ಕೆ.ಆರ್.ಪೇಟೆ-ಸಂತೆಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಮೋಹನ್ ಅವಿರೋಧ ಆಯ್ಕೆ

ಕೆ.ಆರ್.ಪೇಟೆ-ತಾಲ್ಲೂಕಿನ ಸಂತೆಬಾಚಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಮೋಹನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹಿಂದಿನ ಅಧ್ಯಕ್ಷರಾಗಿದ್ದ ಹರೀಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಬಿ.ಮೋಹನ್ ಹೊರತು ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದೇ ಇರುವ ಕಾರಣ ಚುನಾವಣೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಚ್.ಬಿ.ಭರತ್‌ಕುಮಾರ್ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು. ಸಹ ಚುನಾವಣಾ ಧಿಕಾರಿಯಾಗಿ ಸಂಘದ ಸಿಇಓ ನರಸಿಂಹೇಗೌಡ ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷರನ್ನು ಅಭಿನಂದಿಸಿದ ಮಾತನಾಡಿದ ಡಿ.ಪಿ.ಕೃಷ್ಣಕುಮಾರ್ ಅವರು,ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಮೋಹನ್ ಒಂದು ಬಾರಿ ಗ್ರಾ.ಪಂ ಅಧ್ಯಕ್ಷರಾಗಿ ಹಾಗೂ ಸಹಕಾರ ಸಂಘಕ್ಕೆ ಎರಡು ಬಾರಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಘಕ್ಕೆ ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರ ಆಡಳಿತ ಅವಧಿಯಲ್ಲಿ ಸಂಘದ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಬೇದ ಮರೆತು ಸಂಘದ ಏಳಿಗೆಗೆ ದುಡಿಯಬೇಕು. ಸಂಘದ ಮೂಲಕ ಷೇರುದಾರರು, ರೈತರು ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳುವ ಮಹಿಳೆಯರಿಗೆ ಸಕಾಲಕ್ಕೆ ಹೆಚ್ಚಿನ ಸಾಲವನ್ನು ನೀಡಿ ಅವರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಮೋಹನ್ ಮಾತನಾಡಿ, ಸಂಘದ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ಅವಿರೋಧವಾಗಿ ಆಯ್ಕೆಯಾಗಲು ಅವಕಾಶ ಮಾಡಿಕೊಟ್ಟ ಸಂಘದ ಎಲ್ಲಾ ನಿರ್ದೇಶಕರಿಗೆ ಹಾಗೂ ಸಂಘದ ವ್ಯಾಪ್ತಿಯ ಎಲ್ಲಾ ಮುಖಂಡರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಸಂಘದ ಎಲ್ಲಾ ನಿರ್ದೇಶಕರು ಹಾಗೂ ಸಂಘದ ನೌಕರ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

ಸoಘದ ಬ್ಯಾಂಕಿoಗ್ ಶಾಖೆಯಲ್ಲಿ ಮಹಿಳಾ ಸಂಘಗಳು,ಎಲ್ಲಾ ಶೇರುದಾರರು ಹಾಗೂ ಜನಸಾಮಾನ್ಯರು ಸಹ ಉಳಿತಾಯ ಖಾತೆ ತೆರೆದು ವ್ಯವಹರಿಸುವ ಮೂಲಕ ಬ್ಯಾಂಕಿoಗ್ ಶಾಖೆಯ ಅಭಿವೃದ್ದಿಗೆ ಸಹಕಾರ ನೀಡಬೇಕು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹುಬ್ಬನಹಳ್ಳಿ ಕುಮಾರಸ್ವಾಮಿ, ಡಿ.ಪಿ.ಪರಮೇಶ್, ಸಂಘದ ಉಪಾಧ್ಯಕ್ಷ ಹೆಚ್.ಎಸ್.ಸುರೇಶ್, ನಿರ್ದೇಶಕರಾದ ಹರೀಶ್, ಸಣ್ಣಪ್ಪ, ಹೆಚ್.ಎಸ್.ಉದಯಕುಮಾರ್,ಎಸ್. ಹೆಚ್ ಕೃಷ್ಣ, ಹೆಚ್. ಎನ್.ಮಹದೇವ್, ಎಸ್. ಬಿ.ಚಂದ್ರಶೇಖರ್, ಸೋಮಯ್ಯ, ಸಂಘದ ಕಾರ್ಯದರ್ಶಿ ಎಸ್.ಎನ್.ನರಸಿಂಹೇಗೌಡ, ಗುಮಸ್ತ ರಶ್ಮಿಶ್ರೀ, ಅರವಿಂದ, ಮಹೇಶ್, ಗೆಳಯರ ಬಳಗದ ಅಧ್ಯಕ್ಷ ಗೌಡಜಯ ಕುಮಾರ್, ಉಪಾ ಧ್ಯಕ್ಷ ನಾಗೇಶ್, ರುಕ್ಕೇಶ್, ಗೊರವಿ ಗಣೇಶ್, ಸವಿತಾ ಸಮಾಜ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಪರಮೇಶ್,ಪಚ್ಚಿ,ಕ್ರಾಸ್ ಮೊಗಣ್ಣ,ಜಗದೀಶ್, ಸುರೇಶ್,ಗ್ರಾ.ಪಂ ಸದಸ್ಯ ದಿನೇಶ್,ಲೋಕನಹಳ್ಳಿ ಪಚ್ಚಿ, ಸಂತೇಬಾಚಹಳ್ಳಿ ಎಸ್.ಹೆಚ್.ಸುರೇಶ್, ಗೋಪಿ, ಪುಟ್ಟಿ, ಲೋಕೇಶ್, ನಾಯಕನಹಳ್ಳಿ ಮಂಜುನಾಥ್, ಎಸ್.ಆರ್.ಮಂಜು,ಸೇರಿದಂತೆ ಸಂಘದ ವ್ಯಾಪ್ತಿಯ ಹಲವು ಮುಖಂಡರಿದ್ದರು.

———-ಶ್ರೀನಿವಾಸ್ ಕೆ.ಆರ್ ಪೇಟೆ

Leave a Reply

Your email address will not be published. Required fields are marked *

× How can I help you?