ನಮ್ಮ ಚಿತ್ರರಂಗದಲ್ಲಿ ಹೊಸ ನಿರ್ಮಾಪಕರ ನಿರ್ಮಾಣ ಪ್ರಕ್ರಿಯೆ, ಚಲನಚಿತ್ರ ನೋಂದಣಿ ಮತ್ತು ಬಿಡುಗಡೆಯ ಕುರಿತು ತಾಂತ್ರಿಕ ಜ್ಞಾನ, ಹಾಗೂ ಮಾರ್ಗದರ್ಶನದ ಕೊರತೆಯನ್ನು ಎದುರಿಸುತ್ತಿದ್ದು, ಈ ಸಮಸ್ಯೆಗಳಿಗೆ ಪರಿಹಾರವಾಗಿ, ಪ್ರತಿ ತಿಂಗಳು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಅವರ ಜ್ಞಾನವನ್ನು ವಿಸ್ತರಿಸಲು ಮತ್ತು ಚಿತ್ರರಂಗದಲ್ಲಿ ಸುಲಭವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುವ ಉದ್ದೇಶ ನನ್ನದು. ಇನ್ನು ಚಿತ್ರರಂಗದ ಹಿರಿಯ ಸದಸ್ಯರಿಗೆ ಉಚಿತ ಆರೋಗ್ಯ ಸೇವೆಗಳನ್ನು ನೀಡಲಾಗುತ್ತವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ನನ್ನ ಮಹತ್ವದ ಉದ್ದೇಶವಾಗಿದೆ.
ಚಿತ್ರರಂಗದಲ್ಲಿ ಉಂಟಾಗುತ್ತಿರುವ ಕಾರ್ಮಿಕರ ಬಾಟಾ ಸಮಸ್ಯೆ ಮತ್ತು ಟಿಕೆಟ್ ದರ ಸಮಸ್ಯೆಗಳಂತಹ ವಿಷಯಗಳು ನಮ್ಮ ಎಲ್ಲರ ಹಿತಕ್ಕಾಗಿ ಪರಿಹಾರಗೊಳ್ಳಬೇಕಾಗಿದೆ. ಇದಕ್ಕಾಗಿ, ಹಿರಿಯರ ಮಾರ್ಗದರ್ಶನ ಮತ್ತು ಎಲ್ಲರ ಸಹಭಾಗಿತ್ವದೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಪರಿಣಾಮಕಾರಿಯಾಗಿ ಈ ಸಮಸ್ಯೆಗಳನ್ನು ಬಗೆಹರಿಸಲು ನಾನು ಸಿದ್ಧನಿದ್ದೇನೆ. ನಿಮ್ಮ ಬೆಂಬಲ ಮತ್ತು ಸಹಕಾರವೇ ಹೊಸ ನಿರ್ಮಾಪಕರಿಗೆ ಹಾಗೂ ಚಿತ್ರರಂಗದ ಪ್ರಗತಿಗೆ ದಾರಿ ಮಾಡಿಕೊಡುತ್ತದೆ. ನನ್ನನ್ನು ಬೆಂಬಲಿಸಿ ಮತ್ತು ನನ್ನ ಉದ್ದೇಶವನ್ನು ಯಶಸ್ವಿಗೊಳಿಸಲು ನಿಮ್ಮ ಕೈಜೋಡಿಸಿ ಎಂದು ಕೇಳಿಕೊಳ್ಳುತೇನೆ.