ಹೊಳೆನರಸೀಪುರ:ದೇವಾಂಗ ಜನಾಂಗ-ಕುರುಹಿನಶೆಟ್ಟಿ ಜನಾಂಗ ದವರಿಂದ ಭಜನಾ ಕಾರ್ಯಕ್ರಮಕ್ಕೆ ಚಾಲನೆ

ಹೊಳೆನರಸೀಪುರ:ಪಟ್ಟಣದ ದೇವಾಂಗ ಜನಾಂಗದವರು ಕಳೆದ 7 ದಶಕಗಳಿಂದ ಧನುರ್ ಮಾಸದಲ್ಲಿ 1ತಿಂಗಳು ನಡೆಸುವ ಭಜನಾ ಕಾರ್ಯಕ್ರಮ ಧನುರ್ ಮಾಸದ ಪ್ರಾರಂಭ ದಿನವಾದ ಸೋಮವಾರ ಆರಂಭಗೊಂಡಿತು .

ಬೆಳಿಗ್ಗೆ 5.30 ಕ್ಕೆ ದೇವಾಂಗ ರಾಮಮಂದಿರದಿಂದ ಭಜನೆ ಹೊರಡುತ್ತದೆ. ತಬಲಾ ,ಹಾರ್ಮೋನಿಯಂ ತಾಳಗಳ ಜೊತೆಯಲ್ಲಿ ದೇವರನ ಮಗಳನ್ನು ಹಾಡುತ್ತಾ ಗರಡಗಂಭವನ್ನು ಹಿಡಿದು ಪ್ರತೀ ದಿನ ಪೇಟೆ ಸುಭಾಶ್ ವೃತ್ತದವರೆಗೂ ಹೋಗಿ ಬರುತ್ತಾರೆ.

ಅಲ್ಲಿಂದ ಕನ್ನಿಕಾ ಪರಮೇಶ್ವರಿ, ಚೌಡೇಶ್ವರಿ,ಬನಶಂಕರಿ ದೇವಾಲಯಗಳಲ್ಲಿ ಭಜನೆ ಮಾಡಿ ತೀರ್ಥ ಪ್ರಸಾದ ಪಡೆದು ಮತ್ತೆ ರಾಮಮಂದಿರದಲ್ಲಿ ಮಹಾ ಮಂಗಳಾರತಿ ನಂತರ 7.30 ರವೇಳೆಗೆ ಭಜನೆ ಮುಕ್ತಾಯ ಮಾಡುತ್ತಾರೆ.

ಭಜನೆ ಸಾಗುವ ಮಾರ್ಗದ ಅನೇಕ ಮನೆಗಳಲ್ಲಿ ಗರುಡಗಂಬಕ್ಕೆ ಪೂಜೆ ಮಾಡಿ ಭಕ್ತಿ ಸಮರ್ಪಿಸುತ್ತಾರೆ.ಕೆಲವರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಸಂಕ್ರಾತಿವರೆಗೂ ಭಜನೆಯ ಗರುಡಗಂಬಕ್ಕೆ ಪೂಜೆ ಸಲ್ಲಿಸುತ್ತೇನೆ ಎಂದು ಹರಕೆ ಹೊತ್ತು ತೀರಿಸುತ್ತಾರೆ.

ಪ್ರಾರಂಭದ ದಿನವಾದ ಸೋಮವಾರ ಎಚ್.ಎನ್. ವೆಂಕಟರಮಣಯ್ಯ ,ತಮ್ಮಣ್ಣಶೆಟ್ಟಿ ,ಎ. ಜಗನ್ನಾಥ್,ಎ.ಸೋಮಶೇಖರ್, ತಬಲಾ ರಾಮಣ್ಣ, ಹಾರ್ಮೋನಿಯಂ ಕಾಳಾಚಾರ್ ಹಾಡುಗಾರರಾದ ಚಂದ್ರ ,ನಾರಾಯಣ, ಈಶ್ವರ್,ಅರುಣ್,ಶಂಕರ್,ಮೋಹನ್,ರಾಘು ,ಮಂಜು,ಎಲೆಕ್ಟ್ರಿಕ್ ಕು ಮಾರ್, ಗೋಕುಲ್,ಎಚ್.ವಿ. ರವಿಕುಮಾರ್, ರವಿತಮ್ಮಣ್ಣ ಶೆಟ್ಟಿ, ಪ್ರಸನ್ನ ,ಕಿರಣ್ ಇತರರು ಭಾಗವಹಿಸಿದ್ದರು .

ಇದೇ ದಿನ ಕುರುಹಿನಶೆಟ್ಟಿ ಜನಾಂದವರೂ ಅವರ ರಾಮಮಂದಿರದಿಂದ ಭಜನೆ ಪ್ರಾರಂಭಿಸಿದರು .ಕುರುಹಿನಶೆಟ್ಟಿ ಜನಾಂಗವರ ಭಜನೆಯಲ್ಲಿ ಮಹಿಳೆಯರೂ ಭಜನೆ ಜೊತೆಯಲ್ಲಿ ಹೋಗುತ್ತಾರೆ.

———-ಸುಕುಮಾರ್

Leave a Reply

Your email address will not be published. Required fields are marked *

× How can I help you?