ಕೆ.ಆರ್.ಪೇಟೆ-ಸಡಗರ ಸಂಭ್ರಮದಿಂದ ನೆರವೇರಿದ ಅಘಲಯ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವರ 85ನೇ ವರ್ಷದ ಹನುಮ ಜಯಂತಿ ಉತ್ಸವ

ಕೆ.ಆರ್.ಪೇಟೆ-ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮದಲ್ಲಿ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ದೇವರ 85ನೇ ವರ್ಷದ ಹನುಮ ಜಯಂತಿ ಉತ್ಸವವು ಸಡಗರ ಸಂಭ್ರಮದಿoದ ನಡೆಯಿತು.

ಹನುಮ ಜಯಂತಿಯ ಅಂಗವಾಗಿ ಹೋಮ-ಹವನ,ಪೂರ್ಣಾಹುತಿ,ಅಭಿಷೇಕ,ವಿವಿಧ ಪುಷ್ಪಾಲಂಕಾರ,ಹನುಮಂತ ದೇವರ ಪಲ್ಲಕ್ಕಿ ಉತ್ಸವ,ಸಿಡಿಮದ್ದು ಪ್ರದರ್ಶನ,ಅನ್ನದಾನ ಮತ್ತಿತರರ ಕಾರ್ಯಕ್ರಮಗಳು ನಡೆದವು.

ಸರ್ವಾಲಂಕಾರಗೊoಡ ಶ್ರೀ ಪ್ರಸನ್ನ ಆಂಜನೇಯಸ್ವಾಮಿಯವರ ಉತ್ಸವ ಮೂರ್ತಿಯನ್ನು ವೀರಗಾಸೆ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ಮಂಗಳವಾಧ್ಯ ವಾದನ ಮತ್ತಿತರರ ಜಾನಪದ ಕಲಾ ತಂಡಗಳೊoದಿಗೆ ಅಘಲಯ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಗ್ರಾಮದ ಮೂಲ ನಿವಾಸಿಗಳಾದ ಛತ್ರಿ ಶ್ರೀನಿವಾಸಅಯ್ಯಂಗಾರ್ ಕುಟುಂಬದ ಅನುರಾಧಾರಾಘವನ್ ಅವರ ಎಲ್ಲ ರೀತಿಯ ನೆರವಿನೊಂದಿಗೆ, ಅವರ ಶಿಷ್ಯ ವೃಂದದ ಹಾಗೂ ಅಘಲಯ ಗ್ರಾಮಸ್ಥರ ಸಹಕಾರದೊಂದಿಗೆ ಸಡಗರ ಸಂಭ್ರಮದಿಂದ ಹನುಮ ಜಯಂತಿಯನ್ನು ಆಚರಣೆ ಮಾಡಲಾಯಿತು.

ಹನುಮ ಜಯಂತಿ ಅಂಗವಾಗಿ ಗ್ರಾಮದ ಮುಖ್ಯ ಬೀದಿಗಳನ್ನು ವಿದ್ಯುತ್ ದೀಪಗಳು ಮತ್ತು ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಇದರಿಂದ ಗ್ರಾಮವು ನವ ವಧುವಿನಂತೆ ಕಂಗೊಳಿಸುತ್ತಿತ್ತು.

ಕಳೆದ 20 ವರ್ಷಗಳಿಂದ ಹನುಮ ಜಯಂತಿ ಉತ್ಸವವನ್ನು ವಿಜಯರಾಘವನ್ ಕುಟುಂಬದ ಸಹಕಾರದಿಂದ ನಡೆಸಿಕೊಂಡು ಬರಲಾಗುತ್ತಿದೆ ಅದರಂತೆ ಈ ಭಾರಿಯೂ ಸಹ ಅವರ ಅನುರಾಧಾ ವಿಜಯರಾಘವನ್ ಕುಟುಂಬದವರು ಅಘಲಯ ಪ್ರಸನ್ನ ಆಂಜನೇಯಸ್ವಾಮಿಯವರ ಪೂಜಾ ಕೈಂಕರ್ಯ ಹಾಗೂ ಹನುಮ ಜಯಂತಿ ಉತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು ಎಂದು ಹಿರಿಯ ಮುಖಂಡ ಮಾಸ್ಟರ್ ನಂಜಪ್ಪ ತಿಳಿಸಿದರು.

ತಾಲೂಕಿನ ಅಘಲಯದಲ್ಲಿ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆರೆದಿದ್ದ ಭಕ್ತ ಸಮೂಹವನ್ನು ಉದ್ಧೇಶಿಸಿ ಮಾತನಾಡಿದ ಮಾಜಿ ಸಚಿವ ಡಾ.ನಾರಾಯಣಗೌಡ ಸ್ವಾಮಿ, ನಿಷ್ಠೆ ಹಾಗೂ ಅಛಲವಾದ ಭಕ್ತಿಗೆ ಶ್ರೀಆಂಜನೇಯನಿಗಿಂತ ಬೇರೆ ಉದಾಹರಣೆಯು ನಮ್ಮ ಕಣ್ಣ ಮುಂದಿಲ್ಲ. ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ಪ್ರಭುವಿನ ಆಜ್ಞಾಪಾಲಕನಾದ ಸ್ವಾಮಿ ಭಕ್ತನ ಹಲವಾರು ಸಾಹಸಗಳ ಬಗ್ಗೆ ಪುರಾಣದಲ್ಲಿ ಕೇಳಿ ತಿಳಿದಿದ್ದೇವೆ. ಹನುಮಂತನ ಸ್ವಾಮಿ ನಿಷ್ಠೆ ಹಾಗೂ ಕರ್ತವ್ಯ ಪ್ರಜ್ಞೆಯು ಎಲ್ಲರಿಗೂ ಮಾದರಿಯಾಗಿದೆ ಎಂದು ಗುಣಗಾನ ಮಾಡಿದ ನಾರಾಯಣಗೌಡ ಲಂಕೇಶ್ವರನಾದ ರಾವಣನಿಂದ ಸೀತಾಮಾತೆಯನ್ನು ಬಿಡಿಸಿಕೊಂಡು ಬರಲು ಕಪಿ ಸೈನ್ಯವನ್ನು ಹುರಿದುಂಬಿಸಿ ಸಿದ್ಧಪಡಿಸಿ ಲಂಕೆಗೆ ಸೇತುವೆ ಕಟ್ಟಿದ್ದಲ್ಲದೇ ಸಮುದ್ರದ ಸೀಮೋಲ್ಲಂಘನ ಮಾಡಿ ರಾವಣನ ಅರಮನೆಯನ್ನು ಸುಟ್ಟು ಬುದ್ಧಿಕಲಿಸಿದ ಆಂಜನೇಯನ ಲೀಲೆ ಪರಾಕ್ರಮಗಳು ಇಂದಿಗೂ ಜನಜನಿತವಾಗಿವೆ. ಶ್ರೀರಾಮಚಂದ್ರ ಪ್ರಭುವಿನ ನಿಷ್ಠಾವಂತ ಸೇವಕನಾದ ಆಂಜನೇಯನು ನಮ್ಮ ರಾಜ್ಯದ ಕೊಪ್ಪಳದ ಅಂಜನಾದ್ರಿಯವನು ಎಂದು ಹೆಮ್ಮೆಯಿಂದ ಹೇಳಬೇಕಾಗಿದೆ ಎಂದರು.

ಛತ್ರಿ ಶ್ರೀನಿವಾಸ ಅಯ್ಯಂಗಾರ್ ಕುಟುಂಬದ ಅನುರಾಧಾ ವಿಜಯರಾಘವನ್ ಮತ್ತು ಕುಟುಂಬದವರು ಬಹಳ ಶ್ರದ್ದಾ ಭಕ್ತಿಯಿಂದ ಪ್ರತಿ ವರ್ಷವೂ ಅಘಲಯದಲ್ಲಿ ಶ್ರೀ ಪ್ರಸನ್ನ ಅಂಜನೇಯಸ್ವಾಮಿಯ ಸೇವೆಯನ್ನು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ. ಇನ್ನೂ ಹೆಚ್ಚಿನ ದೇವರ ಸೇವೆಯನ್ನು ಮಾಡಲು ಆ ಆಂಜನೇಯಸ್ವಾಮಿಯು ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.

ಬೆಂಗಳೂರು, ಮೈಸೂರು, ಮಂಡ್ಯ, ಕೆ.ಆರ್.ಪೇಟೆ, ಮೇಲುಕೋಟೆ, ಚನ್ನರಾಯಪಟ್ಟಣ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಹನುಮ ಜಯಂತಿ ಉತ್ಸವದಲ್ಲಿ ಭಾಗವಹಿಸಿ ಹನುಮಂತ ದೇವರ ಕೃಫೆಗೆ ಪಾತ್ರರಾದರು.

ಕಾರ್ಯಕ್ರಮದಲ್ಲಿ ದಾನಿ ಅನುರಾಧಾರಾಘವನ್, ಮಾಜಿ ಸಚಿವ ಡಾ.ನಾರಾಯಣಗೌಡ, ತಾಲೂಕು ಪಂಚಾಯಿತಿ ಅಧ್ಯಕ್ಷ ಜಾನಕೀರಾಂ, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎಸ್.ರಮೇಶ್, ತಾಲ್ಲೂಕು ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎ.ಎಸ್.ಶ್ರೀಧರ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಭಾರತಿಶ್ರೀಧರ್, ಎ.ಎಲ್. ನಂಜಪ್ಪ, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಹೋಬಳಿ ಲೋಕೇಶ್, ಸಂಪತ್ತು, ಕೆ.ಸಿದ್ದೇಗೌಡ, ಎ.ಬಿ.ಗಣೇಶ್, ರಾಮನಕೊಪ್ಪಲು ಶಿವಣ್ಣನ ಕುಟುಂಬ, ಸೇರಿದಂತೆ ಹಲವು ಗಣ್ಯರು, ಸಾವಿರಾರು ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

—————ಶ್ರೀನಿವಾಸ್ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?