ಮೈಸೂರು-‘ನಟನ’ದಲ್ಲಿ ವಾರಾಂತ್ಯ ರಂಗ ಪ್ರದರ್ಶನ-ನಾಟಕ ‘ಮಧುರ ಮಂಡೋದರಿ’-ಡಿ.15ರಂದು ಸoಜೆ 06.30ಕ್ಕೆ

ಮೈಸೂರು-ಮೈಸೂರಿನ ಮತ್ತು ಸುತ್ತಮುತ್ತಲಿನ ಸದಭಿರುಚಿಯ,ಸಹೃದಯ ರಂಗಾಸಕ್ತರಿಗಾಗಿ ನಟನವು ವಾರಾಂತ್ಯ ರಂಗ ಪ್ರದರ್ಶನಗಳನ್ನು ನಡೆಸುತ್ತಿದ್ದು, ಇದೇ ಡಿಸೆಂಬರ್ 15ರಂದು ಸoಜೆ 06.30ಕ್ಕೆ ಸರಿಯಾಗಿ ರಾಮಕೃಷ್ಣ ನಗರದಲ್ಲಿರುವ ನಟನ ರಂಗಶಾಲೆಯಲ್ಲಿ ರಂಗಬ0ಡಿ ಮಳವಳ್ಳಿ (ರಿ) ಪ್ರಸ್ತುತ ಪಡಿಸುವ ಏಕವ್ಯಕ್ತಿ ರಂಗಪ್ರಯೋಗ ‘ಮಧುರ ಮಂಡೋದರಿ’ ಪ್ರದರ್ಶನಗೊಳ್ಳಲಿದೆ.

ನಾಟಕದ ರಚನೆ ಪ್ರಸನ್ನ ಕುಮಾರ್ ಕೆರಗೋಡು ಹಾಗೂ ವಿನ್ಯಾಸ ಮತ್ತು ನಿರ್ದೇಶನ ಮಧು ಮಳವಳ್ಳಿ ಅವರದ್ದು.

ನಾಟಕದ ಕುರಿತು:

ಸ್ತ್ರೀಯ ಮೇಲಿನ ಬಲಾತ್ಕಾರಗಳು,ಅವಳೊಳಗಿನ ಸಂಕಟಗಳು, ಅವುಗಳನ್ನು ಎಲ್ಲೂ ಬಿಚ್ಚಿ ಹೇಳಿಕೊಳ್ಳಲಾಗದ ಅಸಹಾಯಕ ಸ್ಥಿತಿ, ಒಳಗೊಳಗೆ ಕುದಿಯುವ ಅವಳ ಮನಸ್ಸು, ಅವಳೊಳಗಿನ ತಲ್ಲಣಗಳು ಮತ್ತು ಪುರುಷ ಪ್ರಾಬಲ್ಯದ ಬಲಾತ್ಕಾರದಿಂದ ಆಕೆ ಅನುಭವಿಸುವ ನೋವುಗಳ ಮಧ್ಯೆಯೆ ಎಲ್ಲಾ ಸಾಧನೆಯನ್ನು ಮಾಡುವ ಆಕೆಯ ಛಲ ಮಾತ್ರ ಅದ್ವಿತೀಯ. ಸಮಕಾಲೀನ ಮೇಲ್ಮಧ್ಯಮ ವರ್ಗದ ಓರ್ವ ಮಹಿಳೆಯ ಕಥೆಯ ಎಳೆಯೊಂದನ್ನು ಪುರಾಣದ ಮಂಡೋದರಿಯ ಕಥೆಯ ಜೊತೆ ತೌಲನಿಕವಾಗಿಸುವ ಪ್ರಯತ್ನವೇ ಈ ನಾಟಕ.

ರಂಗಾಸಕ್ತರಿಗೆ ಆತ್ಮೀಯ ಸ್ವಾಗತ. ಮಾಹಿತಿಗಾಗಿ 7259537777,9480468327,9845595505 ಸಂಪರ್ಕಿಸಿ.

ಮoಡ್ಯ ರಮೇಶ್ ಅವರ ನಟನ ರಂಗಶಾಲೆಯು ಕಳೆದ ಅನೇಕ ವರ್ಷಗಳಿಂದ ಕಲಾಮಾಧ್ಯಮದಲ್ಲಿ ಕ್ರಿಯಾಶೀಲವಾಗಿದ್ದು
ರಂಗಭೂಮಿಯಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ.ರಂಗಭೂಮಿಯ ಅಧ್ಯಯನ, ಪ್ರಾತ್ಯಕ್ಷಿಕೆ, ಪ್ರಯೋಗ ಹಾಗೂ ಪ್ರದರ್ಶನಗಳ ಮೂಲಕ ಶ್ರೇಷ್ಠತೆಯನ್ನು ಸಾಧಿಸುವುದರತ್ತ ನಟನ ಸತತವಾಗಿ ಪ್ರಯತ್ನ ನಡೆಸುತ್ತಾ ಬಂದಿದ್ದು, ಮೈಸೂರಿನಲ್ಲಿ ನೆಲೆಗೊಂಡಿದ್ದರೂ ಭಾರತದಾದ್ಯಂತ ರಂಗಯಾತ್ರೆಗಳನ್ನು,ರoಗ ತರಬೇತಿ ಶಿಬಿರಗಳನ್ನು ನಡೆಸುವುದರ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

Leave a Reply

Your email address will not be published. Required fields are marked *

× How can I help you?