ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಮಕೂರು ವತಿಯಿಂದ ಪೆಮ್ಮನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಕುಮಾರರಾಮ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪರಮಪೂಜ್ಯ ಡಾ||ಡಿ.ವೀರೇಂದ್ರಹೆಗ್ಗಡೆಯವರು 1ಲಕ್ಷದ 50ಸಾವಿರ ರೂಗಳನ್ನು ಮಂಜೂರಾತಿ ಮಾಡಿದ್ದು ತುಮಕೂರು ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣ ರವರು ಕಮಿಟಿಯ ಸದಸ್ಯರಿಗೆ ಡಿಡಿಯನ್ನು ವಿತರಣೆ ಮಾಡಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಪ್ರಭಾಕರ್ ರಾಮನಾಯಕ್,ಪೂಜ್ಯರ ಅಭಿಮಾನಿಯಾದ ಬ್ಯಾತಸೋಮಣ್ಣನವರು ಊರ್ಡಿಗೆರೆ ವಲಯದ ಮೇಲ್ವಿಚಾರಕರಾದ ಲೋಕೇಶ್.ಎಚ್.ಎಸ್, ಸೇವಾ ಪ್ರತಿನಿಧಿಯಾದ ಶೋಭ, ಸ್ವ ಸಹಾಯ ಸಂಘದ ಸದಸ್ಯರು, ಊರಿನ ಮುಖಂಡರು ಹಾಜರಿದ್ದರು.
————————-ಕೆ.ಬಿ ಚಂದ್ರಚೂಡ