿ ಎಂದು ಬಯಸುತ್ತೇನೆ.ಮುಂದಿನ ದಿನಗಳಲ್ಲಿ ಈ ಆಸ್ಪತ್ರೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೊರಕುವ ಸೌಲಭ್ಯಗಳು ಇಲ್ಲಿಯೇ ದೊರಕುವಂತಾಗಲಿ ಎಂದರು.