ಮೈಸೂರು-ಡಿ16 ರಿಂದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಡಾ.ಪಾವಗಡ ಪ್ರಕಾಶ್ ರಾವ್‌ ರಿಂದ ಪ್ರವಚನ ಮಾಲಿಕೆ

ಮೈಸೂರು-ನಗರದ ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಡಿ.16ರಿಂದ 18ರವರೆಗೆ ಪ್ರತಿದಿನ ಸಂಜೆ 5.30ಕ್ಕೆ ಕೃಷ್ಣಮೂರ್ತಿಪುರಂನ ದತ್ತ ಸೇನೆ ಮತ್ತು ಉಪನ್ಯಾಸ ಮಾಲಿಕೆ ಸಮಿತಿ, ಮೈಸೂರು ಇವರ ವತಿಯಿಂದ ಬೆoಗಳೂರಿನ ಪ್ರವಚನ ಚಕ್ರವರ್ತಿ ಡಾ.ಪಾವಗಡ ಪ್ರಕಾಶ್ ರಾವ್ ಇವರಿಂದ ‘ಉಪನಿಷತ್ ದರ್ಶನ’ ಎಂಬ ವಿಷಯ ಕುರಿತು ಪ್ರವಚನ ಮಾಲಿಕೆಯನ್ನು ಆಯೋಜಿಸಲಾಗಿದೆ.

ಡಿ.16ರಂದು ಸಂಜೆ 5.30ಕ್ಕೆ ಪರಮಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಹಾಗೂ ಕಿರಿಯ ಸ್ವಾಮಿಗಳಾದ ದತ್ತ ವಿಜಯಾನಂದ ತೀರ್ಥ ಶ್ರೀಗಳು ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮೇಲುಕೋಟೆ ಮೇಲುಕೋಟೆ ವಂಗೀಪುರ ಮಠದ ಶ್ರೀ ಇಲ್ಲೈ ಆಳ್ವಾರ್ ಸ್ವಾಮೀಜಿ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್, ಮಾಜಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಉದ್ಯಮಿ ಮಹೇಶ್ ಶೆಣೈ, ನಿವೃತ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ರಾವ್, ಹಿರಿಯ ಸಮಾಜ ಸೇವಕ ಡಾ.ಕೆ.ರಘುರಾಮ್ ವಾಜಪೇಯಿ, ಸಪ್ತಋಷಿ ಸೌಹಾರ್ದ ಸೊಸೈಟಿಯ ನಿರ್ದೇಶಕ ನಾಗಚಂದ್ರ, ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್.ನಾಗರಾಜ್, ಉದ್ಯಮಿ ರವಿಶಾಸ್ತ್ರ , ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ, ಲಕ್ಷ್ಮೀಪುರಂ ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕ ರವಿಶಂಕರ್, ಕಾoಗ್ರೆಸ್ ಮುಖಂಡ ಜೈರಾಜ್, ಹರಿದಾಸ ಸಮಿತಿ ಅಧ್ಯಕ್ಷ ರವಿಕುಮಾರ್, ಡೆವಲಪರ್ ಗಿರೀಶ್, ಒಂಟಿಕೊಪ್ಪಲ್ ವೆಂಕಟೇಶ್ವರ ಸ್ವಾಮಿ ದೇವಸ್ಥನದ ಟ್ರಸ್ಟಿ ಪುಟ್ಟಸ್ವಾಮಿ ಇವರುಗಳು ಆಗಮಿಸಲಿದ್ದಾರೆ.

ಡಿ.18ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭದಲ್ಲಿ ‘ದತ್ತಾವಧೂತರ ಅವತಾರ’ ಎಂಬ ವಿಷಯ ಕುರಿತು
ಗುರುದ್ವಯರ ಸನ್ನಿಧಿಯಲ್ಲಿ ನಡೆಯಲಿದೆ.

ಅತಿಥಿಗಳಾಗಿ ಬೆಂಗಳೂರಿನ ವಿಪ್ರ ಮುಖಂಡ ರಘುನಾಥ, ಜ್ಯೋತಿ ಸಮೂಹ ಸಂಸ್ಥೆಯ ನರಸಿಂಹನ್, ವಿಪ್ರ ಮುಖಂಡ ಲಕ್ಷಿö್ಮÃಕಾಂತ್, ಉದ್ಯಮಿ ರಾಜಶೇಖರ್, ಕಾಂಗ್ರೆಸ್ ಮುಖಂಡ ಎಂ.ಎನ್.ನವೀನ್‌ಕುಮಾರ್, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಡಾ.ನಟರಾಜ ಜೋಯಿಸ್, ವಿಪ್ರ ವಕೀಲ ಪರಿಷತ್ ಅಧ್ಯಕ್ಷ ರವೀಂದ್ರ ಇವರುಗಳು ಆಗಮಿಸಲಿದ್ದಾರೆ.

ಭಕ್ತ ಮಹಾಶಯರು ಈ ಮೂರೂ ದಿನದ ಕರುಯಾಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೃತಾರ್ತರಾಗಬೇಕೆಂದು ದತ್ತ ಸೇನೆ ಅಧ್ಯಕ್ಷ ಆರ್.ಎಸ್. ಸತ್ಯನಾರಾಯಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಗೆ ಮೊಬೈಲ್ 9686832244ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

× How can I help you?