ಹಳೇಬೀಡು-ಸಸ್ಯ ಸಂಕುಲದ ವಸ್ತು ಪ್ರದರ್ಶನ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸುವ ಪ್ರಾಯೋಗಿಕ ಕಾರ್ಯ ಪೋಷಕರು ಮತ್ತು ಸಾರ್ವಜನಿಕರ ಮೆಚ್ಚುಗೆ ಗಳಿಸಿದೆ ಎಂದು ಭಾಗ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಕೆ. ಎಸ್ ಲಿಂಗೇಶ್ ತಿಳಿಸಿದರು.
ಪಟ್ಟಣದ ಹರ್ಷ ಕಲ್ಪತರು ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಸ್ಯ ಸಂಕುಲದ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಹಂತದಲ್ಲಿ ವಿದ್ಯಾರ್ಥಿಗಳ ಕಲಿಕೆ ಪಠ್ಯ ಚಟುವಟಿಕೆಗಳ ಜೊತೆಗೆ ಜೊತೆಗೆ ಪ್ರಾಯೋಗಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಜ್ಞಾನಾರ್ಜನೆಯನ್ನು ಹೆಚ್ಚಿಸುತ್ತವೆ. ಅಂತಹ ಕಾರ್ಯವನ್ನು ಈ ವರ್ಷ ಕಲ್ಪತರು ಶಾಲೆಯಲ್ಲಿ ಆಯೋಜಿಸಲಾಗಿದ್ದು ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸಂತೋಷ ತಂದಿದೆ ಎಂದು ಹೇಳಿದರು. ಪ್ರತಿ ತರಗತಿಯ ಶಿಕ್ಷಕರು ವಿವಿಧ ರೀತಿಯ ಸಸ್ಯಗಳನ್ನ ಪ್ರದರ್ಶನ ಮಾಡುವುದರ ಜೊತೆಗೆ ಆ ಸಸ್ಯಗಳ ಅನುಕೂಲಗಳು,ಮಹತ್ವ,ವೈಶಿಷ್ಟ್ಯತೆ, ಅವಶ್ಯಕತೆಗಳ ಬಗ್ಗೆ ಪರಿಚಯಿಸುವ ಕಾರ್ಯವನ್ನು ಮಕ್ಕಳನ್ನು ತೊಡಗಿಸಿಕೊಂಡು ಮಾಡಿರುವುದರಿಂದ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯ ಜೊತೆಗೆ ಸೃಜನಶೀಲತೆಯನ್ನು ಬೆಳೆಸುತ್ತದೆ. ಇಂತಹ ಕ್ರಿಯಾ ಚಟುವಟಿಕೆಗಳನ್ನು ಆಯೋಜಿಸಿರುವ ಪ್ರಾಂಶುಪಾಲರು ಹಾಗೂ ಶಿಕ್ಷಕರುಂಡದವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಪ್ರಾಂಶುಪಾಲ ಮೋಹನ್ ಕುಮಾರ್ ಮಾತನಾಡಿ,ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಲು ನಮಗೆ ಪೋಷಕರ ಸಹಕಾರ ಅಗತ್ಯವಾಗಿ ದೊರೆಯುತ್ತಿರುವುದರಿಂದ ಶಾಲೆಯಲ್ಲಿ ಸಸ್ಯಗಳ ವಸ್ತು ಪ್ರದರ್ಶನ ಹಮ್ಮಿಕೊಳ್ಳಲು ಸಾಧ್ಯವಾಗಿದೆ.ಸಸ್ಯ ಸಂಕುಲಗಳಾದ ಬೋನ್ಸಾಯ್ ,ಡ್ರ್ಯಾಗನ್,ಅಂಜೂರ,ಎಗ್ ಫ್ರೂಟ್,ಪಾಮ್ ಫ್ರೂಟ್,ಏಕದಳ ಸಸ್ಯಗಳು,ದ್ವಿದಳ ಸಸ್ಯಗಳು,ಜಲಚರ ಸಸ್ಯಗಳು,ಸ್ನೇಕ್ ಪ್ಲಾಂಟ್,ಆಯುರ್ವೇದ ಸಸ್ಯಗಳು,ಔಷಧಿ ಗಿಡಮೂಲಿಕೆ ಸಸ್ಯಗಳು,ಇತ್ಯಾದಿಗಳ ವಸ್ತು ಪ್ರದರ್ಶನ ಮಾಡುವ ಮೂಲಕ ಮಕ್ಕಳಿಗೆ ಓದುವುದರ ಜೊತೆಗೆ ನಮ್ಮ ಸಸ್ಯ ಸಂಕುಲಗಳ ಮಹತ್ವ ಸಾರಿದ್ದೇವೆ ಎಂದು ತಿಳಿಸಿದರು.
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ವಿಷಯಗಳನ್ನು ವಾಸ್ತವವಾಗಿ ಪರಿಚಯಿಸುವ ಕಾರ್ಯವನ್ನು ಮಾಡಲಾಗಿದೆ. ಇದರಿಂದ ಮಕ್ಕಳ ಕಲಿಕೆ ಆಸಕ್ತಿ ಮೂಡುವುದರ ಜೊತೆಗೆ ವಿಷಯದ ಮಹತ್ವ ಅರಿವಾಗುತ್ತದೆ.
ಶ್ರೀಮತಿ ಅನುಷಾ ಜಗದೀಶ್ ಪೋಷಕರು ಹಳೆಬೀಡು .
ಕಾರ್ಯಕ್ರಮದಲ್ಲಿ ವಕೀಲರಾದ ಲಿಂಗೇಶ್, ಕಲ್ಪತರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುಮಾರ್ ಎಂ.ಸಿ, ಶಿಕ್ಷಕರಾದ ಲೋಹಿತ್ ಕಮಲೇಶ್, ಶಬಾನ,ಉಷಾ, ನಾಗರತ್ನ, ರಮ್ಯಾ, ವರ್ಷಿತ, ತಾರಾ, ಗೀತಾ, ಸುಮಾ, ಚಿತ್ರವತಿ, ಸಿದ್ದಿ, ಚೇತನ್ ಮುಂತಾದವರು ಹಾಜರಿದ್ದರು.