ಅರಕಲಗೂಡು-ಸಂಬಂದಿಕರ ಸಾವಿಗೆಂದು ಊರಿಗೆ ಬಂದಿದ್ದ ವ್ಯಕ್ತಿಗೆ ಟ್ರಾಕ್ಟರ್ ನಿಂದ ಅಪಘಾತವಾಗಿ ಮೃತಪಟ್ಟಿರುವ ಘಟನೆ ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಸಿದ್ದೇಗೌಡನಕೊಪ್ಪಲಿನ ದಿಲೀಪ್ ಕುಮಾರ್ ಸಂಸಾರ ಸಮೇತರಾಗಿ ಬೆಂಗಳೂರಿನಲ್ಲಿ ವಾಸವಿದ್ದರು. ಸಂಬಂಧಿಕರೊಬ್ಬರು ತೀರಿ ಹೋದ ಕಾರಣಕ್ಕೆ ಅವರ ಅಂತಿಮ ದರ್ಶನಕ್ಕಾಗಿ ಬೈಕ್ ನಲ್ಲಿ ಅರಕಲಗೋಡಿಗೆ ಬಂದಿದ್ದ ಆತ ಮರಳಿ ಹೋಗುವಾಗ ಕಿರಿಸಾವೆ ಗಡಿ ಹತ್ತಿರ ಟ್ರಾಕ್ಟರ್ ಹರಿದು ಅಸುನೀಗಿದ್ದಾನೆ.
ಸಾಂದರ್ಭಿಕ ಚಿತ್ರ
ಮೃತನ ಪತ್ನಿ ರಂಜಿತಾ ಕೊಟ್ಟ ದೂರಿನ ಅನ್ವಯ ಕೇಸು ದಾಖಲಿಸಿಕೊಂಡಿರುವ ಹಿರಿಸಾವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
——–-ಶಶಿಕುಮಾರ್ ಕೆಲ್ಲೂರು