ಹೊಳೆನರಸೀಪುರ:ಎದುರುಮುಖ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಡಿ.13 ರಂದು ಹನುಮ ಜಯಂತಿ-ಅನ್ನಸಂತರ್ಪಣೆ

ಹೊಳೆನರಸೀಪುರ:ರಿವರ್ ಬ್ಯಾಂಕ್ ರಸ್ತೆಯಲ್ಲಿರುವ ಎದುರುಮುಖ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 13 ರ ಶುಕ್ರವಾರ ಹನಮ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಿಗ್ಗೆ ಅಭಿಷೇಕ, ಅಲಂಕಾರ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 7 ಗಂಟೆಗೆ ಉತ್ಸವ ನಡೆಯುತ್ತದೆ. ಉತ್ಸವ ಚೆನ್ನಾಂಬಿಕ ವೃತ್ತದಿಂದ ಹೊರಟು ಮಹಾತ್ಮಾಗಾಂಧಿ ಸರ್ಕಲ್ ವರೆಗೆ ಹೋಗಿ ನಂತರ ವಾಪಸ್ಪೇಟೆ ಮುಖ್ಯರಸ್ತೆ ಮುಖಾಂತರ ಕಂಚುಗಾರರ ಬೀದಿಯಲ್ಲಿ ಸಂಚರಿಸಿ ಮರಳಿ ದೇವಸ್ಥಾನಕ್ಕೆ ಬರುತ್ತದೆ ಎಂದು ಸಮಿತಿಯ ಕಾರ್ಯದರ್ಶಿ ನರಸಿಂಹಶೆಟ್ಟಿ ತಿಳಿಸಿದ್ದಾರೆ.

——–——-ಸುಕುಮಾರ್

Leave a Reply

Your email address will not be published. Required fields are marked *

× How can I help you?