ಮೂಡಿಗೆರೆ:ತಾಲೂಕಿನ ಸತ್ತಿಗನಹಳ್ಳಿ,ಹೊಸ್ಕೆರೆ, ಊರುಬಗೆ ಭಾಗದಲ್ಲಿ ಕಳೆದ 1 ವಾರದಿಂದ 2 ಕಾಡಾನೆಗಳು ತೋಟಗಳಿಗೆ ಲಗ್ಗೆ ಹಾಕಿ ಕಾಫಿ, ಕಾಳುಮೆಣಸು,ಬಾಳೆ, ಅಡಕೆ ಬೆಳೆಗಳನ್ನು ನಾಶಪಡಿಸಿವೆ.
ಈ ಕಾಡಾನೆಗಳು ಕಳೆದ 1 ತಿಂಗಳಿoದ ಈ ಭಾಗದಲ್ಲಿ ತಿರುಗಾಡುತ್ತಿವೆ.ಈಗಾಗಲೇ ಸತ್ತಿಗನಹಳ್ಳಿಯ ವಾಸು,
ಗೋಪಾಲಗೌಡ, ಮಂಜುನಾಥಗೌಡ ಎಂಬುವರ ತೋಟಗಳಿಗೆ ಲಗ್ಗೆಯಿಟ್ಟಿದ್ದು,ತೋಟದ ಕಾಫಿ, ಅಡಕೆ, ಕಾಳುಮೆಣಸು ಬೆಳೆ ನಾಶಪಡಿಸಿವೆ. ಮಂಗಳವಾರ ಸತ್ತಿಗನಹಳ್ಳಿಯ ವಾಸು ಎಂಬುವರ ಮನೆ ಸಮೀಪಕ್ಕೆ ಬಂದು ಅಲ್ಲಿದ್ದ ಬಗನೆ
ಮರವನ್ನು ನೆಲಕ್ಕುರುಳಿಸಿದ ಪರಿಣಾಮ ಬಗನೆಮರ ಮನೆ ಮೇಲೆ ಬಿದ್ದು ಹೆಂಚುಗಳು ತುಂಡಾಗಿವೆ.
ಈ ಭಾಗದಲ್ಲಿ ಕಾಡಾನೆ ಹಾವಳಿಯಿಂದ ಜನ ಮನೆಯಿಂದೆ ಹೊರ ಬರಲು ಭಯಬೀತರಾಗಿದ್ದು, ಕೂಲಿ ಕಾರ್ಮಿಕರು ತೋಟದ ಕೆಲಸಕ್ಕೆ ಬರುತ್ತಿಲ್ಲ. ಅಲ್ಲದೆ ವಿಧ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ಭಯಪಡುತ್ತಿದ್ದಾರೆ. ಈ ಬಾರಿಯ ಅತಿಯಾದ ಮಳೆಯಿಂದ ಬೆಳೆ ಕೊಳೆಯುತ್ತಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ಕಾಡಾನೆಯ ಉಪಟಳದಿಂದ ಬೆಳೆ ನಶಿಸುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಹಾಗಾಗಿ ಅರಣ್ಯ ಇಲಾಖೆ ಇಲ್ಲಿರುವ 2 ಕಾಡಾನೆಗಳನ್ನು ಕೂಡಲೆ ಹಿಡಿದು
ಸ್ಥಳಾಂತರಿಸಬೇಕೆoದು ಸ್ಥಳೀಯರು ಒತ್ತಾಯಿಸಿದ್ದಾರೆ.
———————–ವರದಿ: ವಿಜಯಕುಮಾರ್, ಮೂಡಿಗೆರೆ