ಗೆಂಡೇಹಳ್ಳಿ-ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣರವರ ನಿಧನಕ್ಕೆ ಗೆಂಡೇಹಳ್ಳಿಯ ಹೋಬಳಿ ಕಾಂಗ್ರೆಸ್ ನ ಪದಾಧಿಕಾರಿಗಳು ಕಂಬನಿ ಮಿಡಿದಿದ್ದಾರೆ.
ಹೋಬಳಿಯ ಅಧ್ಯಕ್ಷ ಶ್ರೀನಿವಾಸ್ ಜಿ.ಬಿ, ಎಸ್.ಎಂ ಕೃಷ್ಣರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿ,ಎಸ್.ಎಂ ಕೃಷ್ಣರವರ ನಿಧನದಿಂದ ನಾಡು ಬಡವಾಗಿದೆ.
ನಿಂತ ನೀರಾಗಿದ್ದ ರಾಜ್ಯ ರಾಜಕಾರಣಕ್ಕೆ ಹೊಸ ಭಾಷ್ಯ ಬರೆದವರು ಎಸ್.ಎಂ ಕೃಷ್ಣರವರು.ಸರಕಾರಿ ಶಾಲೆಯ ಬಡ ಮಕ್ಕಳಿಗೆ ಬಿಸಿಯೂಟದಂತಹ ಕಾರ್ಯಕ್ರಮಗಳನ್ನು ನೀಡುವ ಮೂಲಕ ಶಿಕ್ಷಣಕ್ಕೆ ಇರುವ ಮಹತ್ವವನ್ನು ಸಾರುವುದರ ಜೊತೆಗೆ ಬಡವರ ಮೇಲಿನ ತಮ್ಮ ಪ್ರೀತಿಯನ್ನು ತೋರ್ಪಡಿಸಿದ್ದರು.
ದೂರದೃಷ್ಟಿಯ ಮುತ್ಸದ್ದಿ ನಾಯಕರ ಸಾವು ನಮಗೆಲ್ಲ ಅತೀವ ದುಃಖವನ್ನು ತಂದಿದ್ದು ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ದಯಪಾಲಿಸಲಿ.ಕುಟುಂಬಕ್ಕೆ ಎಸ್.ಎಂ ಕೃಷ್ಣರವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸಿದರು.
ಯುವ ನಾಯಕ ಸಚಿನ್ ತಲಗೋಡು ಮಾತನಾಡಿ, ಎಸ್.ಎಂ ಕೃಷ್ಣರವರು ಸಿ.ಎಂ ಆಗಿದ್ದ ಕಾಲದಲ್ಲಿಯೂ ಹಾಗು ನಂತರವೂ ರಾಜಕೀಯ ರಂಗಕ್ಕೆ ಯುವರಾಜಕಾರಣಿಗಳ ಅಗತ್ಯತೆಯನ್ನು ಅರಿತು ಯುವ ಸಮುದಾಯವನ್ನು ರಾಜಕೀಯ ರಂಗಕ್ಕೆ ತರುವಲ್ಲಿ,ಮತ್ತು ಅವರಿಗೆ ಜವಾಬ್ದಾರಿಗಳನ್ನು ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಸಾಣೇನಹಳ್ಳಿ ಅಪ್ಪಣ್ಣ,ಮಲ್ಲೇಶ್ ಆಡುವಲ್ಲಿ,ಕಳ್ಳೇರಿ ಚನ್ನೇಗೌಡರು,ರತೀಶ್ ಅಡಮನಹಳ್ಳಿ ,ಜೆ,ಬಿ ರವಿ ಮುಂತಾದವರು ಇದ್ದರು.