ಚಿಕ್ಕಮಗಳೂರು-ಕಾವ್ಯ ಮೋಹನ್‌ಕುಮಾರ್ ಮಲ್ಲೇನಹಳ್ಳಿ ಗ್ರಾ.ಪಂ. ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

ಚಿಕ್ಕಮಗಳೂರು-ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕಾವ್ಯ ಮೋಹನ್‌ಕುಮಾರ್ ಬುಧವಾರ ಅವಿರೋಧ ಆಯ್ಕೆಯಾದರು.

ಪಂಚಾಯಿತಿ ಸಭಾಂಗಣದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಕಾವ್ಯ ಹೊರತಾಗಿ ಉಮೇದುವಾರಿಕೆ ಸಲ್ಲಿಕೆಯಾಗದ ಕಾರಣ ಚುನಾವಣಾಧಿಕಾರಿ ಹೆಚ್.ಸಿ.ರವೀಶ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಸದಸ್ಯರುಗಳಾದ ಪುಟ್ಟಮ್ಮ, ಪ್ರೇಮ, ಪಲ್ಲವಿ, ಸತೀಶ್, ಸಂದೀಪ್, ರವಿ, ತಮ್ಮೇಗೌಡ, ದಿಲೀಪ್, ಸುನೀತಾ ಸ್ವಾಮಿ, ಬಿಜೆಪಿ ಮುಖಂಡರುಗಳಾದ ಶಿವರಾಜ್, ಪ್ರಕಾಶ್, ಪುನೀತ್, ಪಿಡಿಓ ಸುಶ್ಮಿತಾ ಮತ್ತಿತರರಿದ್ದರು.

—————-——-ಸುರೇಶ್

Leave a Reply

Your email address will not be published. Required fields are marked *

× How can I help you?