
ಮೂಡಿಗೆರೆ:ಕಾಫಿ ಬೆಳೆಗಾರರು ಒತ್ತುವರಿಮಾಡಿ ತೋಟ ಮಾಡಿಕೊಂಡಿರುವ ಜಮೀನನ್ನು ಬೆಳೆಗಾರರಿಗೆ ಕೊಡುವ ಸರ್ಕಾರದ ಯೋಜನೆಯ ಲಾಭ ಪಡೆಯಲು ಒತ್ತುವರಿದಾರರು ನಾಡ ಕಛೇರಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಸೋಚ್ಛಿಸಿದರು.
ಅವರು ಗುರುವಾರ ಪಟ್ಟಣದ ಬೆಳೆಗಾರರ ಭವನದಲ್ಲಿ ನಡೆದ ತಾಲೂಕು ಬೆಳೆಗಾರರ ಸಂಘದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಕಾಫಿ ಬೆಳೆಯನ್ನು ಸರ್ಫೇಸಿ ಕಾಯ್ದೆ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಬೆಳೆಗಾರರಿಗೆ ವರದಾನವಾಗಿದೆ. ರಾಜ್ಯ ಸರ್ಕಾರ ಬೆಳೆಗಾರರ ಒತ್ತುವರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಒತ್ತುವರಿದಾರರಿಗೆ ನೀಡಲು ಮುಂದಾಗಿದ್ದು ಅಗತ್ಯವಿರುವ ಎಲ್ಲ ಬೆಳೆಗಾರರು ಸೇರ್ಪಡೆಗೊಳ್ಳಬೇಕು.
ಈ ವರ್ಷ ಡಿಸೆಂಬರ್ ತಿಂಗಳಿನಲ್ಲೂ ಅಕಾಲಿಕ ಮಳೆಯಾಗಿರುವುದರಿಂದ ಬೆಳೆಗಾರರಿಗೆ ಹೆಚ್ಚಿನ ಸಮಸ್ಯೆಯಾಗಿದೆ.ಮಳೆಯಿಂದಾಗಿ ಕುಯ್ಲಿಗೆ ಬಂದ ಕಾಫಿ ಹಣ್ಣು ನೆಲಕ್ಕುದುರಿದೆ.ಮತ್ತೆ ಗಿಡದಲ್ಲಿ ಹೂವು ಅರಳಿರುವುದರಿಂದ ಮುಂದಿನ ವರ್ಷದ ಬೆಳೆಗೆ ತೊಂದರೆಯಾಗಲಿದೆ. ಭತ್ತದ ಕುಯ್ಲು ಆರಂಭವಾಗಿದ್ದು ಮಳೆಯಿoದಾಗಿ ಸಸಿಯಲ್ಲಿದ್ದ ಬತ್ತ ನೀರು ಪಾಲಾಗಿದೆ.ರೈತರು ಕಷ್ಟಪಟ್ಟು ವರ್ಷಪೂರ್ತಿ ಬೆಳೆದ ಭತ್ತ ಕೈ ಸೇರದೆ ಹಾನಿ ಸಂಭವಿಸಿದೆ. ಸರ್ಕಾರ ಕಾಫಿ ಬೆಳೆಗಾರರಿಗೆ, ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬೆಳೆಗಾರರ ಸಂಘದ ನೂತನ ಕಟ್ಟಡ ನಿರ್ಮಾಣದ ಖರ್ಚು- ವೆಚ್ಚದ ವಿವರ ಸಭೆಯಲ್ಲಿ ಮಂಡಿಸಲಾಯಿತು.ಕಟ್ಟಡದ ಉಧ್ಘಾಟನೆ, ಸoಘದ ಕಛೇರಿಗೆ ಸಿಬ್ಬಂದಿ ನೇಮಕಾತಿಯ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಬೆಳೆಗಾರರ ಸಂಘದ ಕಾರ್ಯದರ್ಶಿ ಕೆ.ಡಿ.ಮನೋಹರ್, ಬೆಳೆಗಾರರಾದ ಹಳಸೆ ಶಿವಣ್ಣ, ಬಿ.ಎಸ್.ಜಯರಾಮ್,ಡಿ.ಎಸ್.ರಘು, ಬಿ.ಬಸವರಾಜ್, ಡಿ.ಆರ್.ಪುಟ್ಟಸ್ವಾಮಿಗೌಡ, ಎಂ.ಡಿ.ಜಯಪಾಲ್,ಎo.ಎನ್.ಅಶ್ವಥ್, ಕೆ.ಹೆಚ್.ವೆಂಕಟೇಶ್, ಹೆಚ್.ಪಿ.ರೇವಣ್ಣಗೌಡ, ನಿಡುವಾಳೆ ಚಂದ್ರು, ಬಿ.ಆರ್.ಯತೀಶ್, ನರೇಂದ್ರ ಮತ್ತಿತರರಿದ್ದರು.
………..ವರದಿ: ವಿಜಯಕುಮಾರ್.ಟಿ.ಮೂಡಿಗೆರೆ