ಹಾಸನ:ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಂಜಿನಿಯರ್ ಸತ್ಯನಾರಾಯಣ್ ಅವರ ತಾಯಿ ಹೊನ್ನಮ್ಮ (84) ಶುಕ್ರವಾರ ಸಂಜೆ ನಿಧನರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ರವೀಂದ್ರ ನಗರ ಬಡಾವಣೆಯ ಕನಕ ಭವನ ರಸ್ತೆಯಲ್ಲಿರುವ ಪುತ್ರ
ಸತ್ಯನಾರಾಯಣ್ ಅವರ ಮನೆಯಲ್ಲಿ ಸಂಜೆ ಕೊನೆಯುಸಿರೆಳೆದರು.ಪುತ್ರಿಯರಾದ ಡಾ.ಹೇಮಲತಾ, ರಾಧ, ಪುಷ್ಪಲತಾ ಹಾಗೂ ಪುತ್ರ ಸತ್ಯನಾರಾಯಣ್, ಮೊಮ್ಮಕ್ಕಳು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಶನಿವಾರ ಬೆಳಗ್ಗೆ 10 ಗಂಟೆವರೆಗೂ ಮೃತದೇಹವನ್ನು ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. 11 ಗಂಟೆ ನಂತರ ಅರಸೀಕೆರೆ ರಸ್ತೆಯ ದೊಡ್ಡಪುರ ಸಮೀಪದ ಅವರ ಜಮೀನಿನಲ್ಲಿ ಅಂತ್ಯ ಸoಸ್ಕಾರ ನೆರವೇರಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.