ತುಮಕೂರು:ಶ್ರೀ ಸಿದ್ಧಗಂಗಾ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ ಗುರುವಾರ ಅಂತಿಮ ವರ್ಷದ ಬಿ.ಕಾಂ ಮತ್ತು ಬಿ.ಬಿ.ಎ ವಿದ್ಯಾರ್ಥಿಗಳಿಗೆ ಜಿ.ಎಸ್.ಟಿ. ವಿಷಯದ ಬಗ್ಗೆ ವಿಶೇಷ ಉಪನ್ಯಾಸವನ್ನು ಏರ್ಪಡಿಸ ಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಅಭಿಲಾಶ್ ಕೆ ಅಂಡ್ ಕಂಪನಿಯ ಸಿ.ಎ ಅಭಿಲಾಶ್.ಕೆ ರವರು ಆಗಮಿಸಿ ವಿದ್ಯಾರ್ಥಿಗಳಿಗೆ ಜಿ.ಎಸ್.ಟಿ ಬಗ್ಗೆ ಎಲ್ಲಾ ಮಾಹಿತಿಗಳನ್ನು ಸವಿಸ್ತಾರವಾಗಿ ವಿವರಿಸಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಬಿ.ನಿಜಲಿಂಗಪ್ಪ,ಐ.ಕ್ಯು.ಎ.ಸಿ ಸಂಯೋಜಕರಾದ ಶ್ರೀಮತಿ ಸರ್ವಮಂಗಳ. ಎಚ್.ಜಿ,ನ್ಯಾಕ್ ಸoಯೋಜಕರಾದ ಪ್ರೊ.ಸಿ.ಎಸ್.ಸೋಮಶೇಖರಯ್ಯ ಹಾಗೂ ವಿಭಾಗದ ಮುಖ್ಯಸ್ಥರಾದ ಪ್ರೊ.ರತ್ನಮ್ಮ.ವೈ.ಎಸ್ ಹಾಗೂ ಶ್ರೀಮತಿ ಸಂಗೀತ, ಶ್ರೀಮತಿ ಬಸವಶೃತಿ ಉಪಸ್ಥಿತರಿದ್ದರು.
—————–—ಕೆ.ಬಿ ಚಂದ್ರಚೂಡ