ಮೈಸೂರು-ಮೈಸೂರು ಒಕ್ಕಲಿಗರ ಸಂಘದ ವತಿಯಿಂದ ಎಸ್.ಎಂ ಕೃಷ್ಣರಿಗೆ ನುಡಿನಮನ-ಈ ನಾಡಿಗೆ ತುಂಬಲಾರದ ನಷ್ಟ ಎಂದ ಸಿ.ಜಿ ಗಂಗಾಧರ್

ಮೈಸೂರು-ನಾಡು ಕಂಡಂತಹ ಶ್ರೇಷ್ಠ ರಾಜಕಾರಣಿ,ಮಾಜಿ ಮುಖ್ಯಮಂತ್ರಿಗಳು,ಕೇಂದ್ರ ಸಚಿವರು,ಮಾಜಿ ರಾಜ್ಯ ಪಾಲರು ಆದ ಎಸ್.ಎಂ ಕೃಷ್ಣ ಅವರ ಮರಣ ಈ ನಾಡಿಗೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿ.ಜಿ ಗಂಗಾಧರ್ ತಿಳಿಸಿದರು.

ಮೈಸೂರಿನ ವಿಜಯನಗರದಲ್ಲಿರುವ,ರಾಜ್ಯ ಒಕ್ಕಲಿಗರ ಸಂಘದ ಮಹಿಳಾ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಎಸ್.ಎಂ ಕೃಷ್ಣ ರವರ ಭಾವಚಿತ್ರಕ್ಕೆ ಪುಷ್ಪನಮನ,ನುಡಿನಮನ ಸಲ್ಲಿಸಿದರು.

ಎಸ್ನಾ.ಎಂ ಕೃಷ್ಣ ರವರು,ನಾಡು ಕಂಡಂತಹ ಅಪರೂಪದ ದಿಟ್ಟ ,ನೇರ ನಡೆಯ ರಾಜಕಾರಣಿ.ಬೆಂಗಳೂರನ್ನು ಅಂತರರಾಷ್ಟೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಇವರ ಕೊಡುಗೆ ಅಪಾರ.ಸಾವಿರಾರು ಐ.ಟಿ ಬಿ.ಟಿ ಕಂಪನಿಗಳನ್ನು ಬೆಂಗಳೂರಿಗೆ ತಂದು ಲಕ್ಷಾಂತರ ಉದ್ಯೋಗ ನೀಡಿದರು. 2000 ಇಸವಿಯಲ್ಲಿ ರಾಷ್ಟ್ರದಲ್ಲೇ ನಂಬರ್ ಒನ್ ಮುಖ್ಯ ಮಂತ್ರಿಯಾಗಿದ್ದರು ಎಂದರು .

ಡಾ.ಎಂ.ಬಿ ಮಂಜೇಗೌಡ ಮಾತನಾಡಿ,ಮೈಸೂರು ಬೆಂಗಳೂರು ಹೆದ್ದಾರಿ,ಮೈಸೂರು ರಿಂಗ್ ರಸ್ತೆ ಯ ರೂವಾರಿ ಎಸ್. ಎಂ ಕೃಷ್ಣರವರು, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದ ಮಹಾನ್ ಮುತ್ಸದ್ದಿ ಎಂದರು.

ಕರ್ನಾಟಕ ಒಕ್ಕಲಿಗರ ಸಂಘದ ಮೈಸೂರು ಜಿಲ್ಲೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮಾತನಾಡಿ,ರಾಜ್ಯ ಸರ್ಕಾರ ನಾಡಿಗೆ ಎಸ್.ಎಂ ಕೃಷ್ಣರವರು ನೀಡಿರುವ ಸಮಗ್ರ ಕೊಡುಗೆಗಳ ಗಣನೆಗೆ ತೆಗೆದುಕೊಂಡು ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸುವಂತೆ ಒತ್ತಾಯಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಮಹಾನಗರ ಪಾಲಿಕೆ ಸದಸ್ಯ ಎಸ್. ಬಿ ಎಂ ಮಂಜು, ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್, ತೇಜೇಶ್ ಲೋಕೇಶ್ ಗೌಡ, ಶಿವಲಿಂಗಯ್ಯ, ಗೋವಿಂದೇಗೌಡ, ಲತ ರಂಗನಾಥ್, ರವಿ ರಾಜಕೀಯ, ಶೇಖರ್, ವಸಂತ ಮನೀಷ್, ಮಂಜುಳಾ ,ಲಕ್ಷ್ಮೀ, ಹೇಮಂತ್, ಭಾಗ್ಯಮ್ಮ , ಹೊಂಬೇಗೌಡ, ಮಂಜುನಾಥ್ ಹನುಮಂತಯ್ಯ ಸೇರಿದಂತೆ ಹಾಸ್ಟೆಲ್ ನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

———–—–ಮಧುಕುಮಾರ್

Leave a Reply

Your email address will not be published. Required fields are marked *

× How can I help you?