ಹೊಳೆನರಸೀಪುರ:ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಪ್ರತಿನಿಧಿಗಳನ್ನು ಭಾನುವಾರ ಸಂಜೆ ಸಂಸದ ಶ್ರೇಯಶ್ ಪಟೆಲ್ ತಮ್ಮ ನಿವಾಸದಲ್ಲಿ ಶಾಲು ಹೊದಿಸಿ ಅಭಿನಂದಿಸಿದರು.
ಕಾರ್ಯಕಾರಿ ಸಮಿತಿಯಲ್ಲಿ 404 ಸದಸ್ಯರಿದ್ದು ಅದರಲ್ಲಿ 250ಮತದಾರರು ಮತಚಲಾಯಿಸಿದ್ದರು.ಹೊಯ್ಸಳ ಎಸ್.ಅಪ್ಪಾಜಿ, ಕೆ.ಅಶೋಕ್, ಉಮೇಶ್,ಕುಮಾರ್,ಆರ್.ಗಿರೀಶ್,ಎನ್,ಆರ್, ದಿವಾಕರ, ಕೆ.ಧನಂಜಯ, ಟಿ.ನಂಜುಂಡೇಗೌಡ,ಎಂ.ಸಿ.ಲಕ್ಷ್ಮೇಗೌಡ ,ಲೋಕೇಶ್, ಕೆ.ಎನ್.ವಿಜಯಕುಮಾರ್ ,ಎಂ.ಹಲಗಪ್ಪ ,ಎಂ.ಎನ್,ರಾಜು,ಜಿ.ಎಸ್.ಶೇಖರ್, ಕೆ.ಕುಮಾರಸ್ವಾಮಿ ಚುನಾಯಿತರಾದರು.
ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಎಚ್.ಸಪ್ನಾ,ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು .ಕೃಷಿ ಇಲಾಖೆಯ ತೀರ್ಥ ಪ್ರಸಾದ್,ಎ.ಎಸ್.ಕೋಕಿಲಾ,ಚುನಾವಣಾಧಿಕಾರಿಗೆ ಸಹಕರಿಸಿದರು.
——–——-ಸುಕುಮಾರ್