ತುಮಕೂರು:ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯದಾದ್ಯoತ ತನ್ನ ಶಾಖೆಗಳನ್ನು ವಿಸ್ತರಿಸಿ ಕೊಂಡು ಪತ್ರಕರ್ತರ ಕ್ಷೇಮಾಭಿವೃದ್ಧಿ ಸೇರಿದಂತೆ ಅವರ ರಕ್ಷಣೆಗೆ ಕಟಿಬದ್ಧವಾಗಿ ನಿಂತು ಸಹಕಾರ ನೀಡುತ್ತಿದ್ದು ಈ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನು ನಡೆಸಲು ನಿರ್ಧರಿಸಲಾಗಿದೆ.
ಕಲ್ಪತರುನಾಡಿನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ರಾಜ್ಯಮಟ್ಟದ ಸಮ್ಮೇಳನ ನಡೆಸಿ ಯಶಸ್ವಿಗೊ ಳಿಸಬೇಕೆಂದು ಶುಭ ಹಾರೈಸಿ ಸಮ್ಮೇಳನದ ಲಾಂಛನವನ್ನು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಅವರು ನಗರದ ನೀರಿಕ್ಷಣಾ ಮಂದಿರದಲ್ಲಿ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಸಚಿವರು,ಜಿಲ್ಲೆಯಲ್ಲಿ ನಡೆಯುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಐದರಿಂದ ಆರು ಸಾವಿರ ಪತ್ರಕರ್ತರು ಸೇರಿದಂತೆ ಅವರ ಕುಟುಂಬಸ್ಥರು ಸೇರುವ ನಿರೀಕ್ಷೆಯಿದ್ದು ಜನವರಿ 18,19ರಂದು ಮುಖ್ಯಮoತ್ರಿಗಳು ಸಮ್ಮೇಳನಕ್ಕೆ ಬರುವ ಭರವಸೆಯನ್ನು ಈಗಾಗಲೇ ನೀಡಿದ್ದಾರೆ.ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆನಿಸಿರುವ ಪತ್ರಿಕಾ ರಂಗದ ಪತ್ರಕರ್ತರು ನಿತ್ಯವೂ ನಡೆಯುವ ಆಗುಹೋಗುಗಳನ್ನು ಜನರ ಮುಂದಿಡಲು ಹಗಲಿರುಳು ಕಷ್ಟಪಟ್ಟು ದುಡಿಯುತ್ತಿದ್ದಾರೆ.
ಪತ್ರಕರ್ತರು ಒಂದೆಡೆ ಸೇರುವ ನಿಟ್ಟಿನಲ್ಲಿ ಸಮ್ಮೇಳನ ನಡೆಸುತ್ತಿದ್ದು ಈ ಸಮ್ಮೇಳನಕ್ಕೆ ನಾನು ಸೇರಿದಂತೆ ಸಹಕಾರ ಸಚಿವ ಕೆ.ಎನ್ ರಾಜಣ್ಣ ಪಾಲ್ಗೊಳ್ಳಲಿದ್ದೇವೆ.ಜಿಲ್ಲಾಡಳಿತ ಹಾಗೂ ಇತರೆ ಸಂಘ,ಸಂಸ್ಥೆಗಳು ಸಹಕಾರ ನೀಡಿ ಪತ್ರಕರ್ತರ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಸಂದರ್ಭದಲ್ಲಿ ಮಾಜಿ ಸಚಿವ ಸೂಗಡು ಶಿವಣ್ಣ, ಜಿಲ್ಲಾಧಿಕಾರಿ ಶುಭ ಕಲಾಣ್, ಸಿಇಓ ಜಿ.ಪ್ರಭು,ಎಸ್ಪಿ ಆಶೋಕ್, ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಡಿ.ಎಂ ಸತೀಶ್, ಸದಸ್ಯರುಗಳಾದ ಟಿ.ಎನ್.ಮಧುಕರ್, ಶಾಂತರಾಜು ಅನು, ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಉಪಾಧ್ಯಕ್ಷ ಚಿಕ್ಕರಪ್ಪ, ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್, ಕಾರ್ಯದರ್ಶಿ ಹಾರೋಗೆರೆ ಸತೀಶ್, ಸೇರಿದಂತೆ ಸಂಘಟನೆಯ ನಿರ್ದೇಶಕರುಗಳು,ನಾಮ ನಿರ್ದೇಶಕರುಗಳು,ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.