ಮೂಡಿಗೆರೆ:ಎಸ್.ಎಂ.ಕೃಷ್ಣ ಅವರ ನಿಧನದಿಂದ ಕರ್ನಾಟಕ ದೀಮoತ ನಾಯಕರೊಬ್ಬರನ್ನು ಕಳೆದುಕೊಂಡoತಾಗಿದೆ-ಮಾಜಿ ಸಚಿವ ಬಿ.ಬಿ.ನಿಂಗಯ್ಯ

ಮೂಡಿಗೆರೆ:ಮುಖ್ಯಮಂತ್ರಿ, ಕೇಂದ್ರ ಸಚಿವ,ರಾಜ್ಯಪಾಲ ಮತ್ತು ವಿಧಾನಸಭಾಧ್ಯಕ್ಷ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ರಾಜ್ಯ ಕಂಡ ಅತ್ಯುತ್ತಮ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ನಿಧನದಿಂದ ಕರ್ನಾಟಕ ಕಂಡ ದೀಮoತ ನಾಯಕರೊಬ್ಬರನ್ನು ಕಳೆದುಕೊಂಡoತಾಗಿದೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಿಳಿಸಿದರು.

ಅವರು ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಸಂತಾಪ ಸಭೆಯಲ್ಲಿ ಮಾತನಾಡಿ, ಎಸ್.ಎಂ,ಕೃಷ್ಣ ಅವರು ರಾಜ್ಯಕಂಡ ದೀಮಂತ ನಾಯಕರಲೊಬ್ಬರಾಗಿದ್ದರು. ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಐಟಿಬಿಟಿ ಕಂಪನಿಗಳ ಸ್ಥಾಪನೆಗೆ ಅವಕಾಶ, ವಿಕಾಸಸೌಧ ನಿರ್ಮಾಣ, ಮೆಟ್ರೋರೈಲ್ವೆ ಕಾಮಗಾರಿಗೆ ಚಾಲನೆ ಸೇರಿದಂತೆ ಅನೇಕ ಪ್ರಮುಖ ಯೋಜನೆಗಳನ್ನು ಜಾರಿಗೊಳಿಸಿದ್ದರು.

ರೈತರ ಸಾಲಮನ್ನಾ, ನೀರಾವರಿ ಯೋಜನೆಗೆ ಒತ್ತು ನೀಡಿದ್ದರು.ರಾಜ್ಯದ ಎಲ್ಲಾ ಹೆದ್ದಾರಿಗಳನ್ನು ಅಭಿವೃದ್ದಿಪಡಿಸಿದ್ದರು. ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳನ್ನು ರಚಿಸಿ ರಾಜ್ಯದ ಮಹಿಳೆಯರನ್ನು ಸ್ವಾವಲಂಭಿಗಳನ್ನಾಗಿ ಮಾಡಿದ್ದರು. ಎಲ್ಲಾ ಮಹಿಳೆಯರು ಬ್ಯಾಂಕ್ ಖಾತೆ ಹೊಂದುವoತೆ ಯೋಜನೆ ರೂಪಿಸಿದ್ದರು. ರಾಜೀವ್ ಯುವಶಕ್ತಿ ಸಂಘವನ್ನು ರಚಿಸಿ ಯವಕರು ಸಂಘಟಿತರಾಗಿ ಸಮಾಜದಲ್ಲಿ ಉತ್ತಮ ಕೆಲಸಗಳನ್ನು ನಡೆಸಲು ಸರ್ಕಾರದಿಂದ ಪ್ರೇರಣೆ ನೀಡಿ ಅನುದಾನ ಒದಗಿಸಿದ್ದರು. ಕೇಂದ್ರದಲ್ಲಿ ವಿದೇಶಾಂಗ ಸಚಿವರಾಗಿದ್ದಾಗ ಅನಿವಾಸಿ ಭಾರತೀಯರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು. ವಿದೇಶಾoಗ ನೀತಿ, ಆಮದು ಮತ್ತು ರಫ್ತು, ಯುವ ಜನಾಂಗಕ್ಕೆ ವಿದೇಶದಲ್ಲಿ ಉದ್ಯೋಗ ಇವೆಲ್ಲವೂ ಸರಳ ರೀತಿಯಲ್ಲಿ ಈಡೇರುವಂತೆ ನೋಡಿಕೊoಡಿದ್ದರು.ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾಗ ದೇಶದಲ್ಲೇ ಅತ್ಯುತ್ತಮ ರಾಜ್ಯಪಾಲೆರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ತಿಳಿಸಿದರು.

ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಎಸ್.ಜಯರಾಂ ಮಾತನಾಡಿ, ಎಸ್.ಎಂ.ಕೃಷ್ಣ ಅವರು ಜೀವಿತಾವಧಿಯಲ್ಲಿ ಸುಧೀರ್ಘವಾದ ರಾಜಕಾರಣದಲ್ಲಿ ತೊಡಗಿಸಿ ಕೊಂಡಿದ್ದರೂ ಕೂಡಾ ಸರಳ ಸಜ್ಜನಿಕೆ ಜೀವನದಿಂದ ಪ್ರತಿಯೊಬ್ಬರ ಮನಸ್ಸಿನಲ್ಲಿ ಅಜರಾಮರರಾಗಿ ಉಳಿದಿದ್ದ ಅವರ ನಿಧನದ ಸುದ್ದಿ ಅಘಾತ ವನ್ನುಂಟುಮಾಡಿದೆ. ಮಲೆನಾಡಿನ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಮೂವರು ಶಾಸಕರನ್ನು ಸಂಪುಟದರ್ಜೆ ಸಚಿವರನ್ನಾಗಿ ನೇಮಿಸಿ ಕೊಂಡಿದ್ದರು. ಅವರು ನೇರ ನಡೆ-ನುಡಿಯಿಂದ ಜನಾನುರಾಗಿಯಾಗಿದ್ದರು ಎಂದು ತಿಳಿಸಿದರು.

ಸಭೆಯಲ್ಲಿ ಪ.ಪಂ.ಸದಸ್ಯರಾದ ಹೊಸ್ಕೆರೆ ರಮೇಶ್,ಸಿ.ಬಿ.ಶಂಕರ್, ಜಯಮ್ಮ, ಮಾಜಿ ತಾಪಂ.ಅಧ್ಯಕ್ಷ ಎ.ಜಿ.ಸುಬ್ರಾಯ ಗೌಡ,ಸುಭ್ರಹ್ಮಣ್ಯ ಷಣ್ಮುಖಾನಂದ, ಚಂದ್ರೇಶ್, ಕುನ್ನಳ್ಳಿ ರವಿ, ಕಲ್ಪನಾ,ಚಂದ್ರೇಶ್, ಉಗ್ಗೇಹಳ್ಳಿ ಸುರೇಂದ್ರ, ಸಿ.ಎಚ್. ಅಹಮ್ಮದ್ ಬಾವ,ಸುಧೀರ್, ಹರೀಶ್ ಸಬ್ಬೇನಹಳ್ಳಿ, ಚಕ್ರಮಣಿ ಮತ್ತಿತರರಿದ್ದರು.

………. ವರದಿ: ವಿಜಯಕುಮಾರ್.ಟಿ.ಮೂಡಿಗೆರೆ

Leave a Reply

Your email address will not be published. Required fields are marked *

× How can I help you?