ಚನ್ನರಾಯಪಟ್ಟಣ/ಕೆ.ಆರ್.ಪೇಟೆ-ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಆರ್.ಟಿ.ಓ ಮಲ್ಲಿಕಾರ್ಜುನ್ ಆಯ್ಕೆ

ಚನ್ನರಾಯಪಟ್ಟಣ/ಕೆ.ಆರ್.ಪೇಟೆ-ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷರಾಗಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶ್ರೀ ಧರ್ಮಸ್ಥಳ ಸಂಘದ ಚನ್ನರಾಯಪಟ್ಟಣ ಜನಜಾಗೃತಿ ವೇದಿಕೆಯ ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕೆ ಆರ್.ಟಿ. ಓ ಮಲ್ಲಿಕಾರ್ಜುನ್ ರವರನ್ನು ಜಿಲ್ಲಾ ಜನಜಾಗೃತಿ ಸಮಿತಿಯ ಎಲ್ಲಾ ನಿರ್ದೇಶಕರು ಸರ್ವಾನುಮತದಿಂದ ಅನುಮೋದಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.

ಚನ್ನರಾಯಪಟ್ಟಣದಲ್ಲಿರುವ ಶ್ರೀ ಧರ್ಮಸ್ಥಳ ಜಿಲ್ಲಾ ಕಚೇರಿಯ ಸಭಾಂಗಣದಲ್ಲಿ ಪ್ರಾದೇಶಿಕ ನಿರ್ದೇಶಕ ಜಯರಾಮ್ ನಲ್ಲಿತಾಯಿ ಸಮ್ಮುಖದಲ್ಲಿ ಹಾಗೂ ಸರ್ವ ನಿರ್ದೇಶಕರ ಸಮ್ಮುಖದಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.

ನೂತನ ಅಧ್ಯಕ್ಷರನ್ನ ಅಭಿನಂದಿಸಿ ಮಾತನಾಡಿದ ಪ್ರಾದೇಶಿಕ ನಿರ್ದೇಶಕ ಜಯರಾಮ್ ನಲ್ಲಿತಾಯಿ, ಆರ್.ಟಿ.ಓ ಮಲ್ಲಿಕಾರ್ಜುನ್ ಪ್ರಸ್ತುತ ನಮ್ಮ ಜಿಲ್ಲಾ ಜನಜಾಗೃತಿಯ ಉಪಾಧ್ಯಕ್ಷರಾಗಿದ್ದರು.ಅವರ ಕ್ರಿಯಾಶೀಲತೆ ಸೇವಾ ಮನೋಭಾವನೆಯ ಸರಳತೆಯನ್ನು ಪರಿಗಣಿಸಿ ಎಲ್ಲಾ ನಿರ್ದೇಶಕರು ಸರ್ವಾನುಮತದ ಮೇರೆಗೆ ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.ಮಲ್ಲಿಕಾರ್ಜುನ್ ರವರು ಪ್ರಸ್ತುತ ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷರಾಗಿ ಸಮಾಜ ಸೇವೆಯಲ್ಲೂ ಹೆಸರು ಮಾಡಿರುವ ಅವರು ನಮ್ಮ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಚನ್ನರಾಯಪಟ್ಟಣ ಜಿಲ್ಲಾ ಜನಜಾಗೃತಿ ನೂತನ ಅಧ್ಯಕ್ಷರಾಗಿರುವುದು ನಿಜಕ್ಕೂ ಸಂತಸ ತಂದಿದೆ.

ಅವರ ಅಧ್ಯಕ್ಷತೆಯಲ್ಲಿ ಮಾನ್ಯ ಪೂಜ್ಯರಾದ ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯಲಿರುವ ಪ್ರತಿಯೊಂದು ಕಾರ್ಯಕ್ರಮಗಳು ಜನಸಾಮಾನ್ಯರಿಗೆ ತಲುಪುವ ನಿಟ್ಟಲ್ಲಿ ಇವರ ಕಾಯಕ ಸೇವೆ ಪ್ರಾಮಾಣಿಕವಾಗಿ ಮುಂದುವರಿಯಲಿ ಎಂದರು.

ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷರಾದ ಆರ್.ಟಿ.ಓ.ಮಲ್ಲಿಕಾರ್ಜುನ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಕೇವಲ ಧಾರ್ಮಿಕ ಕೇಂದ್ರವಾಗಿರದೇ,ಸಮಾಜ ಸುಧಾರಣೆ,ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಿದೆ.ಮಹಾತ್ಮಗಾಂಧಿ ಅವರ ಗ್ರಾಮ ಸ್ವರಾಜ್ಯದ ಕನಸು ವೀರೇಂದ್ರಹೆಗ್ಗಡೆ ಅವರಿಂದ ನನಸಾಗುತ್ತಿದೆ.ಯಾವುದೇ ಸಂಘ ಸಂಸ್ಥೆಗಳು ಮಾಡಲು ಸಾಧ್ಯವಾಗದೆ ಇರುವಂತಹ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ.ಸ್ವಸಹಾಯ ಸಂಘಗಳ ಮೂಲಕ ಜಿಲ್ಲೆಯಲ್ಲಿ ಹೈನುಗಾರಿಗೆ ಆಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಪುಣ್ಯ ಕ್ಷೇತ್ರದಲ್ಲಿ ನಿರ್ದೇಶಕರಾಗಿ,ಈಗ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿರುವುದೇ ನನ್ನ ಸೌಭಾಗ್ಯವಾಗಿದೆ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ನೂತನ ಉಪಾಧ್ಯಕ್ಷರನ್ನಾಗಿ ನಳಿನ, ಉಮೇಶ್, ಪುಟ್ಟಸ್ವಾಮಪ್ಪ, ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕ ಕೇಶವ್ ದೇವಾಂಗ, ಜಿಲ್ಲಾ ಅಧ್ಯಕ್ಷ ಜಯರಾಮ್ ತೋಟಿ , ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರುಗಳಾದ ಮೊಟ್ಟೆ ಮಂಜು, ಜ್ಯೋತಿ ದೇವರಾಜು, ಕೆ.ಆರ್.ರಾಜೇಶ್, ಪ್ರಸನ್ನಕುಮಾರ್, ಸುನಿತಾ, ಭಾರತಿ, ನಾರಾಯಣಗೌಡ, ಕುಮಾರ್, ಶಿವರಾಮು, ಸುಧಾ, ಶಾಲಿನಿ, ಚನ್ನೇಗೌಡ, ವಿರೂಪಾಕ್ಷ, ಜಗನಾಥ್, ಹರೀಣಾಕ್ಷಿ, ತಾಲೂಕು ಯೋಜನಾಧಿಕಾರಿಗಳಾದ ತಿಲಕ್ ರಾಜು, ಪ್ರಸಾದ್, ಸೂರ್ಯನಾರಾಯಣ, ಸದಾಶಿವ ಕುಲಾಲ್, ಪುರಸಭಾ ಸದಸ್ಯ ಡಿ ಪ್ರೇಮ್ ಕುಮಾರ್, ಬಳ್ಳೆಕೆರೆ ಮಂಜುನಾಥ್, ಕೆ.ಆರ್.ನೀಲಕಂಠ, ಕಿಕ್ಕೇರಿ ಬಲರಾಮ್, ಹೆಚ್.ಬಿ.ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

————–——ಶ್ರೀನಿವಾಸ್ ಆರ್

Leave a Reply

Your email address will not be published. Required fields are marked *

× How can I help you?